ಸಿಕ್ಕಿಂನಲ್ಲಿ ಸೋಮವಾರ ಬೆಳಿಗ್ಗೆ 4.5 ಪ್ರಮಾಣದ ಭೂಕಂಪ
ಗ್ಯಾಂಗ್ ಟೋಕ್, ಮಾರ್ಚ್ 27 : ಸಿಕ್ಕಿಂ ಪೂರ್ವ ಭಾಗದಲ್ಲಿ, ಗ್ಯಾಂಗ್ ಟೋಕ್ ನಿಂದ 11 ಕಿ.ಮೀ. ದೂರದಲ್ಲಿ ಸೋಮವಾರ ಬೆಳಗಿನ ಜಾವ 3.12ಕ್ಕೆ 4.5 ಪ್ರಮಾಣದ ಭೂಕಂಪ ಸಂಭವಿಸಿದೆ.
ಕೆಲ ದಿನಗಳ ಹಿಂದೆ ಮ್ಯಾನ್ ಮಾರ್ ಮತ್ತು ಭಾರತದ ಈಶಾನ್ಯ ಭಾಗದಲ್ಲಿ 5 ಪ್ರಮಾಣದ ಭೂಕಂಪ ಸಂಭವಿಸಿತ್ತು. ಯಾವುದೇ ಸಾವು ನೋವು ಸಂಭವಿಸಿದ ವರದಿ ಇನ್ನೂ ಬಂದಿಲ್ಲ. ಮ್ಯಾನ್ ಮಾರ್ ಮತ್ತು ಭಾರತದ ಗಡಿ ಭಾಗದಲ್ಲಿ ಭೂಕಂಪದ ಕೇಂದ್ರಬಿಂದುವಿದೆ.
ಅಸ್ಸಾಂ, ಮಿಜೋರಾಂ, ಮೇಘಾಲಯ, ತ್ರಿಪುರಾ, ಅರುಣಾಚಲ ಪ್ರದೇಶ, ಮಣಿಪುರ ಮತ್ತು ನಾಗಾಲ್ಯಾಂಡ್ ಗಳನ್ನು ವಿಶ್ವದ 6ನೇ ಅತೀಹೆಚ್ಚು ಭೂಕಂಪ ಪೀಡಿತ ಪ್ರದೇಶಗಳನ್ನು ಗುರುತು ಮಾಡಲಾಗಿದೆ.













Click it and Unblock the Notifications