Rajkumar Rao: ಭಾರತೀಯ ಚುನಾವಣೆ ಆಯೋಗದ 'ಐಕಾನ್' ರಾಜಕುಮಾರ್ ರಾವ್, ಆಯ್ಕೆ
ನವದೆಹಲಿ, ಅಕ್ಟೋಬರ್ 26: ದೇಶದ ವಿವಿಧೆಡೆ ವಿಧಾನಸಭಾ ಚುನಾವಣೆಗಳು ಎದುರಾಗಲಿವೆ. ಈ ಸಂಬಂಧ ಮತದಾರರ ಶಿಕ್ಷಣ ಮತ್ತು ಮತದಾನವನ್ನು ಉತ್ತೇಜಿಸಲು ನಟ ರಾಜ್‌ಕುಮಾರ್ ರಾವ್ ಅವರನ್ನು ತನ್ನ 'ರಾಷ್ಟ್ರೀಯ ಐಕಾನ್' ಎಂದು ಭಾರತೀಯ ಚುನಾವಣಾ ಆಯೋಗ ಘೋಷಣೆ ಮಾಡಿದೆ.
ರಾಷ್ಟ್ರ ರಾಜಧಾನಿಯ ಆಕಾಶವಾಣಿ ಭವನದಲ್ಲಿ ಚುನಾವಣಾ ಸಂಸ್ಥೆಯೊಂದಿಗೆ ನಟ ರಾಜಕುಮಾರ್ ರಾವ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಚಲನಚಿತ್ರೋದ್ಯಮವು ನನಗೆ ಏಕತೆ ಮತ್ತು ವೈವಿಧ್ಯತೆಯ ಮೌಲ್ಯ ಕಲಿಸಿದೆ. ಸಾಮರಸ್ಯದ ರಾಷ್ಟ್ರವನ್ನು ರಚಿಸಲು ವಿವಿಧ ಧ್ವನಿಗಳಿಂದ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತದೆ. ಇಂದು ನಾನು ಮತದಾನದ ಪ್ರಜಾಪ್ರಭುತ್ವದ ಪ್ರಮುಖ ಅಂಶವನ್ನು ಉತ್ತೇಜಿಸಲಿದ್ದೇನೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು.

ನಾನು ಪ್ರಜಾಪ್ರಭುತ್ವ ಮತದಾನದ ಮಹತ್ವನ್ನು ನಂಬುತ್ತೇನೆ. ಚುನಾವಣೆಗಳನ್ನು ನಡೆಸುವುದು ಎಷ್ಟು ಕಷ್ಟ ಎಂಬುದು ತಿಳಿದಿದೆ ಎಂದು ತಾವು ಮಾಡಿದ್ದ ಚಲನಚಿತ್ರದ ಕುರಿತು ತಿಳಿಸಿದರು. ಆ ಚಿತ್ರಕ್ಕಾಗಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟಿತು. 90 ನೇಅಕಾಡೆಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ವಿಭಾಗದಲ್ಲಿ ದೇಶದಿಂದ ನಾಮ ನಿರ್ದೇಶನಗೊಂಡಿತು ಎಂದು ಅವರು ವಿವರಿಸಿದರು.
ಬೆಳ್ಳಿ ಪರದೆಗೂ ಮೀರಿದ ಜವಾಬ್ದಾರಿ
ಭಾರತದ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್‌ನ ಜವಾಬ್ದಾರಿಯಲ್ಲಿ ನಿರ್ವಹಿಸಲು ಇದೀಗ ನಿಮ್ಮ ಮುಂದೆ ನಿಂತಿದ್ದೇನೆ. ಇದು ಬೆಳ್ಳಿ ಪರದೆಗೂ ಮೀರಿದ ಪಾತ್ರವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಸದ್ಯ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಿಗದ ಆಗಿದೆ.
ಈ ರಾಜ್ಯಗಳಲ್ಲಿ ಶೇಕಡಾ 100ರಷ್ಟು ಮತದಾರರನ್ನು ಚುನಾವಣಾ ಸಂಸ್ಥೆ ನೋಂದಾಯಿಸಲಾಗಿದೆ. ಎಲ್ಲಾ ಯುವಕರು ಕೂಡಲೇ ಮತದಾನದ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿ ರಾಜೀವ್ ಕುಮಾರ್ ಹೇಳಿದರು.

ಐದು ರಾಜ್ಯಗಳ ಚುನಾವಣೆ
ಛತ್ತೀಸ್‌ಗಢದ ನಕ್ಸಲ್ ಪೀಡಿತ ಪ್ರದೇಶದಲ್ಲಿ ನ್ಯಾಯಸಮ್ಮತ ಮತ್ತು ಮುಕ್ತ ಚುನಾವಣೆಯನ್ನು ನಡೆಸುವಲ್ಲಿ ಕುಮಾರ್ ಸರ್ಕಾರಿ ಗುಮಾಸ್ತನ ಪಾತ್ರವನ್ನು ನಿರ್ವಹಿಸುವ 'ನ್ಯೂಟನ್' ಚಲನಚಿತ್ರವು 67 ನೇ ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆ ವಿಭಾಗದಲ್ಲಿ ಪ್ರಥಮ ಪ್ರದರ್ಶನಗೊಂಡಿದೆ.
ಐದು ರಾಜ್ಯಗಳು- ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್‌ಗಢ ಮತ್ತು ಮಿಜೋರಾಂ- ನವೆಂಬರ್ 7 ರಿಂದ 30 ರವರೆಗೆ ವಿವಿಧ ದಿನಗಳಲ್ಲಿ ಚುನಾವಣೆ ನಡೆಯಲಿವೆ. ಈ ರಾಜ್ಯಗಳ ಮತಗಳ ಎಣಿಕೆ ಡಿಸೆಂಬರ್ 3 ರಂದು ಜರುಗಲಿದೆ. ಈ ಐದು ಚುನಾವಣೆಗಳು ವಿವಿಧ ರಾಜಕೀಯ ಪಕ್ಷಗಳಿಗೆ 2024ರ ಲೋಕಸಭಾ ಚುನಾವಣೆ ಸಂಬಂಧ ಮಹತ್ವದ ಘಟ್ಟವಾಗಿದೆ. ಒಟ್ಟು ಐದು ಚುನಾವಣಾ ರಾಜ್ಯಗಳ ವ್ಯಾಪ್ತಿಯಲ್ಲಿ ಸುಮಾರು 16 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ ಎಂದು ಚುನಾವಣೆ ಆಯೋಗ ತಿಳಿಸಿದೆ.












Click it and Unblock the Notifications