ನಿಮ್ಮ ವಾಟ್ಸಾಪ್‌ನಲ್ಲಿ ಅಪ್ಪಿತಪ್ಪಿಯೂ ಈ ಲಿಂಕ್ ಓಪನ್ ಮಾಡ್ಬೇಡಿ.!
ಈಗಾಗಲೇ ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4ರಂದು ಹೊರಬಿದ್ದಿದ್ದು, ಇದೀಗ ಇದರ ಬೆನ್ನಲ್ಲೇ ನರೇಂದ್ರ ಮೋದಿ ಅವರು ಪ್ರಧಾನಿಯಾದ ಖಷಿಗೆ ಉಚಿತ 3 ತಿಂಗಳು ರಿಚಾರ್ಜ್ ಮಾಡಲಾಗುತ್ತದೆ ಎನ್ನುವ ಸಂದೇಶ ಎಲ್ಲಡೆ ಹರಿದಾಡುತ್ತಿದೆ. ಹಾಗಾದರೆ ಇದು ನಿಜನಾ ಅಥವಾ ಸುಳ್ಳಾ ಎಂಬ ಅಸಲಿ ಸತ್ಯವನ್ನು ಇಲ್ಲಿ ತಿಳಿಯಿರಿ.
ದೇಶದಲ್ಲಿ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಎಸ್‌ಡಿಎ ಸಂಪೂರ್ಣ ಬಹುಮತವನ್ನು ಪಡೆದಿದೆ. ಇದರ ಬೆನ್ನಲ್ಲೇ ಹಲವರು ವಾಟ್ಸಾಪ್ ಸಂದೇಶವನ್ನು ಸ್ವೀಕರಿಸಿಸುತ್ತಿದ್ದು, ಇದರಲ್ಲಿ ಮೋದಿ ಅವರ ಹೆಸರನ್ನು ಬಳಸಿಕೊಂಡು 3 ತಿಂಗಳೂ ಉಚಿತ ರೀಚಾರ್ಜ್ ಮಾಡಲಾಗುತ್ತದೆ ಎಂಬ ಭರವಸೆಯನ್ನು ನೀಡಲಾಗಿದೆ. ಅಲ್ಲದೆ, ಲಿಂಕ್ ಅನ್ನು ಸಹ ಹಂಚಿಕೊಳ್ಳಲಾಗಿದ್ದು, ನೀವು ನಿಮ್ಮ ಜಾಗ್ರತೆಗಾಗಿ ಅಪ್ಪಿತಪ್ಪಿಯೂ ಇದನ್ನು ಕ್ಲಿಕ್ ಮಾಡಲುಹೋಗದಿರುವುದೇ ಒಳಿತು.

ಡಿಜಿಟಲ್ ಯುಗದಲ್ಲಿ ದೊಡ್ಡ ದೊಡ್ಡ ಬದಲಾವಣೆಯಾಗುತ್ತಲಿದ್ದರೆ, ಮತ್ತೊಂದೆಡೆ ಈ ಯುಗ ಬಂದಾಗಿನಿಂದ ಸೈಬರ್ ಕಳ್ಳರು ಹೆಚ್ಚಾಗಿಬಿಟ್ಟಿದ್ದಾರೆ. ಈ ಸೈಬಲ್ ಕಳ್ಳರು ಜನರನ್ನು ಮೋಸಗೊಳಿಸಲು ಹಲವು ತಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೇ ಮೂಲೆಯಲ್ಲಿ ಕುಳಿತುಕೊಂಡು ಅವರು ನಕಲಿ ರೀಚಾರ್ಜ್ ಅನ್ನು ಈತರ ಗಿಫ್ಟ್ ರೀತಿಯ ಪ್ಲಾನ್ ಮಾಡಿ ಅಮಾಯಕ ಜನರನ್ನು ಮೋಸಗೊಳಿಸುತ್ತಿದ್ದಾರೆ.
ಅಷ್ಟೇ ಏಕೆ ಇತ್ತೀಚಿನ ದಿನಗಳಲ್ಲಿ ಎಂತಹ ಬುದ್ಧಿವಂತರಿದ್ದರೂ, ಅಂತಹವರಿಗೆ ಸೈಬರ್ ಕಳ್ಳರು ಮೋಸದ ಬಲೆಗೆ ಬೀಳಿಸಿದೆ ಘಟನೆಗಳು ನಡೆದಿವೆ. ಕೆಲವೊಮ್ಮೆ ಅವರು ನಕಲಿ ಪಾರ್ಸೆಲ್‌ಳಲ್ಲಿನ ಔಷಧಿಗಳನ್ನು ಉಲ್ಲೇಖಿಸುವ ಮೂಲಕ ಬೆದರಿಕೆ ಹಾಕುತ್ತಾರೆ. ಇದೀಗ ಉಚಿತ ಮೊಬೈಲ್ ರೀಚಾರ್ಜ್ ನೆಪದಲ್ಲಿ ಸಂದೇಶ ಹೊರಬಿದ್ದಿದೆ.
