ಆರ್ಥಿಕ ಸಮೀಕ್ಷೆ: ಲಾಕ್‌ಡೌನ್‌ನಲ್ಲಿ ಉದ್ಯೋಗ ನಷ್ಟದ ಕುರಿತು ಮೌನ
ನವದೆಹಲಿ,ಜನವರಿ 30: ಭಾರತೀಯ ಆರ್ಥಿಕ ಚೇತರಿಕೆಯು ವಿ ಆಕಾರದಲ್ಲಿ ಚೇತರಿಕೆ ಕಾಣಲಿದೆ ಎಂಬುದು ತಿಳಿದುಬಂದಿದೆ.
ಕೇಂದ್ರ ಬಜೆಟ್ ಮಂಡನೆಗೆ ಇನ್ನು ಎರಡೇ ದಿನಗಳು ಬಾಕಿ ಇದೆ. ಇದಕ್ಕೂ ಮುನ್ನ ಪ್ರಕಟಗೊಂಡ ಆರ್ಥಿಕ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.ಸಿಎಂಐಇ ಪ್ರಕಾರ 121 ಮಿಲಿಯನ್ ಜನತೆ ಲಾಕ್ ಡೌನ್ ಅವಧಿಯ ತಿಂಗಳುಗಳಲ್ಲಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ.
ಸಮೀಕ್ಷೆಯಲ್ಲಿ ಕಾರ್ಮಿಕ ಸುಧಾರಣೆಗಳು ಹಾಗೂ ಫ್ಲೆಕ್ಸಿ ಸ್ಟಾಫಿಂಗ್ ಬಗ್ಗೆ ಪ್ರಸ್ತಾಪಿಸಲಾಗಿದೆಯಾದರೂ ಮೇಲ್ಮಟ್ಟದಲ್ಲಿಯಷ್ಟೇ ಅದರ ಬಗ್ಗೆ ಹೇಳಲಾಗಿದೆ. ಆದರೆ ಉದ್ಯೋಗ ಸೃಷ್ಟಿಯ ಬಗ್ಗೆ ಯಾವುದೇ ವಿಷಯವನ್ನೂ ಪ್ರಸ್ತಾಪಿಸದೇ ಇರುವುದು ಅಚ್ಚರಿ ಮೂಡಿಸಿದೆ.

ಆರ್ಥಿಕ ಸಮೀಕ್ಷೆ ತೆರಿಗೆ ಹಾಗೂ ಕುಸಿಯುತ್ತಿರುವ ಆದಾಯ ಸಂಗ್ರಹ, ಬಹುಮುಖ್ಯವಾದ ಖಾಸಗಿ ಹೂಡಿಕೆ ಕ್ಷೇತ್ರಗಳ ಬಗ್ಗೆಯೂ ಉಲ್ಲೇಖಿಸಿಲ್ಲ.ಆದರೆ ನಿರುದ್ಯೋಗವೇ ಮೊದಲ ಸಮಸ್ಯೆಗಳ ಬಗ್ಗೆ ಯಾವುದೇ ಪ್ರಸ್ತಾಪ ಮಾಡದೇ ಮೌನಕ್ಕೆ ಶರಣಾಗಿದೆ.
ಇದೇ ವೇಳೆ ಕೊರೊನಾ ಸಾಂಕ್ರಾಮಿಕದಿಂದಾಗಿ ಉಂಟಾಗಿರುವ ಉದ್ಯೋಗ ನಷ್ಟದ ಬಗ್ಗೆ, ಉದ್ಯೋಗ ಸೃಷ್ಟಿಗೆ ಕೈಗೊಳ್ಳುವ ಕ್ರಮಗಳ ಬಗ್ಗೆ ಯಾವುದೇ ವಿಷಯವನ್ನೂ ಪ್ರಸ್ತಾಪಿಸಿಲ್ಲ.
ಲಾಕ್ ಡೌನ್ ಅವಧಿಯಲ್ಲಿ ಗಿಗ್ ಎಕಾನಮಿ ಬೆಳವಣಿಗೆ ಕಂಡಿದೆ ಹಾಗೂ ಸಂಘಟಿತ ಕ್ಷೇತ್ರಗಳಲ್ಲಿ ಮನೆಯಿಂದಲೇ ಕೆಲಸ ಮಾಡುವುದು ಏರಿಕೆಯಾಗಿದೆ ಎಂದಷ್ಟೇ ಸಮೀಕ್ಷೆ ಹೇಳಿದೆ.












Click it and Unblock the Notifications