ಪಂಜಾಬಿನ ಗುರ್ದಾಸ್ಪುರ್ ನಿಂದ ಸನ್ನಿ ಡಿಯೋಲ್ ಸ್ಪರ್ಧೆ

ಅಮೃತ್ ಸರ್, ಏಪ್ರಿಲ್ 23: ನಟ ಸನ್ನಿ ಡಿಯೋಲ್ ಅವರು ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷ(ಬೆಜೆಪಿ)ವನ್ನು ಸೇರಿಕೊಂಡಿದ್ದು, ಓದಿರಬಹುದು. ಸಂಜೆ ವೇಳೆಗೆ ಬಿಜೆಪಿ ತನ್ನ 26ನೇ ಪಟ್ಟಿಯನ್ನು ಪ್ರಕಟಿಸಿದ್ದು, ಸನ್ನಿಗೂ ಟಿಕೆಟ್ ಸಿಕ್ಕಿದೆ. ಇನ್ನು ಚಂದೀಗಢದಿಂದ ಕಿರಣ್ ಖೇರ್ ಹಾಗೂ ಪಂಜಾಬಿನ ಹೋಶಿಯಾರ್ ಪುರ್ ನಿಂದ ಸೋಮ್ ಪ್ರಕಾಶ್ ಅವರನ್ನು ಕಣಕ್ಕಿಳಿಸಲಾಗಿದೆ.

ಲೋಕಸಭಾ ಚುನಾವಣೆ 2019

ಸನ್ನಿ ಡಿಯೋಲ್ ಅವರು ಗುರ್ ದಾಸ್ಪುರ್ ಅಥವಾ ಅಮೃತಸರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಗಳು ಕಂಡು ಬಂದಿತ್ತು. ಕೊನೆಗೆ ಗುರ್ ದಾಸ್ಪುರ್ ನಿಂದ ಸ್ಪರ್ಧಿಸುವಂತೆ ಟಿಕೆಟ್ ನೀಡಲಾಗಿದೆ.

ಪಂಜಾಬಿನ ಈ ಕ್ಷೇತ್ರವನ್ನು ಹಿರಿಯ ನಟ ವಿನೋದ್ ಖನ್ನಾ ಪ್ರತಿನಿಧಿಸುತ್ತಿದ್ದರು. 2017ರಲ್ಲಿ ವಿನೋದ್ ಖನ್ನಾ ಅವರ ಮರಣ ನಂತರ ಅವರ ಪತ್ನಿ ಕವಿತಾ ಖನ್ನ ಅಥವಾ ಅಕ್ಷಯ್ ಖನ್ನಾ ಅವರನ್ನು ಕರೆ ತರುವ ಸುದ್ದಿ ಹಬ್ಬಿತ್ತು. ಆದರೆ, ಈಗ 62 ವರ್ಷ ವಯಸ್ಸಿನ ಸನ್ನಿ ಡಿಯೋಲ್ ಗೆ ಟಿಕೆಟ್ ಸಿಕ್ಕಿದೆ

Elections 2019 : Actor Sunny Deol to contest from Gurdaspur

ಪಂಜಾಬಿನಲ್ಲಿ ಶಿರೋಮಣಿ ಅಕಾಲಿ ದಳದ ಜತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಒಟ್ಟು 13 ಲೋಕಸಭಾ ಸ್ಥಾನಗಳ ಪೈಕಿ ಅಮೃತಸರ್, ಗುರ್ ದಾಸ್ಪುರ್, ಹೋಶಿಯಾರ್ ಪುರ್ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಅಮೃತಸರ ಕ್ಷೇತ್ರಕ್ಕೆ ನಟಿ ಪೂನಂ ದಿಲ್ಲೋನ್ ಹಾಗೂ ರಾಜಿಂದರ್ ಸಿಂಗ್ ಹೆಸರು ಕೂಡ ಕೇಳಿ ಬಂದಿದೆ. ಅಮೃತಸರ ಕ್ಷೇತ್ರಕ್ಕೆ ನಟಿ ಪೂನಂ ದಿಲ್ಲೋನ್ ಹಾಗೂ ರಾಜಿಂದರ್ ಸಿಂಗ್ ಹೆಸರು ಕೂಡ ಕೇಳಿ ಬಂದಿದೆ.

ವಿಶೇಷ ಪುಟ

ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಪಡೆದ ಬಳಿಕ ಮಾತನಾಡಿದ ಸನ್ನಿ ಡಿಯೋಲ್, ನನ್ನ ತಂದೆಯವರು ಅಟಲ್ ಜೀ ಬೆಂಬಲಿಸಿ, ಅವರೊಂದಿಗೆ ಕಾರ್ಯನಿರ್ವಹಿಸಿದ್ದರು. ಈಗ ನಾನು ಮೋದಿ ಜೀ ಜತೆ ಕಾರ್ಯನಿರ್ವಹಿಸಲು ಬಯಸಿದ್ದೇನೆ ಎಂದಿದ್ದರು

ಘಾಯಲ್, ಗದರ್ ಎಕ್ ಪ್ರೇಮ್ ಕಥಾ, ದಾಮಿನಿ, ಬಾರ್ಡರ್ ಚಿತ್ರಗಳ ಅಭಿನಯಕ್ಕಾಗ ಹೆಸರುವಾಸಿ. ಪಂಜಾಬ್ ನಲ್ಲಿ ಮೇ 19ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇದು ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ಪ್ರಕ್ರಿಯೆಯಾಗಿದೆ. ಮೇ 23ರಂದು ಫಲಿತಾಂಶ ಹೊರಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+