Explained: ಪಂಚರಾಜ್ಯಗಳಿಗೆ ಒಟ್ಟು ಏಳು ಹಂತಗಳಲ್ಲಿ ಚುನಾವಣೆ: ಇಲ್ಲಿದೆ ಸಂಪೂರ್ಣ ವಿವರಣೆ

ನವದೆಹಲಿ, ಜನವರಿ 8: ದೇಶದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ಸುಶೀಲ್ ಚಂದ್ರ, ಪಂಚರಾಜ್ಯಗಳ ಚುನಾವಣೆ, ನಾಮಪತ್ರ ಸಲ್ಲಿಕೆ, ನಾಮಪತ್ರ ಮರುಪರಿಶೀಲನೆ, ನಾಮಪತ್ರ ವಾಪಸ್, ಮತದಾನ ಹಾಗೂ ಫಲಿತಾಂಶದ ದಿನಾಂಕವನ್ನು ಪ್ರಕಟಿಸಿದ್ದಾರೆ.

Election Commission Press Conference on Assembly Election 2022 Schedule Highlights and Key Details in Kannada

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರ, ಗೋವಾದ 40 ವಿಧಾನಸಭೆ ಕ್ಷೇತ್ರ, ಪಂಜಾಬ್ 117 ವಿಧಾನಸಭೆ ಕ್ಷೇತ್ರ, ಉತ್ತರಾಖಂಡ 70 ವಿಧಾನಸಭೆ ಕ್ಷೇತ್ರ ಮತ್ತು ಮಣಿಪುರದ 60 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪಂಚರಾಜ್ಯ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶಗಳನ್ನು ಮುಂದೆ ಪಟ್ಟಿ ಮಾಡಲಾಗಿದೆ.

ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಪ್ರಮುಖ ಅಂಶಗಳು:
* ಒಮಿಕ್ರಾನ್ ರೂಪಾಂತರದ ದೃಷ್ಟಿಯಿಂದ ಕೊವಿಡ್-19 ಪ್ರಕರಣಗಳು ಹೆಚ್ಚಾದಂತೆ, ECI ಕೇಂದ್ರ ಆರೋಗ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ, ತಜ್ಞರು ಮತ್ತು ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳ ಜೊತೆ ಸಭೆಗಳನ್ನು ನಡೆಸಿತು. ಈ ವೇಳೆ ರಾಜ್ಯಗಳಲ್ಲಿ ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಂಡ ನಂತರ, ECI ಸುರಕ್ಷತಾ ಮಾನದಂಡಗಳೊಂದಿಗೆ ಚುನಾವಣೆ ಘೋಷಿಸಲು ನಿರ್ಧರಿಸಿತು.
* ಪಂಚರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕೊವಿಡ್-19 ಹೊಸ ಶಿಷ್ಟಾಚಾರ ಮತ್ತು ನಿಯಮಗಳ ಪಾಲನೆಗೆ ಸೂಚನೆ
* ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕೊರೊನಾವೈರಸ್ ಸುರಕ್ಷತೆಗೆ ಮೊದಲ ಆದ್ಯತೆ
* ಸೇವಾ ಮತದಾರರು ಸೇರಿದಂತೆ ಒಟ್ಟು 18.34 ಕೋಟಿ ಮತದಾರರು ಈ ಚುನಾವಣೆಯಲ್ಲಿ ಭಾಗವಹಿಸಲಿದ್ದು, 8.55 ಕೋಟಿ ಮಹಿಳಾ ಮತದಾರರಿದ್ದಾರೆ. ಈ ಬಾರಿ 24.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದಾರೆ.
* ಒಂದು ಮತಗಟ್ಟೆಯಲ್ಲಿ ಮತದಾನ ಮಾಡುವ ಮತಾದಾರರ ಸಂಖ್ಯೆಯನ್ನು ಕಡಿತಗೊಳಿಸಲಾಗಿದೆ. * ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಮಹಿಳೆಯರಿಗಾಗಿ ಹಾಗೂ ಮಹಿಳೆಯರಿಂದ ಪ್ರತ್ಯೇಕವಾಗಿ ನಿರ್ವಹಿಸಲ್ಪಡುವ ಕನಿಷ್ಠ ಒಂದು ಮತಗಟ್ಟೆ ಸ್ಥಾಪಿಸಬೇಕು. ನಮ್ಮ ಅಧಿಕಾರಿಗಳು ಅದಕ್ಕಿಂತ ಹೆಚ್ಚಿನ ಮತಗಟ್ಟೆಗಳನ್ನು ಸ್ಥಾಪಿಸಿದ್ದಾರೆ, ಒಟ್ಟು 690 ವಿಧಾನಸಭಾ ಸ್ಥಾನಗಳಿದ್ದು, ನಾವು 1,620 ಮತಗಟ್ಟೆಗಳನ್ನು ಸ್ಥಾಪಿಸುತ್ತಿದ್ದೇವೆ.
* 80 ವರ್ಷ ಮೇಲ್ಪಟ್ಟವರು, ವಿಕಲಚೇತರು ಹಾಗೂ ಕೊವಿಡ್-19 ಸೋಂಕಿತರು ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡುವುದಕ್ಕೆ ಅವಕಾಶ
* ಎಲ್ಲಾ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್‌ಗಳನ್ನು ಬಳಸಲಾಗುವುದು. ಚುನಾವಣೆ ಸುಗಮವಾಗಿ ನಡೆಸಲು ಚುನಾವಣಾ ಆಯೋಗವು ಈಗಾಗಲೇ ಸಾಕಷ್ಟು ಸಂಖ್ಯೆಯ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳ ವ್ಯವಸ್ಥೆ ಮಾಡಿಕೊಂಡಿದೆ.
* ಚುನಾವಣಾ ಅಭ್ಯರ್ಥಿಗಳಾಗಿ ಆಯ್ಕೆಯಾದ ವ್ಯಕ್ತಿಯ ಹಿನ್ನೆಲೆ ಅವರ ಮೇಲಿರುವ ಕ್ರಿಮಿನಲ್ ಪ್ರಕರಣ ಮತ್ತು ಬಾಕಿ ಇರುವ ಪ್ರಕರಣಗಳ ಬಗ್ಗೆ ವಿವರವಾದ ಮಾಹಿತಿಯನ್ನು ರಾಜಕೀಯ ಪಕ್ಷಗಳು ತಮ್ಮ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ಅವರು ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾರಣವನ್ನು ಸಹ ನೀಡಬೇಕಾಗುತ್ತದೆ.
* ನಮ್ಮ cVIGIL ಅಪ್ಲಿಕೇಶನ್ ಅನ್ನು ಮತದಾರರು ಮಾದರಿ ನೀತಿ ಸಂಹಿತೆಯ ಉಲ್ಲಂಘನೆ, ಹಣ ಮತ್ತು ಉಚಿತಗಳ ವಿತರಣೆಯ ಯಾವುದೇ ಘಟನೆಯನ್ನು ವರದಿ ಮಾಡಲು ಬಳಸಬೇಕು. ದೂರಿನ 100 ನಿಮಿಷಗಳಲ್ಲಿ, ECI ಅಧಿಕಾರಿಗಳು ಅಪರಾಧದ ಸ್ಥಳಕ್ಕೆ ತಲುಪುತ್ತಾರೆ.

