Edible Oil Price: ಶೀಘ್ರದಲ್ಲೇ ಕಡಿಮೆಯಾಗಲಿದೆ ಅಡುಗೆ ಎಣ್ಣೆ ದರ
ಮಧ್ಯಮ, ಕೆಳ ಮಧ್ಯಮ ವರ್ಗದ ಕುಟುಂಬಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಅತಿ ಶೀಘ್ರದಲ್ಲೇ ಅಡುಗೆ ಎಣ್ಣೆ ದರ ಮತ್ತಷ್ಟು ಕಡಿಮೆಯಾಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಖಾದ್ಯ ತೈಲ ದರ ಕಡಿಮೆಯಾಗಿದ್ದು, ಶೀಘ್ರದಲ್ಲೇ ಭಾರತದಲ್ಲಿ ಕೂಡ ದರ ಕಡಿತವಾಗಲಿದೆ.
ಖಾದ್ಯ ತೈಲಗಳ ಅತ್ಯುನ್ನತ ಉದ್ಯಮ ಸಂಸ್ಥೆಯಾದ ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತೊಮ್ಮೆ ಗ್ರಾಹಕರಿಗೆ ಅನುಕೂಲವಾಗುವಂತೆ ಜಾಗತಿಕ ಮಾರುಕಟ್ಟೆಗಳಿಗೆ ಅನುಗುಣವಾಗಿ ಚಿಲ್ಲರೆ ಮತ್ತು ಸಗಟು ಬೆಲೆಗಳನ್ನು ಕಡಿಮೆ ಮಾಡಲು ತನ್ನ ಸಂಸ್ಥೆಯ ಸದಸ್ಯ ಕಂಪನಿಗಳಿಗೆ ಒತ್ತಾಯಿಸಿದೆ.

ಆಹಾರ ಸಚಿವಾಲಯ ಮತ್ತು ಭಾರತದಲ್ಲಿನ ಪ್ರಮುಖ ಖಾದ್ಯ ತೈಲ ಉದ್ಯಮದ ಪ್ರತಿನಿಧಿಗಳು ಜೂನ್‌ನಲ್ಲಿ ಖಾದ್ಯ ತೈಲಗಳ ಚಿಲ್ಲರೆ ಬೆಲೆಯಲ್ಲಿ ಮತ್ತಷ್ಟು ಇಳಿಕೆಯ ಕುರಿತು ಚರ್ಚಿಸಲು ತಮ್ಮ ಜಾಗತಿಕ ಬೆಲೆಗಳ ನಿರಂತರ ಕುಸಿತದ ನಡುವೆ ಸಭೆ ನಡೆಸಿದರು. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಉದ್ಯಮ ಪ್ರತಿನಿಧಿಗಳೊಂದಿಗೆ ಒಂದು ತಿಂಗಳೊಳಗೆ ಎರಡನೇ ಬಾರಿ ಸಭೆ ನಡೆಸಲಾಗಿದೆ.
ಶೀಘ್ರದಲ್ಲೇ ಬೆಲೆ ಇಳಿಕೆ
ಖಾದ್ಯ ತೈಲದ ದೇಶೀಯ ಬೆಲೆಯ ಬಗ್ಗೆ ಸರ್ಕಾರವು ಗಂಭೀರವಾಗಿ ಚಿಂತಿಸುತ್ತಿದೆ ಮತ್ತು ಕುಸಿಯುತ್ತಿರುವ ಅಂತರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ಬೆಲೆಗಳನ್ನು ಕಡಿಮೆ ಮಾಡುವುದನ್ನು ನಿರೀಕ್ಷಿಸುತ್ತದೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಅಧಿಕಾರಿಗಳೊಂದಿಗೆ ಇತ್ತೀಚಿನ ವರ್ಚುವಲ್ ಸಭೆಗಳಲ್ಲಿ, ಅಂತಾರಾಷ್ಟ್ರೀಯ ಬೆಲೆಗಳಿಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ಖಾದ್ಯ ತೈಲ ಬೆಲೆಗಳಲ್ಲಿ ಇಳಿಕೆ ಮಾಡುವ ಬಗ್ಗೆ ನಾವು ಚರ್ಚಿಸಿದ್ದೇವೆ. ಜಾಗತಿಕ ಮಾರುಕಟ್ಟೆಯ ಕುಸಿತಕ್ಕೆ ಅನುಗುಣವಾಗಿ ಪ್ರಮುಖ ಬ್ರ್ಯಾಂಡ್‌ಗಳು ಕಳೆದ ಕೆಲವು ತಿಂಗಳುಗಳಿಂದ ಖಾದ್ಯ ತೈಲಗಳ ಬೆಲೆಯನ್ನು ಈಗಾಗಲೇ ಕಡಿಮೆ ಮಾಡಿವೆ ಎಂದು ನಾವು ತಿಳಿಸಿದ್ದೇವೆ ಎಂದು ಎಸ್‌ಇಎ ಅಧ್ಯಕ್ಷ ಅಜಯ್ ಜುಂಜುನ್‌ವಾಲಾ ಸದಸ್ಯರಿಗೆ ಪತ್ರ ಬರೆದಿದ್ದಾರೆ.
