Dutch Youtuber Harassed: ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವಿದೇಶಿ ಯೂಟ್ಯೂಬರ್ ಮೇಲೆ ದೈಹಿಕ ಹಲ್ಲೆ; ಪ್ರಕರಣ ದಾಖಲು
ಬೆಂಗಳೂರು, ಜೂನ್. 12: ಬೆಂಗಳೂರಿನ ಚಿಕ್ಕಪೇಟೆ ಮಾರುಕಟ್ಟೆ ಪ್ರದೇಶದ ಬಳಿ ಡಚ್ ಯೂಟ್ಯೂಬರ್ ಜೊತೆಗೆ ಸ್ಥಳೀಯ ವ್ಯಾಪಾರಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೊಬೈಲ್‌ನಲ್ಲಿ ಲೈವ್‌ನಲ್ಲಿ ಇದ್ದಾಗಲೇ ಈ ಘಟನೆ ನಡೆದಿದೆ. ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಾರ್ಯಕರ್ತೆ ಬೃಂದಾ ಅಡಿಗೆ ಘಟನೆಯನ್ನು ಖಂಡಿಸಿದ್ದು, ಆರೋಪಿಗಳ ವಿರುದ್ಧ ಪೊಲೀಸ್ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇಂತಹ ಘಟನೆ ಸ್ವೀಕಾರಾರ್ಹವಲ್ಲ. ಘಟನೆಯಲ್ಲಿ ಯಾರೇ ಭಾಗಿಯಾಗಿದ್ದರೂ ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು'' ಎಂದು ಟ್ವೀಟ್ ಮಾಡಿದ್ದಾರೆ.
This random guy in chickpet harassed a foreigner, is this how we treat our guests, pls take action, the foreigner name is Pedro Mota he is a youtuber from netherlands https://t.co/oyOb8dunjA https://t.co/0MKVarBiwM@PoliceBangalore @CPBlr @BlrCityPolice @Chickpetebcp pic.twitter.com/XccAyRv0Nu
— Mudassir Ahmed (@tajirmudassir) June 11, 2023
ಹಲ್ಲೆಗೊಳಗಾದ ಯೂಟ್ಯೂಬರ್ ಡಚ್ ಪ್ರಜೆ ಪೆಡ್ರೊ ಮೋಟಾ (Pedro Mota) ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡು ತನ್ನ ಅನುಭವವನ್ನು ವಿವರಿಸಿದ್ದಾರೆ. "ಭಾರತದಲ್ಲಿ ಪ್ರಯಾಣಿಸುವ ವಿದೇಶಿಗರು ಬೆಂಗಳೂರಿನ ಕಳ್ಳರ ಮಾರುಕಟ್ಟೆಯ ಅನುಭವನ್ನು ಪಡೆಯುತ್ತಾರೆ. ಇದನ್ನು ಸಂಡೆ ಬಜಾರ್ ಅಥವಾ ಚೋರ್ ಬಜಾರ್ ಎಂದೂ ಕರೆಯುತ್ತಾರೆ. ಆದರೆ ಆ ಪ್ರದೇಶವನ್ನು ಅನ್ವೇಷಿಸುವುದು ತಪ್ಪಾದ ಕೆಲಸವಾಯಿತು. ಅಲ್ಲಿ ಕೋಪಗೊಂಡ ವ್ಯಕ್ತಿ ನನ್ನ ಕೈ ಮತ್ತು ತೋಳನ್ನು ಹಿಡಿದು ಎಳೆಯುವ ಮೂಲಕ ನನ್ನ ಮೇಲೆ ದಾಳಿ ಮಾಡಿದರು. ನಾನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ನನ್ನನ್ನು ಹಿಂದೆ ನೂಕಿದರು" ಎಂದಿದ್ದಾರೆ.