ಕೊವಿಡ್-19 ಸುರಕ್ಷತೆಗಳೊಂದಿಗೆ ಪಂಚರಾಜ್ಯ ಚುನಾವಣೆ:
* ಪಂಚರಾಜ್ಯ ಚುನಾವಣಾ ಸಂದರ್ಭದಲ್ಲಿ ಎಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ನೌಕರರನ್ನು ಮುಂಚೂಣಿಯ ಕಾರ್ಯಕರ್ತರು ಎಂದು ಪರಿಗಣಿಸಲಾಗುತ್ತದೆ. ಎಲ್ಲಾ ಅರ್ಹ ಅಧಿಕಾರಿಗಳಿಗೆ 'ಮುನ್ನೆಚ್ಚರಿಕೆಯ ಡೋಸ್' ಲಸಿಕೆ ನೀಡಲಾಗುತ್ತದೆ.

ಕೇಂದ್ರ ಚುನಾವಣಾ ಆಯೋಗದಿಂದ ಕಠಿಣ ನಿಯಮ:
* ಜನವರಿ 15 ರವರೆಗೆ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಅಥವಾ ಚುನಾವಣೆಗೆ ಸಂಬಂಧಿಸಿದ ಯಾವುದೇ ಇತರ ಗುಂಪುಗಳು ಭೌತಿಕ ಮೆರವಣಿಗಳಿಗೆ ಅನುಮತಿಸಲಾಗುವುದಿಲ್ಲ. ECI ನಂತರ ಪರಿಸ್ಥಿತಿಯನ್ನು ಪರಿಶೀಲಿಸಬೇಕು ಮತ್ತು ಅದಕ್ಕೆ ಅನುಗುಣವಾಗಿ ಹೆಚ್ಚಿನ ಸೂಚನೆಗಳನ್ನು ನೀಡಬೇಕು
* ಜನವರಿ 15 ರವರೆಗೆ ಯಾವುದೇ ರೋಡ್‌ಶೋಗಳು, ಪಾದಯಾತ್ರೆಗಳು, ಸೈಕಲ್ ಅಥವಾ ಬೈಕ್ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಅನುಮತಿಸಲಾಗುವುದಿಲ್ಲ; ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು ಮತ್ತು ನಂತರ ಹೊಸ ಸೂಚನೆಗಳನ್ನು ನೀಡಲಾಗುವುದು
* ಬೆಳಗ್ಗೆ 8 ಗಂಟೆಗೂ ಮೊದಲು ರಾತ್ರಿ 8 ಗಂಟೆ ನಂತರ ಯಾವುದೇ ರೀತಿ ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸುವುದಕ್ಕೆ ಅವಕಾಶವಿಲ್ಲ
* ವಿಧಾನಸಭೆ ಫಲಿತಾಂಶದ ನಂತರದಲ್ಲಿ ಯಾವುದೇ ರೀತಿ ವಿಜಯೋತ್ಸವವನ್ನು ನಡೆಸುವಂತಿಲ್ಲ