"ಕಡಿಮೆಯಾಗುತ್ತಿರುವ ಅಂತಾರಾಷ್ಟ್ರೀಯ ಮಾರುಕಟ್ಟೆ ಸನ್ನಿವೇಶಕ್ಕೆ ಅನುಗುಣವಾಗಿ ಖಾದ್ಯ ತೈಲಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮತ್ತು ವಿತರಕರಿಗೆ (PTD) ಬೆಲೆಯನ್ನು ಕಡಿಮೆ ಮಾಡಲು ನಾವು ಎಲ್ಲಾ ಸದಸ್ಯರನ್ನು ಒತ್ತಾಯಿಸುತ್ತೇವೆ." ಎಂದು ಹೇಳಿದ್ದಾರೆ.
ಭಾರತವು ವಿಶ್ವದ ಎರಡನೇ ಅತಿದೊಡ್ಡ ಗ್ರಾಹಕ ಮತ್ತು ನಂಬರ್ ಒನ್ ಸಸ್ಯಜನ್ಯ ಎಣ್ಣೆ ಆಮದುದಾರನಾಗಿದ್ದು, 60 ಪ್ರತಿಶತ ಅಡುಗೆ ಎಣ್ಣೆಯನ್ನು ಆಮದು ಮಾಡುವ ಮುಖಾಂತರ ಅಗತ್ಯತೆಯನ್ನು ಪೂರೈಸುತ್ತದೆ. ಬಹುಪಾಲು ಪಾಮ್ ಎಣ್ಣೆ ಮತ್ತು ಅದರ ಉತ್ಪನ್ನಗಳು, ಇಂಡೋನೇಷ್ಯಾ ಮತ್ತು ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ.
ಭಾರತವು ಮುಖ್ಯವಾಗಿ ಸಾಸಿವೆ, ತಾಳೆ, ಸೋಯಾಬೀನ್ ಮತ್ತು ಸೂರ್ಯಕಾಂತಿ ಮೂಲದ ಖಾದ್ಯ ತೈಲಗಳನ್ನು ಬಳಸುತ್ತದೆ. ಶೇಂಗಾ, ಸೋಯಾಬೀನ್, ಸೂರ್ಯಕಾಂತಿ, ಎಳ್ಳು ಮತ್ತು ಇತರವುಗಳನ್ನು ಒಳಗೊಂಡಿರುವ ಎಣ್ಣೆಕಾಳುಗಳ ಬಿತ್ತನೆಯು ಕಳೆದ ವರ್ಷದ ಇದೇ ಅವಧಿಯ 155.29 ಲಕ್ಷ ಹೆಕ್ಟೇರ್‌ಗೆ ಹೋಲಿಸಿದರೆ, ಈ ವರ್ಷ 160.41 ಲಕ್ಷ ಹೆಕ್ಟೇರ್‌ಗೆ ಹೆಚ್ಚಾಗಿದೆ, ಕೃಷಿ ಸಚಿವಾಲಯ ಅಂಕಿ ಅಂಶಗಳ ಸಹಿತ ವಿವರಿಸಿದೆ.












Click it and Unblock the Notifications