ಮಣಿಪುರದಲ್ಲಿ ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ

Subscribe to Oneindia Kannada

ಇಂಫಾಲ್, ಜನವರಿ 7: ಭಾನುವಾರ ಮಧ್ಯಾಹ್ನ ಮಣಿಪುರ ಭೂಕಂಪಕ್ಕೆ ತುತ್ತಾಗಿದೆ. ರಿಕ್ಟರ್ ಮಾಪಕದಲ್ಲಿ 5.5 ತೀವ್ರತೆಯ ಭೂಕಂಪ ಈಶಾನ್ಯ ರಾಜ್ಯದಲ್ಲಿ ನಡೆದಿದೆ.

ಪ್ರಾಥಮಿಕ ಮಾಹಿತಿಗಳ ಪ್ರಕಾರ ಸದ್ಯಕ್ಕೆ ಯಾವುದೇ ಆಸ್ತಿಪಾಸ್ತಿ ಮತ್ತು ಜೀವಹಾನಿ ಸಂಭವಿಸಿಲ್ಲ.

ಉತ್ತರಾಖಂಡ್ ನ ರುದ್ರಪ್ರಯಾಗದಲ್ಲಿ 4.7 ಪ್ರಮಾಣದ ಪ್ರಬಲ ಭೂಕಂಪ

ಅಮೆರಿಕಾದ ಭೂಗರ್ಭ ಇಲಾಖೆಯ ಮಾಹಿತಿಗಳ ಪ್ರಕಾರ ಇಲ್ಲಿನ ಯರಿಪೋಕ್ ನಿಂದ 86 ಕಿಲೋಮೀಟರ್ ಪೂರ್ವಕ್ಕೆ, 22.8 ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಇತ್ತು.

Earthquake measuring 5.5 on the Richter scale struck Manipur at 12.17 pm

ಈ ಹಿಂದೆ ಜನವರಿ 4, 2016ರಲ್ಲಿ 6.7 ತೀವ್ರತೆಯ ಭೂಕಂಪ ಮಣಿಪುರದಲ್ಲಿ ಸಂಭವಿಸಿತ್ತು. ಈ ಭೂಕಂಪದಲ್ಲಿ 11 ಜನ ಸಾವನ್ನಪ್ಪಿದ್ದರು. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ಘಟನೆಯಲ್ಲಿ ನೂರಾರು ಕಟ್ಟಡಗಳು ಧರೆಶಾಯಿಯಾಗಿದ್ದವು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Earthquake measuring 5.5 on the Richter scale struck Manipur at 12.17 pm said US Geological Survey.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