ಚುಟುಕು: ವಿಕೆ ಸಿಂಗ್ ವಿರುದ್ಧ ರಾಜ್ ಬಬ್ಬರ್ ಅಬ್ಬರ

ಬೆಂಗಳೂರು, ಏ.1: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ. ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.

12.50: ಗಾಜಿಯಾಬಾದಿನ ಕಾಂಗ್ರೆಸ್ ಅಭ್ಯರ್ಥಿ ಆ ಕಾಲದ ನಟ ರಾಜ್ ಬಬ್ಬರ್ ಅವರು ಮಾಜಿ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ವಿರುದ್ಧ ಅಬ್ಬರಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಸಿಂಗ್ ಅವರು ರಾಜ್ ಬಬ್ಬರ್ ಅವರು ಮತಗಳನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಆರೋಪ ಸಾಬೀತುಪಡಿಸುವಂತೆ ಬಬ್ಬರ್ ಅಬ್ಬರಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

12.30: ವಾರಣಾಸಿಯಲ್ಲಿ ಅರವಿಂದ್ ಕೇಜ್ರಿವಾಲ್ ಹಾಗೂ ನರೇಂದ್ರ ಮೋದಿ ವಿರುದ್ಧ 60 ವರ್ಷ ವಯಸ್ಸಿನ ಕಮಲಾ ಹೆಸರಿನ ಮಂಗಳಮುಖಿ ಸ್ಪರ್ಧೆಗಿಳಿಯುವುದಾಗಿ ಘೋಷಿಸಿದ್ದಾರೆ.

12.15: ಕಾಂಗ್ರೆಸ್ ನಾಯಕಿ ಪ್ರಿಯಾ ದತ್ ಅವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.

Raj Babbar

11.45: ಬಿಹಾರದ ಕಿಶನ್ ಗಂಜ್ ಲೋಕಸಭಾ ಕ್ಷೇತ್ರದಲ್ಲಿ ಒಂದು ಕುಟುಂಬ ಎಲ್ಲರ ಗಮನ ಸೆಳೆದಿದೆ. ಆ ಕುಟುಂಬದಲ್ಲಿ 48 ಜನ ಮತದಾರರಿದ್ದಾರೆ.

11.15: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಬಪ್ಪಿ ಲಹಿರಿ ಅವರು ಓ ಲಾಲ ಲಾ.. ಐಯಾಮ್ ಎ ಡಿಸ್ಕೋ ಡ್ಯಾನ್ಸರ್ ಮುಂತಾದ ತಮ್ಮ ಜನಪ್ರಿಯ ಗೀತೆಗಳ ಮೂಲಕ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.

10.40: ಗುಜರಾತಿನಲ್ಲಿ ಎಲ್ ಕೆ ಅಡ್ವಾಣಿ ವಿರುದ್ಧ ಆಮ್ ಆದ್ಮಿ ಪಕ್ಷದಿಂದ ರಿಯಲ್ ಎಸ್ಟೇಟ್ ಉದ್ಯಮಿ ಕಣಕ್ಕಿಳಿಯುವ ಸಾಧ್ಯತೆ ಕಂಡು ಬಂದಿದೆ.
10.20: ವಾರಣಾಸಿಯಲ್ಲಿ ಪಿ. ಚಿದಂಬರಂ ಸ್ಪರ್ಧೆಗಿಳಿಯದಿರಲು ಕಾರಣ ಅವರಿಗೆ ಹಿಂದಿ ಭಾಷಾ ಜ್ಞಾನ ಕಡಿಮೆ ಇರುವುದೇ ಆಗಿದೆ ಎನ್ನಲಾಗಿದೆ.
10.00: ಅಟಲ್ ಬಿಹಾರಿ ವಾಜಪೇಯಿಗೆ ಹೋಲಿಸಿದರೆ ನರೇಂದ್ರ ಮೋದಿ ಉತ್ತಮ ವಾಗ್ಮಿ, ಭಾಷಣಕಾರರಲ್ಲ: ಉಮಾಭಾರತಿ.

Elections 2014 : News in Brief on April 01

9.45: ಆಂಧ್ರಪ್ರದೇಶದಲ್ಲಿ ಕೊನೆಗೂ ಒಂದಾದ ಬಿಜೆಪಿ-ಟಿಡಿಪಿ. ಚುನಾವಣಾ ಪೂರ್ವ ಮೈತ್ರಿಗೆ ಟಿಡಿಪಿ ಚಂದ್ರಬಾಬು ನಾಯ್ಡು ಒಪ್ಪಿಗೆ
9.00: ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿ ಸ್ಪರ್ಧೆ.
8.30: ಏ.1ಕ್ಕೆ ಮೋದಿ ಚುನಾವಣೆ ಕಚೇರಿ ಆರಂಭಗೊಳ್ಳಲಿದೆ, ಮೋದಿ ಆಪ್ತ ಅಮಿತ್ ಶಾ ಅವರು ಉದ್ಘಾಟನೆ ಮಾಡಲಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+