Did you receive a #WhatsApp forward claiming that PM Narendra Modi is giving 𝟑 𝐌𝐨𝐧𝐭𝐡𝐬 𝐟𝐫𝐞𝐞 𝐫𝐞𝐜𝐡𝐚𝐫𝐠𝐞 to all Indian users ⁉️#PIBFactCheck
— PIB Fact Check (@PIBFactCheck) January 4, 2024
❌Beware! This claim is 𝐟𝐚𝐤𝐞
✔️Government of India is running 𝐧𝐨 such scheme
✔️This is an attempt to defraud pic.twitter.com/tpBkfDexHo
"ನರೇಂದ್ರ ಮೋದಿಯವರು ಪ್ರಧಾನಿಯಾದ ಸಂತೋಷದಲ್ಲಿ, ಬಿಜೆಪಿ ಪಕ್ಷವು ಎಲ್ಲಾ ಭಾರತೀಯ ಬಳಕೆದಾರರಿಗೆ 599 ರೂಪಾಯಿಗಳ 3 ತಿಂಗಳ ರೀಚಾರ್ಜ್ ಅನ್ನು ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದೆ. ಆದ್ದರಿಂದ ಕೆಳಗಿನ ನೀಲಿ ಲಿಂಕ್‌ನಲ್ಲಿ ನಿಮ್ಮ ಸಂಖ್ಯೆಯನ್ನು ನಮೂದಿಸಿ ರೀಚಾರ್ಜ್ ಮಾಡಿ," ಎನ್ನುವ ವಾಟ್ಸಾಪ್ನಲ್ಲಿ ಸಂದೇಶ ವೈರಲ್ ಆಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಇಂತಹ ಲಿಂಕ್‌ಗಳನ್ನಯ ಕ್ಲಿಕ್ ಮಾಡಿ ಮೋಸದ ಬಲೆಗೆ ಬೀಳಬೇಡಿ.
ರೀಚಾರ್ಜ್ ಮಾಡಲು ನಿಮ್ಮ ಫೋನ್ ನಂಬರ್ ಅನ್ನು ಕೇಳುತ್ತದೆ. ನಂತರ, ಸ್ವೀಕರಿಸಿದ ಸಂದೇಶದಲ್ಲಿ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ, ಅಲ್ಲಿ ವೆಬ್‌ಸೈಟ್ ಓಪನ್ ಆಗಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಬಳಕೆ ಮಾಡಲಾಗುತ್ತದೆ. ಬಳಿಕ ರೀಚಾರ್ಜ್ ಕೊಡುಗೆಯನ್ನು ಪರಿಶೀಲನೆ ಮಾಡಲು ಕೇಳಲಾಗುತ್ತದೆ.
ನಂತರ, ಒಂದು ಪ್ರಕ್ರಿಯೆ ಪ್ರಾರಂಭವಾಗುತ್ತದೆ, ಅದರ ನಂತರ ಒಂದು ಬಾಕ್ಸ್ ತೆರೆಯುತ್ತದೆ. ಅಲ್ಲಿ ಫೋನ್ ಸಂಖ್ಯೆಯನ್ನು ನಮೂದಿಸಲು ಕೇಳುತ್ತದೆ. ನಂತರ, ರೀಚಾರ್ಜ್ ಮಾಡಲು ಅದು ಹೇಳುತ್ತದೆ. ಅದರ ಸ್ಕ್ರೀನ್ ಶಾಟ್‌ಗಳನ್ನು ನಾವು ಇಲ್ಲಿ ಕೆಳಗೆ ಹಾಕಿದ್ದೇವೆ. ಇದಲ್ಲದೆ, ಕೆಳಗೆ ಕೆಲವು ಕಾಮೆಂಟ್‌ಳನ್ನು ಸಹ ಮಾಡಲಾಗಿದೆ. ಇದರಲ್ಲಿ ಧನ್ಯವಾದಗಳು ಮತ್ತು ನನಗೆ ಉಚಿತ ರೀಚಾರ್ಜ್ ಸಿಕ್ಕಿದೆ ಎಂಬಂತಹ ಪದಗಳನ್ನು ಬಳಸಲಾಗಿದೆ.
ಈ ರೀತಿಯ ಸಂದೇಶಗಳು ಜನರನ್ನು ಮೋಸಗೊಳಿಸುವ ಉದ್ದೇಶವನ್ನು ಸಹ ಹೊಂದಿರಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ಇಂತಹ ಸಂದೇಶಗಳನ್ನು ಸ್ವೀಕರಿಸಲು ಹೋಗಬೇಡಿ.
-
ಮುದ್ದೇನಹಳ್ಳಿ ಸತ್ಯಸಾಯಿ ಗ್ರಾಮದಲ್ಲಿ CSR ರಾಷ್ಟ್ರೀಯ ಸಮಾವೇಶ: ವಿಕಸಿತ ಭಾರತ ಚರ್ಚೆ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ












Click it and Unblock the Notifications