ಮುಂದುವರಿದು, "ನಾನು ಸ್ವಲ್ಪ ಬೀದಿ ಬದಿಯ ಆಹಾರವನ್ನು ಸೇವಿಸಿದ ನಂತರ, ಉತ್ತಮ ಸ್ಥಳೀಯ ಭಾರತೀಯ ಜನರನ್ನು ಭೇಟಿಯಾದೆ. ಜೊತೆಗೆ ಹೊಸ ಬಟನ್ ಇರುವ ಶರ್ಟ್‌ಗಾಗಿ ಚೌಕಾಶಿ ಮಾಡಿದೆ" ಎಂದು 'ಮ್ಯಾಡ್ಲಿ ರೋವರ್' ಎಂಬ ಹೆಸರಿನ ಯುಟ್ಯೂಬರ್ ಹೇಳಿದ್ದಾರೆ.
ವೈರಲ್ ವಿಡಿಯೋದಲ್ಲಿ ಗಜಿಬಿಜಿಯ ಬೆಂಗಳೂರು ಮಾರುಕಟ್ಟೆಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವಾಗ ವ್ಯಕ್ತಿಯೊಬ್ಬ (ಸಾಮಾನ್ಯವಾಗಿ ಅಂಗಡಿಯವನು) ವ್ಲಾಗರ್‌ಗೆ ಕಿರುಕುಳ ನೀಡುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಡಚ್ ಯೂಟ್ಯೂಬರ್, "ನಮಸ್ತೆ, ಸರ್" ಎಂದು ಹೇಳುವುದನ್ನು ಕೇಳಿಸಿತು, ಆದರೆ ಆ ವ್ಯಕ್ತಿ ಅವನ ಕೈಯನ್ನು ಹಿಡಿದುಕೊಂಡು, "ಯೇ ಕ್ಯಾ ಹೈ...(ಇದೇನು...)" ಎಂದು ಕೂಗಲು ಪ್ರಾರಂಭಿಸಿದ್ದಾರೆ. ನಂತರ ಯೂಟ್ಯೂಬರ್ ತನ್ನ ಕೈಯನ್ನು ಬಿಡುವಂತೆ ಕೇಳುವುದನ್ನು ಕೇಳಬಹುದು.
ಈ ಘಟನೆಯು ಕೆಲವು ದಿನಗಳ ಹಿಂದೆ ಸಂಭವಿಸಿದೆ ಎಂದು ವರದಿಯಾಗಿದೆ, ಆದರೆ ವ್ಲಾಗರ್ ಈಗ ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಇದು ಬೆಳಕಿಗೆ ಬಂದಿದೆ. ವಿಡಿಯೋ ವೈರಲ್ ಆದ ನಂತರ ಬೆಂಗಳೂರು ಪೊಲೀಸರು ಒಬ್ಬ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

"ವಿದೇಶಿ ಪೆಡ್ರೊ ಮೋಟಾ ಅವರೊಂದಿಗೆ ಅನುಚಿತವಾಗಿ ವರ್ತಿಸಿದ ದೂರಿಗೆ ಸಂಬಂಧಿಸಿದಂತೆ, ನವಾಬ್ ಹಯಾತ್ ಷರೀಫ್ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆ ಸೆಕ್ಷನ್ 92 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಬೆಂಗಳೂರಿನ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ಬಿ ನಿಂಬರಗಿ ತಿಳಿಸಿದ್ದಾರೆ.
ಬೆಂಗಳೂರು ಪೊಲೀಸರ ಟ್ವೀಟ್: ಇದೊಂದು ಹಳೆಯ ವಿಡಿಯೋ ಆಗಿದ್ದು, ಡಚ್ ಪ್ರಜೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯನ್ನು ಗುರುತಿಸಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ನಮ್ಮ ಬೆಂಗಳೂರಿನಲ್ಲಿ ಇಂತಹ ಘಟನೆಗಳಿಗೆ ಅವಕಾಶವಿರುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಟ್ವೀಟ್ ಮಾಡಿದ್ದಾರೆ.
It's a old video which has come into circulation now. The person harassing in the video has been identified traced and action taken. No scope for such highhandedness in Naamma Bengaluru against anybody. https://t.co/gx4dYPZUwe
— B. Dayananda, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr) June 12, 2023
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
ಐಪಿಎಲ್ 2026ಕ್ಕೆ ಮುಹೂರ್ತ ಫಿಕ್ಸ್: ಇಲ್ಲಿದೆ ಮಾಹಿತಿ -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
ಬೆಂಗಳೂರು-ಮಂಗಳೂರು ಮಧ್ಯ ನಿತ್ಯ ತಡರಾತ್ರಿ ವಿಮಾನ ಸೇವೆ, ಯಾವಾಗ? ಸಮಯ-ವೇಳಾಪಟ್ಟಿ ಇಲ್ಲಿದೆ -
ಎಲ್ಪಿಜಿ ಸಿಲಿಂಡರ್ ದರ 60 ರೂ ಏರಿಕೆ: ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ -
ಧುರಂಧರ್ 2 ಟ್ರೈಲರ್ ಔಟ್: ರಕ್ತ ಚರಿತ್ರೆ ಬರೆಯಲಿದೆ ಸಿನಿಮಾ, ಭರ್ಜರಿ ಕಲೆಕ್ಷನ್ ನಿರೀಕ್ಷೆ -
International Women's Day 2026: ಸ್ತ್ರೀ ಶಕ್ತಿಗೊಂದು ಗೌರವದ ನಮನ: ಮಹಿಳಾ ದಿನಾಚರಣೆಯ ಇತಿಹಾಸ, ಮಹತ್ವ ತಿಳಿಯಿರಿ -
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ












Click it and Unblock the Notifications