ಪ್ರಧಾನಿ ಮೋದಿ ಭಾಷಣದ ಬೆನ್ನಲ್ಲೇ ಮತ್ತೆ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ

ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಬೆನ್ನಲ್ಲೇ ಪಾಕಿಸ್ತಾನ ಮತ್ತೊಮ್ಮೆ ಉದ್ದಟತನ ತೋರಿಸಿದೆ. ಸೋಮವಾರ ಕೂಡ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದ್ದು ಜಮ್ಮು ಮತ್ತು ಕಾಶ್ಮೀರದ ಸಾಂಬಾ ಮತ್ತು ಪಂಜಾಬ್‌ನ ಜಲಂಧರ್ ಮೇಲೆ ಡ್ರೋನ್‌ಗಳು ಕಾಣಿಸಿಕೊಂಡವು ಎಂದು ವರದಿಯಾಗಿದೆ.

ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದು, ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಪಾಕಿಸ್ತಾನದ ದಾಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಸೈನ್ಯಕ್ಕೆ ಎಲ್ಲಾ ಅಧಿಕಾರ ನೀಡಿರುವುದಾಗಿ ಅವರು ತಿಳಿಸಿದ್ದರು. ಆದರೂ ಗಡಿಯಾದ್ಯಂತ ಹಲವು ಕಡೆಗಳಲ್ಲಿ ಮತ್ತೆ ಡ್ರೋನ್ ಹಾರುವುದು ಕಂಡು ಬಂದಿದೆ.

drones sighted over samba jalandhar pm modi address

ಪಂಜಾಬ್‌ನ ಹೋಶಿಯಾರ್‌ಪುರದ ದಾಸುಯಾ ಪ್ರದೇಶದಲ್ಲಿ ಸ್ಥಳೀಯರು 7-8 ಸ್ಫೋಟಗಳ ಶಬ್ದಗಳನ್ನು ಕೇಳಿರುವುದಾಗಿ ವರದಿಯಾಗಿದೆ. ಪಠಾಣ್‌ಕೋಟ್, ವೈಷ್ಣೋ ದೇವಿ ಭವನ ಮತ್ತು ಯಾತ್ರಾ ಟ್ರ್ಯಾಕ್‌ನಲ್ಲಿ ತಕ್ಷಣದ ಬ್ಲ್ಯಾಕೌಟ್ ಅನ್ನು ಜಾರಿಗೊಳಿಸಲಾಯಿತು.

ಸಾಂಬಾದಿಂದ ವರದಿಯಾಗಿರುವ ದೃಶ್ಯಗಳಳಲ್ಲಿ ಕೆಂಪು ಗೆರೆಗಳು ಮತ್ತು ಸ್ಫೋಟದ ಶಬ್ದಗಳನ್ನು ನೋಡಬಹುದು, ಭಾರತದ ವಾಯು ರಕ್ಷಣಾ ಪಡೆಗಳು ಸಕ್ರಿಯಗೊಂಡು ವೈಮಾನಿಕ ವಸ್ತುಗಳನ್ನು ಹೊಡೆದುರುಳಿಸಿವೆ. ಸಾಂಬಾದ ಪ್ರಮುಖ ಸೇನಾ ನೆಲೆಯ ಬಳಿ ಡ್ರೋನ್ ದೃಶ್ಯಗಳ ಬಗ್ಗೆ ಜಲಂಧರ್ ಜಿಲ್ಲಾಧಿಕಾರಿ ಕೂಡ ತುರ್ತು ಸಂದೇಶವನ್ನು ನೀಡಿದ್ದಾರೆ. ಜಲಂಧರ್ ಜಿಲ್ಲೆಯ ಸುರನಾಸಿ ಗ್ರಾಮದ ಬಳಿಯೂ ಸ್ಫೋಟದ ಶಬ್ದಗಳು ಕೇಳಿಬಂದಿವೆ.

ಉಪ ಆಯುಕ್ತ ಹಿಮಾಂಶು ಅಗರ್ವಾಲ್ ಮಾತನಾಡಿ, ಸುರನಸ್ಸಿ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಡ್ರೋನ್ ಕಾಣಿಸಿಕೊಂಡಿರುವ ಬಗ್ಗೆ ವರದಿಗಳು ಬಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ದೀಪಗಳನ್ನು ಆರಿಸಲಾಗಿದೆ. ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಸದ್ಯಕ್ಕೆ ಯಾವುದೇ ವಿದ್ಯುತ್ ಕಡಿತಗೊಂಡಿಲ್ಲ. ಸಶಸ್ತ್ರ ಪಡೆಗಳ ಅಧಿಕಾರಿಗಳು ದೃಢಪಡಿಸಿದಂತೆ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ದಸುಯಾ ಪ್ರದೇಶದಲ್ಲಿ ಕೆಲವು ಸ್ಫೋಟಗಳ ಶಬ್ದಗಳು ಕೇಳಿಬಂದಿವೆ ಎಂದು ಹೋಶಿಯಾರ್‌ಪುರ ಉಪ ಆಯುಕ್ತ ಆಶಿಕಾ ದೃಢಪಡಿಸಿರುವುಗಿ ಎಚ್‌ಟಿ ವರದಿ ಮಾಡಿದೆ. ನಾವು ಈಗಾಗಲೇ ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ಮಾತನಾಡಿದ್ದೇವೆ, ಅವರು ಈ ಪ್ರದೇಶದಲ್ಲಿ ಡ್ರೋನ್ ವೀಕ್ಷಣೆಯೊಂದಿಗೆ ತೊಡಗಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ ಮತ್ತು ಪಾಕಿಸ್ತಾನದೊಂದಿಗಿನ ಯುದ್ಧದ ಕುರಿತು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಸ್ವಲ್ಪ ಸಮಯದ ನಂತರ ಡ್ರೋನ್ ಕಾಣಿಸಿಕೊಂಡಿವೆ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದನ್ನು ಮೋದಿ ಟೀಕಿಸಿದ್ದಾರೆ. ಮಾತುಕತೆ ಮತ್ತು ಭಯೋತ್ಪಾದನೆ, ರಕ್ತ ಮತ್ತು ನೀರು ಒಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+