ಚುಟುಕು ಸುದ್ದಿ: 'ಮೋದಿ ಮಾತು ನಿಜವಾದರೆ ಸನ್ಯಾಸ'

ಬೆಂಗಳೂರು, ಮೇ.2: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

11.55: ನರೇಂದ್ರ ಮೋದಿ ಅವರ ಹೇಳಿಕೆಗಳು ನಿಜ ಎಂದು ಸಾಬೀತಾದರೆ ನಾನು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ: ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್
11.30: ನಾನು ಯಾವತ್ತೂ ಮೋದಿ ಅವರಿಂದ ರಾಜಕೀಯವಾಗಲಿ, ವೈಯಕ್ತಿಕವಾಗಲಿ ಕೊಡುಗೆಗಳನ್ನು ಪಡೆದಿಲ್ಲ ಎಂದು ಅಹ್ಮದ್ ಪಟೇಲ್ ಹೇಳಿಕೆ
10.45:
ದೂರದರ್ಶನಕ್ಕೆ ನರೇಂದ್ರ ಮೋದಿ ಅವರು ನೀಡಿದ ಸಂದರ್ಶನ ಈಗ ವಿವಾದಕ್ಕೆ ನಾಂದಿ ಹಾಡಿದೆ. ಈ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ನನ್ನ ಮಗಳಿದ್ದಂತೆ ಎಂದು ಮೋದಿ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ಅಲ್ಲಗೆಳೆದಿರುವ ಮೋದಿ ಡಿಡಿ ಸಂದರ್ಶನದ ವಿಡಿಯೋ ಪ್ರಕಟಿಸಿದ್ದಾರೆ.
10.30: ಮೋದಿ ಅವರು ಸಂದರ್ಶನವೊಂದರಲ್ಲಿ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್ ಅವರನ್ನು ಹೊಗಳಿದ್ದಾರೆ ಎನ್ನಲಾಗಿಎ. ಬಾಬು ಭಾಯಿ, ಮಿಯಾ ಪಟೇಲ್ ಎಂದು ಆತ್ಮೀಯವಾಗಿ ಮೋದಿ ಅವರು ಆಹ್ಮದ್ ಅವರನ್ನು ಕರೆಯುತ್ತಿದ್ದರಂತೆ.
10.00: ಕಪ್ಪು ಹಣ ಕೇಸ್ ತನಿಖೆ ಮಾಡಲು ಸುಪ್ರೀಂಕೋರ್ಟ್ ಸಮಿತಿಯನ್ನು ನೇಮಿಸಿದೆ. [ಮುಂದೆ ಓದಿ]

Elections 2014 : News in Brief on May 02

9.45: ನಾನೇನು ಮೋದಿಯಂತೆ ನನ್ನ ಪತ್ನಿಯನ್ನು ಬಚ್ಚಿಟ್ಟಿಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ.
9.30: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರಕ್ಕೆ ಏಳು ಜನ ಬಲಿ, 740ಕ್ಕೂ ಅಧಿಕ ಜನರಿಗೆ ಗಾಯ.
9.15: ನರೇಂದ್ರ ಮೋದಿ ಅವರು ಶುಕ್ರವಾರ ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.
9.10: ರಾಹುಲ್ ಗಾಂಧಿ ಅವರು ಅಮೇಥಿಯಲ್ಲಿ ಮೇ 3-4 ರಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+