ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಡು ಮಗು ಬೇಕಿದ್ದರೆ ದನದ ಮಾಂಸ ತಿನ್ನಬೇಕಂತೆ!

ಏನೇ ಆದರೂ ಗಂಡುಮಗು ಇರಬೇಕು ಬಿಡ್ರೀ ಅನ್ನೋ ಮಾತೆಲ್ಲ ಯಾವುದೋ ಜಮಾನಕ್ಕೆ ಮುಗಿದುಹೋಯಿತು ಅಂದುಕೊಳ್ಳೋ ಹಾಗಿಲ್ಲ. ಏಕೆಂದರೆ ಮಲಯಾಳಂ ಪತ್ರಿಕೆಯೊಂದು ಗಂಡು ಮಕ್ಕಳೇ ಆಗಬೇಕೆಂದರೆ ಹೀಗೆ ಹೀಗೆ ಮಾಡಿ ಅಂತ ಸಲಹೆಗಳನ್ನೂ ಕೊಟ್ಟಿದೆ.

|
Google Oneindia Kannada News

ತಿರುವನಂತಪುರಂ, ಡಿಸೆಂಬರ್ 15: ದನದ ಮಾಂಸ ತಿನ್ನಿರಿ, ದಿನ ಬಿಟ್ಟು ದಿನ ಸಂಭೋಗ ನಡೆಸಿ, ಮಲಗುವಾಗ ಆಕೆ ಎಡಭಾಗಕ್ಕೆ ಉತ್ತರ ದಿಕ್ಕಿಗೆ ಮುಖ ಮಾಡಿರುವಂತೆ ತಿಳಿಸಿ...ಸಲಹೆ ಹೀಗೆ ಸಾಗುತ್ತದೆ. ಇದು ಮಲಯಾಳಂನ ಮಂಗಳ ಎಂಬ ಪತ್ರಿಕೆ ನೀಡಿರುವ ಸಲಹೆ. ಏಕಿಂಥ ಸಲಹೆ ಅಂತೀರಾ? ಈ ಸಲಹೆ ಅನುಸರಿಸಿದರೆ ಗಂಡು ಮಕ್ಕಳು ಅಗುವ ಸಾಧ್ಯತೆ ಹೆಚ್ಚಂತೆ.

ಮಂಗಳಂ ಎಂಬ ನಿಯತಕಾಲಿಕೆ ಡಿಸೆಂಬರ್ 11ರಂದು "ನಿಮಗೆ ಗಂಡು ಮಗು ಬೇಕೆ? ಇಲ್ಲಿವೆ ಕೆಲ ಸಲಹೆಗಳು" ಎಂಬ ಶೀರ್ಷಿಕೆಯಡಿ ಪ್ರಕಟಿಸಿದ ಲೇಖನ ವಿಪರೀತ ಚರ್ಚೆಗೆ ಕಾರಣವಾಗಿದೆ. ಪೋಷಕರು ಗಂಡುಮಕ್ಕಳು ಜನಿಸಲಿ ಎಂದು ಪ್ರಾಶಸ್ತ್ಯ ನೀಡೋದು ಒಂದು ಕಡೆಯಾಯಿತು.[ಪುಟ್ಟ ಮಕ್ಕಳಿಗೆ ಸ್ತನ್ಯಪಾನ ಮಾಡಿಸಿದ ದಿಟ್ಟ ತಾಯಂದಿರು]

ಅದರಲ್ಲೂ ಭಾರತ ಸೇರಿದಂತೆ ಏಷ್ಯಾ ಖಂಡದ ದೇಶಗಳಲ್ಲಿ ಈ ರೀತಿ ಪ್ರಾಶಸ್ತ್ಯದ ಕಾರಣಕ್ಕೆ ಹೆಣ್ಣುಮಕ್ಕಳ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚು. ಹೆಣ್ಣುಮಕ್ಕಳ ಲಿಂಗಾನುಪಾತ ಹೆಚ್ಚಿರುವ ಕೇರಳದಲ್ಲೇ ನಿಯತಕಾಲಿಕೆಯೊಂದು ಇಂಥ ಲೇಖನ ಪ್ರಕಟಿಸಿದೆ. ಗಂಡುಮಗುವನ್ನೇ ಪಡೆಯಬೇಕು ಅಂದುಕೊಳ್ಳೋರಿಗೆ ಆರು ಸಲಹೆ ಕೊಟ್ಟಿದೆ.

'Eat beef to have a male child'

ಗಂಡುಮಗು ಯಾರಿಗೆ ಬೇಡ ಹೇಳಿ. ಆದರೆ ಅದನ್ನು ನಿರ್ಧರಿಸುವುದು ಹೇಗೆ? ಆದರೂ ಗಂಡುಮಗುವೇ ಬೇಕು ಅಂದುಕೊಳ್ಳುವವರು ಇಲ್ಲಿನ ಸಲಹೆಗಳನ್ನು ಅನುಸರಿಸಿದರೆ ಗಂಡು ಮಗು ಪಡೆಯಬಹುದು. ಹಾಗಂತ ನೂರು ಪರ್ಸೆಂಟ್ ಖಾತ್ರಿ ನೀಡುವುದಿಕ್ಕೆ ಅಗದಿರಬಹುದು. ಆದರೆ ಇವು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಆ ಲೇಖನ ಆರಂಭವಾಗುತ್ತದೆ.

English summary
Ranging from eating beef and having sex only on odd days of the week to asking women to lie down to their left with their faces pointing North, the list of tips published in Mangalam, a Malayalam newspaper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X