ಆಧಾರ್, ಪ್ಯಾನ್ ಸಂಖ್ಯೆ ನೀಡದ ಇ-ವ್ಯಾಲೆಟ್ ಸ್ಥಗಿತ

ನವ ದೆಹಲಿ, ಫೆಬ್ರವರಿ 28: ಇ-ವ್ಯಾಲೆಟ್ ಬಳಕೆದಾರರು ತಮ್ಮ ಪ್ಯಾನ್ ಸಂಖ್ಯೆ, ಆಧಾರ್ ಸಂಖ್ಯೆ ಇತರ ದಾಖಲಾತಿಗಳನ್ನು ಲಿಂಕ್ ಮಾಡದೇ ಇದ್ದಲ್ಲಿ ಇ-ವ್ಯಾಲೆಟ್ ಸೇವೆ ಸ್ಥಗಿತಗೊಳ್ಳಲಿದೆ.

ಆರ್‌ಬಿಐ ಯು ಇ-ವ್ಯಾಲೆಟ್ ಬಳಕೆದಾರರು ತಮ್ಮ ಪ್ಯಾನ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆಯನ್ನು ನೀಡಲು ಫೆಬ್ರವರಿ 28 ಗಡುವು ನೀಡಿತ್ತು. ಗಡುವಿನ ಒಳಗೆ ಇ-ವಾಲೆಟ್ ಬಳಕೆದಾರರು ಕೆವೈಸಿ ಮಾಹಿತಿ ನೀಡದಿದ್ದಲ್ಲಿ ಅವರ ವ್ಯಾಲೆಟ್ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಥವಾ ವ್ಯಾಲೆಟ್ ಮೂಲಕ ಹೆಚ್ಚಿನ ವಹಿವಾಟು ಸಾಧ್ಯವಾಗದೆ ಆಗುವ ಸಾಧ್ಯತೆ ಇದೆ.

ಕೆವೈಸಿ ದಾಖಲಾತಿಗಳನ್ನು ನೀಡದಿರುವ ಇ-ವ್ಯಾಲೆಟ್‌ನಲ್ಲಿರುವ ಹಣಕ್ಕೆ ಏನು ಆಗುವುದಿಲ್ಲ ಎಂಬ ಭರವಸೆಯನ್ನು ಆರ್‌ಬಿಐ ನೀಡಿದೆ. ದಾಖಲಾತಿ ನೀಡದ ಬಳಕೆದಾರ ಇ-ವ್ಯಾಲೆಟ್‌ ನಲ್ಲಿರುವ ಹಣವನ್ನು ಒಂದೇ ಬಾರಿಗೆ ಅವರ ಖಾತೆಗೆ ವರ್ಗಾಯಿಸಿಕೊಳ್ಳುವ ಅವಕಾಶವನ್ನು ಇ-ವ್ಯಾಲೆಟ್ ನೀಡಲಿದೆ. ಅಥವಾ ಆ ಹಣ ಖಾಲಿಯಾಗುವವರೆಗೆ ವ್ಯಾಲೆಟ್ ಬಳಸಬಹುದಾಗಿದೆ, ಹಣ ಖಾಲಿಯಾದ ನಂತರ ಇ-ವ್ಯಾಲೆಟ್ ಸೇವೆ ಸ್ಥಗಿತಗೊಳ್ಳುತ್ತದೆ.

e-wallet may stop working if not KYC submitted

ಈ ಮುಂಚೆ ಕೇವಲ ಓಟಿಪಿ ಮುಖಾಂತರ ಇ-ವ್ಯಾಲೆಟ್ ಸೇವೆ ಆರಂಭಿಸಬಹುದಾಗಿತ್ತು, ಆದರೆ ಆರ್‌ಬಿಐ ಹೊಸ ನಿಯಮದ ಅನ್ವಯ ಪ್ಯಾನ್ ಸಂಖ್ಯೆ ಅಥವಾ ಆಧಾರ್ ಸಂಖ್ಯೆ ಮಾಹಿತಿಯನ್ನು ನೀಡಿ ದೃಢಪಡಿಸಿಕೊಳ್ಳಿಸುವುದು ಕಡ್ಡಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+