ಮಾಂಸ ರಫ್ತುದಾರ ಮೋಯಿನ್ ಖುರೇಷಿ ಬಂಧನ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 26 : ಕಪ್ಪು ಹಣ ಸಂಗ್ರಹದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಶುಕ್ರವಾರ ರಾತ್ರಿ ಮಾಂಸ ರಫ್ತುದಾರ ಮೋಯಿನ್ ಖುರೇಷಿಯನ್ನು ಬಂಧಿಸಿದೆ.

ಪಿಎಮ್ ಎಲ್‍ಎ ಅಡಿಯಲ್ಲಿ ಖುರೇಷಿಯನ್ನು ಬಂಧಿಸಲಾಗಿದ್ದು, ಇಂದು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ. ಉದ್ಯಮಿ ಖುರೇಷಿ ಅವರನ್ನು ವಿಚಾರಣೆಗಾಗಿ ನವದೆಹಲಿಗೆ ಕರೆಸಿ ಬಂಧಿಸಲಾಗಿದೆ. ವಿಚಾರಣೆಗೆ ಖುರೇಷಿ ಸಹಕರಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ED arrests meat exporter Moin Qureshi in money laundering case

ಯಾರು ಈ ಮೋಯಿನ್ ಖುರೇಷಿ? ಕಾನ್ಪುರದ ಮಾಂಸ ರಫ್ತುದಾರ ಖುರೇಷಿ ಕಳೆದ ವರ್ಷ ಅಕ್ಟೋಬರ್‍ ನಲ್ಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿ ಸುದ್ದಿಯಾಗಿದ್ದರು.

ತೆರಿಗೆ ವಂಚನೆ ಹಾಗೂ ಹವಾಲಾ ಡೀಲಿಂಗ್ ಆರೋಪಗಳು ಖುರೇಷಿ ಮೇಲಿವೆ. ಜಾರಿ ನಿರ್ದೇಶನಾಲಯವನ್ನು ಹೊರತುಪಡಿಸಿ ಆದಾಯ ತೆರಿಗೆ ಇಲಾಖೆ ಹಾಗೂ ಸಿಬಿಐನಿಂದ ಕೂಡ ಖುರೇಷಿ ಕಪ್ಪು ಹಣ ಸಂಗ್ರಹಣೆ ಸಂಬಂಧ ವಿಚಾರಣೆ ಎದುರಿಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Enforcement Directorate (ED) has arrested millionaire meat exporter Moin Qureshi in connection to a Rs 200 crore money laundering case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X