10ನೇ ಕ್ಲಾಸ್ ಪಾಸಾದ ನಂತರ ಮದುವೆ ಎಂದ 80ರ ಅಜ್ಜ
ಜೈಪುರ, ಮಾ 16: ಜೀವನದಲ್ಲಿ ಏನಾದರೂ ಸಾಧಿಸ ಬೇಕೆಂದು ಬಯಸುವವನಿಗೆ ವಯಸ್ಸು ಅಡ್ಡಿ ಬರುವುದಿಲ್ಲ ಎನ್ನುವ ಮಾತಿದೆ. ರಾಜಸ್ಥಾನದ ಈ ಎಂಬತ್ತರ ಅಜ್ಜನ ಕಥೆ ಕೂಡಾ ಹಾಗೆಯೇ. ಎಸ್ಎಸ್ಎಲ್ಸಿ ಪಾಸ್ ಮಾಡ ಬೇಕೆನ್ನುವುದೇ ಇವನು ಜೀವನದಲ್ಲಿ ಮಾಡಬೇಕೆನ್ನುವ ಬಹುದೊಡ್ಡ ಸಾಧನೆ.
ರಾಜಾಸ್ಥಾನದ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಶಿವಚರಣ್ ಎನ್ನುವ ಎಂಬತ್ತರ ವಯಸ್ಸಿನ ಅಜ್ಜನಿಗೆ ಎಸ್ಎಸ್ಎಲ್ಸಿ ಪಾಸಾಗದೇ ಮದುವೆಯಾಗಲು ಮನಸಿಲ್ಲ. ಹಾಗಂತ ಬ್ರಹ್ಮಚಾರಿ ಆಗಲೂ ಒಪ್ಪಿಗೆಯಿಲ್ಲ.
ಆದರೆ ಈ ಅಜ್ಜನಿಗೆ ಸರಸ್ವತಿ ಅಷ್ಟು ಬೇಗ ಒಲಿಯುತ್ತಿಲ್ಲ. ಆದರೂ ಮಾಡಬೇಕೆನ್ನುವ ಸಾಧನೆಗೆ ಬೆನ್ನು ತೋರಲು ಮನಸ್ಸಿಲ್ಲದ ಅಜ್ಜ ಇದುವರೆಗೆ ನಲವತ್ತ ನಾಲ್ಕು ಬಾರಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾನೆ.
ಬರೆದಷ್ಟೂ ಬಾರಿ ಅನುತ್ತೀರ್ಣನಾದ ಅಜ್ಜನಿಗೆ ದೇವರು ಕೊಟ್ಟ ಜೀವನ ಮುಗಿಯುವುದೊರಳಗೆ ಎಸ್ಎಸ್ಎಲ್ಸಿ ಪಾಸಾಗ ಬೇಕೆನ್ನುವುದೇ ಇರುವ ಏಕೈಕ ಗುರಿ.
ಸಾಧನೆ ಮಾಡಬೇಕೆನ್ನುವ ಮೆಟ್ಟಿಲಿಗೆ ವಯೋ ಸಂಬಂಧ ತೊಂದರೆ ಅಡ್ಡಿ ಬರುತ್ತಿದ್ದರೂ ಹಿಡಿದ ಕೆಲಸ ಮುಗಿಸಲೇ ಬೇಕೆನ್ನುವ ಛಲ.

ಈ ಅಜ್ಜನಿಗೆ ಈಗ ಕಣ್ಣು ಸರಿಯಾಗಿ ಕಾಣಿಸುತ್ತಿಲ್ಲ, ಕಿವಿಯೂ ಕೇಳಿಸುತ್ತಿಲ್ಲ. ಆದರೂ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಒಂದಲ್ಲಾ ಒಂದು ದಿನ ಉತ್ತೀರ್ಣನಾಗುತ್ತೇನೆ ಎನ್ನುವ ಅದಮ್ಯ ವಿಶ್ವಾಸ. ಪರೀಕ್ಷೆ ಪಾಸಾಗದೇ ಮದುವೆಯಾಗುವುದಿಲ್ಲ ಎಂದು ಮನೆಯವರಿಗೆ ಮಾತು ಕೊಟ್ಟಿದ್ದಾನಂತೆ.
ರಾಜಸ್ಥಾನದಲ್ಲಿ ಬರುವ ತಿಂಗಳು ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮತ್ತೆ ಬರೆಯುತ್ತಿದ್ದಾನೆ. ಈ ಬಾರಿಯಾದರೂ ಅಜ್ಜ ಎಸ್ಎಸ್ಎಲ್ಸಿ ಪಾಸಾಗಿ ಆತನ ಕನಸು ನನಸಾಗಲಿ ಎನ್ನುವುದು ನಮ್ಮ ಹಾರೈಕೆ.
(Source and image courtesy : IBN)












Click it and Unblock the Notifications