ಏಕಾಏಕಿ ಏರಿದೆ ಡ್ರೈಫ್ರೂಟ್‌ಗಳ ಬೆಲೆ; ಅಫ್ಘಾನ್‌ ಬಿಕ್ಕಟ್ಟಿನ ಪರಿಣಾಮ?

ನವದೆಹಲಿ, ಆಗಸ್ಟ್‌ 20: ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟು ಭಾರತಕ್ಕೆ ಸಮಸ್ಯೆ ತಂದಿಡಲಿದೆ. ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದ, ಭಾರೀ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಭಾರತಕ್ಕೆ ಈ ಬಿಕ್ಕಟ್ಟು ಆರ್ಥಿಕ ಪೆಟ್ಟಾಗುವ ಸೂಚನೆ ನೀಡಲಾಗಿದೆ.

Recommended Video

      ಅಫಘಾನಿಸ್ತಾನದಿಂದ ಆಮದು, ರಫ್ತು ವ್ಯವಹಾರ ಬಂದ್‌ ಹಿನ್ನೆಲೆ ಗಗನಕ್ಕೇರಿದ ಡ್ರೈ ಫ್ರೂಟ್ಸ್ ಬೆಲೆ ! | Oneindia Kannada

      ಇದಕ್ಕೆ ಪೂರಕವೆಂಬಂತೆ, ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಿದ್ದಂತೆ ಅಫ್ಘಾನಿಸ್ತಾನ-ಭಾರತದ ನಡುವೆ ನಡೆಯುತ್ತಿದ್ದ ವ್ಯಾಪಾರ ವಹಿವಾಟು ಕೂಡ ಸ್ಥಗಿತಗೊಂಡಿದೆ. ಪ್ರಸ್ತುತ ತಾಲಿಬಾನ್, ಭಾರತದಿಂದ ಪಾಕಿಸ್ತಾನದ ಮಾರ್ಗದಲ್ಲಿ ನಡೆಯುತ್ತಿದ್ದ ಸರಕು ಸಾಗಣೆಗೆ ತಡೆಒಡ್ಡಿದೆ ಎಂದು ಭಾರತೀಯ ರಫ್ತು ಸಂಸ್ಥೆ (FIEO) ಮಹಾನಿರ್ದೇಶಕ ಡಾ. ಅಜಯ್ ಸಹಾಯ್ ತಿಳಿಸಿದ್ದಾರೆ.

      ಈ ಕಾರಣದಿಂದಾಗಿ, ಅಫ್ಘಾನ್‌ನ ಡ್ರೈಫ್ರೂಟ್/ ಒಣಹಣ್ಣುಗಳ ಬೃಹತ್ ಆಮದುದಾರನಾಗಿದ್ದ ಭಾರತದಲ್ಲಿ ಇನ್ನು ಮುಂದೆ ಡ್ರೈ ಫ್ರೂಟ್‌ ಬೆಲೆ ಏರಿಕೆಯಾಗುವ ಎಲ್ಲಾ ಸೂಚನೆಗಳು ದೊರೆತಿವೆ. ಮುಂದೆ ಓದಿ...

