ಚುಟುಕು: ನಟ ಪರೇಶ್ ರಾವಲ್ ನಾಮಪತ್ರ ಸಲ್ಲಿಕೆ

ಬೆಂಗಳೂರು, ಏ.7: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

5.30: ನಟ ಪರೇಶ್ ರಾವಲ್ ಅವರು ನರೇಂದ್ರ ಮೋದಿ ಅವರ ಬೆಂಬಲದೊಂದಿಗೆ ಅಹಮದಾಬಾದ್(ಪೂರ್ವ) ಕ್ಷೇತ್ರದಿಂ ದ ಸ್ಪರ್ಧೆಗಿಳಿದಿದ್ದು, ಸೋಮವಾರ ನಾಮಪತ್ರ ಸಲ್ಲಿಸಿದರು. ಈ ಹಿಂದೆ ನಟ ಅಕ್ಷಯ್ ಕುಮಾರ್ ಹಾಗೂ ಪರೇಶ್ ರಾವಲ್ ಅವರು ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

4.45: ಬಿಜೆಪಿ ಪ್ರಣಾಳಿಕೆ ಮತಗಳ ಧ್ರುವೀಕರಣಕ್ಕೆ ಕಾರಣವಾಗಲಿದೆ. ಆರೆಸ್ಸೆಸ್ ನ ತತ್ತ್ವಗಳು ಗಾಢವಾಗಿ ಕಾಣುತ್ತಿದೆ ಎಂದು ಸಿಪಿಐ ನಾಯಕ ಗುರುದಾಸ್ ದಾಸ್ ಗುಪ್ಪ ಹೇಳಿಕೆ.

Paresh Rawal

4.30: ಅಸ್ಸಾಂನ ಐದು ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 33 ಎಲೆಕ್ಟ್ರಾನಿಕ್ ಮತಯಂತ್ರಗಳು ದೋಷರೂಪಿತವಾಗಿರುವುದು ಕಂಡು ಬಂದಿದೆ.

3.30: ಚುನಾವಣೆ ನಂತರ ಬಿಜೆಪಿ ಜತೆ ಬಿಜು ಜನತಾ ದಳ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕಂಡು ಬಂದಿದೆ.

11.25: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಕರ್ನಾಟಕದಲ್ಲಿ ಮೂರು ಸಾರ್ವಜನಿಕ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
11.00: ಮೋದಿ ಆಪ್ತ ಅಮಿತ್ ಶಾ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ. ದ್ವೇಷ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಬಿಜ್ನೋರ್ ನಲ್ಲಿ ಮೊದಲ ಎಫ್ ಐಆರ್ ದಾಖಲಾಗಿತ್ತು.

Here are the top news in brief for April 07, Monday

10.45: ಮೊದಲ ಹಂತದ ಲೋಕಸಭ ಚುನಾವಣೆಗೆ ಮತದಾನ ಅಸ್ಸಾಂನ ಹಾಗೂ ತ್ರಿಪುರದಲ್ಲಿ ಶಾಂತಿಯುತವಾಗಿ ಸಾಗಿದೆ.
10.15: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ 3ಡಿ ಸಮಾವೇಶದ ನೇರ ಪ್ರಸಾರ ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ಕಾಣಬಹುದು.
10.00: ಸೋನಿಯಾ ಗಾಂಧಿ ಕೇರಳದ ಕೋಳಿಕ್ಕಾಡ್ ನಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

9.30: ಕೆಲ ದಿನಗಳ ವಿಳಂಬದ ನಂತರ ಬಿಜೆಪಿ ಸೋಮವಾರ ತನ್ನ ಪ್ರಣಾಳಿಕೆ ಪ್ರಕಟಿಸಿದೆ.
9.00: ಮೋದಿ ಅವರು ಕಾಸರಗೋಡಿಗೆ ಆಗಮಿಸಲಿದ್ದಾರೆ. ಕಾಂಗ್ರೆಸ್ ಜಿಲ್ಲಾ ಕಾರ್ಯಕರ್ತರು ಹೆಲಿಪ್ಯಾಡ್ ಧ್ವಂಸಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+