ಅಫ್ಘನ್ ಗಡಿಯಲ್ಲಿ ಭೂಕಂಪ: ದೆಹಲಿ, ಕಾಶ್ಮೀರದಲ್ಲೂ ನಡುಗಿದ ಭೂಮಿ
ನವದೆಹಲಿ, ಮೇ 9: ತಜಕಿಸ್ತಾನ-ಅಫ್ಘಾನಿಸ್ತಾನ ಗಡಿಭಾಗದಲ್ಲಿ ಬುಧವಾರ ಮಧ್ಯಾಹ್ನ ರಿಕ್ಟರ್ ಮಾಪನದಲ್ಲಿ 6.2 ತೀವ್ರತೆಯ ಭೂಕಂಪ ಉಂಟಾಗಿದ್ದು, ಅದರ ತೀವ್ರತೆಗೆ ಉತ್ತರ ಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದೆ.
ಸಂಜೆ 4.11ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ದೆಹಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರ ಸೇರಿದಂತೆ, ಕಾಶ್ಮೀರ ಕಣಿವೆ, ಜಮ್ಮುವಿನ ಕೆಲವು ಭಾಗಗಳು, ಹಿಮಾಚಲ ಪ್ರದೇಶದ ಕಜ್ಜಿಯಾರ್, ಕುಲಿ ಮತ್ತು ಶಿಮ್ಲಾಗಳಲ್ಲಿ ನೆಲ ಕಂಪಿಸಿದ್ದು, ಜನರಲ್ಲಿ ಭೀತಿ ಮೂಡಿಸಿತು.

ನವದೆಹಲಿ, ಗುರುಗಾಂವ್ ಹಾಗೂ ನೋಯಿಡಾಗಳಲ್ಲಿ ಸಹ ಭೂಮಿ ನಡುಗಿದೆ. ಅಫ್ಘಾನಿಸ್ತಾನ-ತಜಕಿಸ್ತಾನದ ಗಡಿಭಾಗದ ಭೂಕಂಪನದ ಮುಖ್ಯ ಕೇಂದ್ರವಾಗಿದೆ ಎಂದು ಅಮೆರಿಕದ ಭೂಮಾಪಕ ಕೇಂದ್ರ ತಿಳಿಸಿದೆ.
ಭೂಕಂಪನದ ಆರಂಭಿಕ ಪ್ರಮಾಣ 6.2ರಷ್ಟಿದ್ದು, ತಜಕಿಸ್ತಾನದ ಇಶ್ಕಾಶಿಮ್‌ನ 36 ಕಿ.ಮೀ.ವರೆಗೂ ವ್ಯಾಪಿಸಿದೆ. ಇದುವರೆಗೂ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.












Click it and Unblock the Notifications