       ಭಾರತದಲ್ಲಿ ಲಕ್ಷಾಂತರ ರೂಪಾಯಿ ನಷ್ಟ

      ಭಾರತದಲ್ಲಿ ಲಕ್ಷಾಂತರ ರೂಪಾಯಿ ನಷ್ಟ

      ಅಫ್ಘಾನಿಸ್ತಾನವನ್ನು ತಾಲಿಬಾನ್‌ ವಶಪಡಿಸಿಕೊಂಡ ನಂತರ, ಅಂದಿನಿಂದ ಡ್ರೈಫ್ರೂಟ್‌ ಸಾಗಣೆಯ ಒಂದು ಟ್ರಕ್ ಕೂಡ ಭಾರತದೆಡೆಗೆ ಬಂದಿಲ್ಲ ಎಂದು ಮುಂಬೈನ ಡ್ರೈಫ್ರೂಟ್ ಮಾರಾಟಗಾರ ರಾಜಿಂದರ್ ಶಾ ಹೇಳಿದ್ದಾರೆ. ಪಾಕಿಸ್ತಾನದ ವಾಘಾ ಗಡಿ ಮೂಲಕ ಆಮದು ಸಾಗಣೆ ನಡೆಯುತ್ತಿತ್ತು. ಅಲ್ಲಿ ಸರಕು ಸಾಗಣೆಗೆ ತಡೆಒಡ್ಡಲಾಗಿದೆ. ಭಾರತಕ್ಕೆ ಬರಬೇಕಾದ, ಡ್ರೈಫ್ರೂಟ್ ಸಾಗಣೆ ಮಾಡುತ್ತಿದ್ದ 200 ಟ್ರಕ್‌ಗಳನ್ನು ತಡೆಹಿಡಿದಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಅವರು ವಿವರಿಸಿದರು.

       ಡ್ರೈಫ್ರೂಟ್‌ಗಳ ಬೆಲೆಯಲ್ಲಿ ಏಕಾಏಕಿ ಏರಿಕೆ

      ಡ್ರೈಫ್ರೂಟ್‌ಗಳ ಬೆಲೆಯಲ್ಲಿ ಏಕಾಏಕಿ ಏರಿಕೆ

      ಕಾಬೂಲ್‌ ಅನ್ನು ತಾಲಿಬಾನ್ ಆಕ್ರಮಿಸಿಕೊಂಡ ಹಿನ್ನೆಲೆಯಲ್ಲೇ ಡ್ರೈಫ್ರೂಟ್‌ಗಳ ಬೆಲೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದಿದೆ. ಬಾದಾಮಿ, ಒಣದ್ರಾಕ್ಷಿ, ಅಂಜೂರ, ಏಪ್ರಿಕಾಟ್‌ ಒಣಹಣ್ಣುಗಳ ಬೆಲೆ ಕೆ.ಜಿಗೆ 200ರೂ ಏಕಾಏಕಿ ಏರಿಕೆಯಾಗಿದೆ. ಪಿಸ್ತಾ ಬೆಲೆ ಒಂದೇ ಬಾರಿಗೆ 250 ರೂ ಏರಿಕೆಯಾಗಿದೆ ಎಂದು ವಿವರಿಸಿದ್ದಾರೆ.

       ಭಾರತ ಡ್ರೈಫ್ರೂಟ್‌ಗಳ ಅತಿ ದೊಡ್ಡ ಆಮದುದಾರ

      ಭಾರತ ಡ್ರೈಫ್ರೂಟ್‌ಗಳ ಅತಿ ದೊಡ್ಡ ಆಮದುದಾರ

      ಸರಕು ಸಾಮಗ್ರಿ ಆಮದು ವಿಷಯ ಒಂದೇ ಅಲ್ಲ, ಅಫ್ಘಾನಿಸ್ತಾನದೊಂದಿಗೆ ಭಾರತ ಐತಿಹಾಸಿಕ ಸಂಬಂಧವನ್ನೂ ಹೊಂದಿದೆ. ಸದ್ಯಕ್ಕೆ ಅಫ್ಘಾನಿಸ್ತಾನದ ಬಿಕ್ಕಟ್ಟಿನ ಕುರಿತು ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಆದರೆ ಮುಂದೆ ಎಲ್ಲಾ ಸರಿಯಾಗುವ ಭರವಸೆ ಇದೆ ಎಂದು ಹೇಳುತ್ತಾರೆ ಮತ್ತೊಬ್ಬ ಆಮದುದಾರ ಸುನಿಲ್ ಚಬ್ರಿಯಾ.