ಪಂಚರಾಜ್ಯಗಳಿಗೆ ಚುನಾವಣೆ ಘೋಷಿಸಿದ ಆಯೋಗ:
* 7 ಹಂತಗಳಲ್ಲಿ ಪಂಚರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಅಂತಿಮ ಫಲಿತಾಂಶ ಹೊರಬೀಳಲಿದೆ. ಏಳು ಹಂತಗಳ ಚುನಾವಣೆ ಪ್ರಕ್ರಿಯೆ ಕುರಿತು ವಿಸ್ತೃತ ಮಾಹಿತಿಗಾಗಿ ಮುಂದೆ ಓದಿ.

ಮೊದಲ ಹಂತದ ಚುನಾವಣೆ: ಉತ್ತರ ಪ್ರದೇಶ
ಜನವರಿ 14ರಂದು ಅಧಿಸೂಚನೆ
ಜನವರಿ 21ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಜನವರಿ 24ರಂದು ನಾಮಪತ್ರ ಮರುಪರಿಶೀಲನೆ
ಜನವರಿ 27 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 10ರಂದು ಮತದಾನ

ಎರಡನೇ ಹಂತದ ಮತದಾನ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ
ಜನವರಿ 21ರಂದು ಅಧಿಸೂಚನೆ
ಜನವರಿ 28ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಜನವರಿ 29ರಂದು ನಾಮಪತ್ರ ಮರುಪರಿಶೀಲನೆ
ಜನವರಿ 31 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 14ರಂದು ಮತದಾನ

ಮೂರನೇ ಹಂತದ ಮತದಾನ: ಉತ್ತರ ಪ್ರದೇಶ 3,
ಜನವರಿ 25ರಂದು ಅಧಿಸೂಚನೆ
ಫೆಬ್ರವರಿ 1ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 2ರಂದು ನಾಮಪತ್ರ ಮರುಪರಿಶೀಲನೆ
ಜನವರಿ 4 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 20ರಂದು ಮತದಾನ

ನಾಲ್ಕನೇ ಹಂತದ ಮತದಾನ: ಉತ್ತರ ಪ್ರದೇಶ
ಜನವರಿ 27ರಂದು ಅಧಿಸೂಚನೆ
ಫೆಬ್ರವರಿ 3ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 4ರಂದು ನಾಮಪತ್ರ ಮರುಪರಿಶೀಲನೆ
ಜನವರಿ 7 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 23ರಂದು ಮತದಾನ

ಐದನೇ ಹಂತದ ಮತದಾನ: ಉತ್ತರ ಪ್ರದೇಶ
ಫೆಬ್ರವರಿ 1ರಂದು ಅಧಿಸೂಚನೆ
ಫೆಬ್ರವರಿ 8ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 9ರಂದು ನಾಮಪತ್ರ ಮರುಪರಿಶೀಲನೆ
ಜನವರಿ 11 ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಫೆಬ್ರವರಿ 27ರಂದು ಮತದಾನ

ಆರನೇ ಹಂತದ ಮತದಾನ: ಉತ್ತರ ಪ್ರದೇಶ
ಫೆಬ್ರವರಿ 4ರಂದು ಅಧಿಸೂಚನೆ
ಫೆಬ್ರವರಿ 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 14ರಂದು ನಾಮಪತ್ರ ಮರುಪರಿಶೀಲನೆ
ಜನವರಿ 16ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಮಾರ್ಚ್ 3ರಂದು ಮತದಾನ

ಏಳನೇ ಹಂತದ ಮತದಾನ: ಉತ್ತರ ಪ್ರದೇಶ
ಫೆಬ್ರವರಿ 10ರಂದು ಅಧಿಸೂಚನೆ
ಫೆಬ್ರವರಿ 17ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಫೆಬ್ರವರಿ 18ರಂದು ನಾಮಪತ್ರ ಮರುಪರಿಶೀಲನೆ
ಜನವರಿ 21ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನ
ಮಾರ್ಚ್ 7ರಂದು ಮತದಾನ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+