ಆರು ದೇಶಗಳಿಂದ ವಿಜಯ ಮಲ್ಯ ಆಸ್ತಿ ವಿವರ ಕಲೆಹಾಕಲಿರುವ ED
ನವದೆಹಲಿ, ಜುಲೈ 4: ಮದ್ಯದ ದೊರೆ ವಿಜಯ ಮಲ್ಯ ಅವರ ಆಸ್ತಿ ವಿವರಗಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯ(ED), ಆರು ದೇಶಗಳ ಸಹಾಯ ಕೋರಲಿದೆ.
ಅರಬ್ ದೇಶಗಳು, ಅಮೆರಿಕ, ಫ್ರಾನ್ಸ್, ಸಿಂಗಾಪುರ, ಐರ್ಲ್ಯಾಂಡ್, ಮಾರಿಶಿಯಸ್ ಗಳಲ್ಲಿ ಇರಬಹುದಾದ ವಿಜಯ ಮಲ್ಯ ಆಸ್ತಿಗಳು, ಬ್ಯಾಂಕ್ ಖಾತೆಯ ವಿವರಗಳು, ಕಂಪೆನಿಗಳಿಗೆ ಸಂಬಂಧಿಸಿದಂತೆ ವಿವರ ನೀಡಲು, ಈ ಎಲ್ಲ ದೇಶಗಳ ಸಂಬಂದ್ಹ ಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲು ಲೇವಾದೇವಿ ಪ್ರತಿಬಂಧಕ ಕಾಯ್ದೆ (PMLA) ವಿಶೇಷ ಕೋರ್ಟ್ EDಗೆ ಅನುಮತಿ ನೀಡಿದೆ.

ಭಾರತದ ವಿವಿಧ ಬ್ಯಾಂಕ್ ಗಳಲ್ಲಿ 9000 ಕೋಟಿಗೂ ಹೆಚ್ಚು ಸಾಲ ಪಡೆದು, ಅದನ್ನು ತೀರಿಸದೆ ಲಂಡನ್ನಿಗೆ ಹಾರಿರುವ ಮಲ್ಯ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ಕುರಿತಂತೆ ಭಾರತ ಮತ್ತು ಇಂಗ್ಲೆಂಡದ್ ನಡುವೆ ಮಾತುಕತೆ ನಡೆಯುತ್ತಿದೆ.












Click it and Unblock the Notifications