ಮತಎಣಿಕೆಗೆ ಕ್ಷಣಗಣನೆ: ಗುಜರಾತಿನಾದ್ಯಂತ ಬಿಗಿಬಂದೋಬಸ್ತ್
ಗಾಂಧಿನಗರ, ಡಿಸೆಂಬರ್ 18: ಗುಜರಾತ್ ನಲ್ಲಿ 14 ನೇ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು(ಡಿ.16) ಹೊರಬೀಳಲಿರುವ ಕಾರಣ ರಾಜ್ಯದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಒಟ್ಟು 37 ಕೇಂದ್ರಗಳಲ್ಲಿ ಮತಎಣಿಕೆ ನಡೆಯಲಿದ್ದು, ಎಲ್ಲೆಡೆಯೂ ವಿಶೇಷ ಭದ್ರತೆ ಕಲ್ಪಿಸುವಂತೆ ಭಾರತೀಯ ಚುನಾವಣಾ ಆಯೋಗ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದೆ.

"ಇಂದು ಬೆಳಿಗ್ಗೆ 8 ಗಂಟೆಯಿಂದ ಮತಎಣಿಕೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ 40,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಎಲ್ಲಾ 182 ವಿಧಾನಸಭಾ ಕ್ಷೇತ್ರಗಳಲ್ಲೂ ಕೌಂಟಿಗ್ ಹಾಲ್ ಗಳನ್ನು ಸೃಷ್ಟಿಮಾಡಲಾಗಿದ್ದು, 37 ಮತಎಣಿಕೆ ಕೇಂದ್ರಗಳಲ್ಲಿ ಮೂರು ಬೇರೆ ಬೇರೆ ಮಟ್ಟದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ" ಎಂದು ಗುಜರಾತ್ ನ ಮುಖ್ಯ ಚುನಾವಣಾಧಿಕಾರಿ ಬಿ ಬಿ ಸ್ವೇನ್ ಹೆಳಿದ್ದಾರೆ.
ಗುಜರಾತಿನಲ್ಲಿ ಡಿ.9 ಮತ್ತು 14 ರಂದು ಎರಡು ಹಂತದ ಮತದಾನ ನಡೆದಿತ್ತು. ವಿಧಾನಸಭೆ ಚುನಾವಣೆಗೆ ಇವಿಎಂ(electronic voting machine) ಗಳನ್ನು ಬಳಸಲಾಗಿತ್ತು. ವಿವಿಪಿಎಟಿ ವಿಧಾನವನ್ನೂ ಈ ಬಾರಿ ಬಳಸಿರುವುದು ಮತ್ತೊಂದು ವಿಶೇಷತೆಯಾಗಿದೆ.












Click it and Unblock the Notifications