ಭಾರತದಲ್ಲಿ ಸ್ಪುಟ್ನಿಕ್ v ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ಕೇಳಿದ ರೆಡ್ಡೀಸ್ ಲ್ಯಾಬ್
ನವದೆಹಲಿ,ಅಕ್ಟೋಬರ್ 03: ಭಾರತದಲ್ಲಿ ರಷ್ಯಾದ ಸ್ಪುಟ್ನಿಕ್ v ಕೊರೊನಾ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ರೆಡ್ಡೀಸ್ ಲ್ಯಾಬೊರೇಟರಿ ಡಿಸಿಜಿಐನಿಂದ ಅನುಮತಿ ಕೇಳಿದೆ.
'ಸ್ಪುಟ್ನಿಕ್ ವಿ ಲಸಿಕೆಯ ಮೂರನೇ ಹಂತದ ಕ್ಲಿನಿಕಲ್ಪ್ರಯೋಗಕ್ಕಾಗಿ ರೆಡ್ಡೀಸ್ ಲ್ಯಾಬೊರೇಟರೀಸ್‌ನವರು ಡಿಸಿಜಿಐಗೆ ಅರ್ಜಿ ಸಲ್ಲಿಸಿದ್ದಾರೆ. ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಸಂಸ್ಥೆ ಅನುಮೋದನೆ ನೀಡುವ ಮೊದಲು, ಅರ್ಜಿಯಲ್ಲಿರುವ ತಾಂತ್ರಿಕ ಅಂಶಗಳನ್ನು ಮೌಲ್ಯಮಾಪನ ನಡೆಸಲಿದೆ' ಎಂದು ಮೂಲಗಳು ತಿಳಿಸಿವೆ.
ಇಲ್ಲಿವರೆಗೂ ರೆಡ್ಡೀಸ್ ಲ್ಯಾಬೊರೇಟರಿ ಮತ್ತು ರಷ್ಯಾ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್) ಜಂಟಿಯಾಗಿ ಎರಡು ಹಂತಗಳಲ್ಲಿ ಸ್ಪುಟ್ನಿಕ್ ವಿ ಲಸಿಕೆಯ ಕ್ಲಿನಿಕಲ್ ಟ್ರಯಲ್ ಪೂರ್ಣಗೊಳಿಸಿವೆ.

ರಷ್ಯಾದಲ್ಲಿ ಸೆಪ್ಟೆಂಬರ್ 1ರಿಂದ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ. 40 ಸಾವಿರ ಸ್ವಯಂ ಸೇವಕರು ಈ ಪ್ರಯೋಗಕ್ಕೆ ಒಳಪಡುತ್ತಿದ್ದಾರೆ.
ಭಾರತದಲ್ಲಿ ಕ್ಲಿನಿಕಲ್ ಟ್ರಯಲ್‌ಗೆ ಔಷಧ ನಿಯಂತ್ರಣ ಸಂಸ್ಥೆ ಅನುಮತಿ ನೀಡಿದರೆ, 10 ಕೋಟಿ ಡೋಸೇಜ್‌ಗಳಷ್ಟು ಲಸಿಕೆಯನ್ನು ರೆಡ್ಡಿ ಲ್ಯಾಬೊರೇಟರಿಗೆ ಪೂರೈಸುವುದಾಗಿ ಆರ್‌ಡಿಎಫ್‌ಐ ಕಳೆದ ತಿಂಗಳು ತಿಳಿಸಿತ್ತು.












Click it and Unblock the Notifications