      ಚಳಿಗಾಲದಲ್ಲಿ ಸಹಜವಾಗಿ ಡ್ರೈಫ್ರೂಟ್‌ಗಳ ಮಾರಾಟ ಹೆಚ್ಚಳವಿರುತ್ತದೆ. ಆದರೆ ಈ ಬಿಕ್ಕಟ್ಟಿನಿಂದಾಗಿ ಭಾರತಕ್ಕೆ ಬಲುದೊಡ್ಡ ನಷ್ಟವಾಗಲಿದೆ. ಅಫ್ಘಾನಿಸ್ತಾನದಿಂದ ಭಾರತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಡ್ರೈಫ್ರೂಟ್ ಆಮದು ಮಾಡಿಕೊಳ್ಳುತ್ತಿತ್ತು ಎಂದು ಡ್ರೈಫ್ರೂಟ್ ಟ್ರೇಡರ್ಸ್ ಅಸೋಸಿಯೇಷನ್‌ನ ಅಧ್ಯಕ್ಷ ವಿಜಯ್ ಕುಮಾರ್ ಭೂಟಾ ವಿವರಿಸುತ್ತಾರೆ. ಮುಂಬೈ ಒಂದರಲ್ಲೇ ಡ್ರೈಫ್ರೂಟ್ ಆಮದು ಮಾಡಿಕೊಳ್ಳುವ 40 ದೊಡ್ಡ ಕಂಪನಿಗಳಿವೆ. ಪ್ರತಿ ವರ್ಷ ಸುಮಾರು 38,000 ಮೆಟ್ರಿಕ್ ಟನ್‌ಗಳಷ್ಟು ಡ್ರೈಫ್ರೂಟ್ ಅನ್ನು ಅಫ್ಘಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತದೆ ಎಂದು ಹೇಳಿದರು. ಈಗಿರುವ ಸಂಗ್ರಹ ಇನ್ನು ಹದಿನೈದು ದಿನಗಳಲ್ಲಿ ಖಾಲಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

       ಅಫ್ಘಾನ್‌ನಿಂದ 85% ಡ್ರೈಫ್ರೂಟ್‌ ಆಮದು

      ಅಫ್ಘಾನ್‌ನಿಂದ 85% ಡ್ರೈಫ್ರೂಟ್‌ ಆಮದು

      ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಅಫ್ಘಾನ್‌ನಿಂದ 85% ಡ್ರೈಫ್ರೂಟ್‌ ಅನ್ನು ಆಮದು ಮಾಡಿಕೊಂಡಿತ್ತು. 2020-21ರಲ್ಲಿ 550 ಡಾಲರ್ ಮಿಲಿಯನ್‌ ಮೌಲ್ಯದ ಸೇಬು ಹಾಗೂ ಡ್ರೈಫ್ರೂಟ್ ಅನ್ನು ಆಮದು ಮಾಡಿಕೊಂಡಿತ್ತು.

      ಅಫ್ಘಾನಿಸ್ತಾನದಲ್ಲಿನ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಡ್ರೈಫ್ರೂಟ್ ಬೆಲೆ ಮುಂದಿನ ದಿನಗಳಲ್ಲಿ ಹೆಚ್ಚಳವಾಗಬಹುದು ಎಂದು ಫೆಡರೇಷನ್ ಆಫ್ ಇಂಡಿಯಾ ರಫ್ತು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ.'ವ್ಯಾಪಾರ ವಹಿವಾಟಿನಲ್ಲಿ ಭಾರತ ಅಫ್ಘಾನಿಸ್ತಾನದೊಂದಿಗೆ ಆರೋಗ್ಯಕರ ಸಂಬಂಧ ಹೊಂದಿದೆ. ಪ್ರಸ್ತುತ ಸಕ್ಕರೆ, ಔಷಧ, ಉಡುಪು, ಟೀ, ಕಾಫಿ, ಸಾಂಬಾರು ಪದಾರ್ಥಗಳು ಹಾಗೂ ಟ್ರಾಮ್ಸಿಷನ್ ಟವರ್‌ಗಳನ್ನು ಅಲ್ಲಿಗೆ ಭಾರತ ರಫ್ತು ಮಾಡುತ್ತಿತ್ತು. ಡ್ರೈಫ್ರೂಟ್‌ಗಳನ್ನು ಅಲ್ಲಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು' ಎಂದು ಅಜಯ್ ಸಹಾಯ್ ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+