ವದಂತಿ ನಂಬಬೇಡಿ; ABCD ಪಾಲನೆ ಮರೆಯಬೇಡಿ ಎಂದ ಕೇಂದ್ರ
ನವದೆಹಲಿ, ಜುಲೈ 13: ಕೊರೊನಾ ಸೋಂಕಿನ ರೂಪಾಂತರಗಳಾದ ಆಲ್ಫಾ, ಬೆಟಾ, ಗಾಮಾ ಅಥವಾ ಡೆಲ್ಟಾ ಸುತ್ತಲಿನ ವದಂತಿಗಳನ್ನು ನಂಬಬೇಡಿ. ಆದರೆ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಅವಶ್ಯವಿರುವ ಶಿಷ್ಟಾಚಾರಗಳನ್ನು ಪಾಲಿಸುವುದನ್ನು ಬಿಡಬೇಡಿ ಎಂದು ಜನರಲ್ಲಿ ಕೇಂದ್ರ ಸರ್ಕಾರ ಜನರಲ್ಲಿ ಮನವಿ ಮಾಡಿದೆ.
ಕೊರೊನಾ ಹಾಗೂ ರೂಪಾಂತರಗಳಿಗೆ ಸಂಬಂಧಿಸಿದಂತೆ ವದಂತಿಗಳನ್ನು ನಂಬಿ ಭಯಭೀತರಾಗಬೇಡಿ. ABCD ನಿಯಮ (A: Advise, B: Believe, C: Cross-check, D: Do NOT promote fear) ಪಾಲಿಸಿ ಎಂದು ಮಾಹಿತಿ ಹಾಗೂ ಪ್ರಸರಣ ಸಚಿವಾಲಯ ಟ್ವೀಟ್ ಮಾಡಿದೆ.
ಕೊರೊನಾ ಸೋಂಕಿನ ಕುರಿತು ಸ್ನೇಹಿತರಿಗೆ, ಸಂಬಂಧಿಗಳಿಗೆ ಸಲಹೆ ನೀಡಿ ಆದರೆ ಭಯ ಮೂಡಿಸಬೇಡಿ. ಅನಗತ್ಯ ಹಾಗೂ ಆಧಾರವಿಲ್ಲದ ಭಯ ಹುಟ್ಟಿಸುವಂಥ ಸಂದೇಶಗಳನ್ನು ಯಾರಿಗೂ ಕಳುಹಿಸಬೇಡಿ ಎಂದಿದೆ.

ಆರೋಗ್ಯ ಸಚಿವಾಲಯ, ಐಸಿಎಂಆರ್, ಏಮ್ಸ್, ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಮಾಹಿತಿಗಳನ್ನಷ್ಟೇ ನಂಬಿ. ಕೊರೊನಾ ವಿರುದ್ಧ ಹೋರಾಡಲು ನೀಡಲಾಗುತ್ತಿರುವ ಲಸಿಕೆಗಳಿಗೆ ಸಂಬಂಧಿಸಿದಂತೆ ಅನಗತ್ಯ ಆತಂಕ ಪಡಬೇಡಿ ಹಾಗೂ ಆತಂಕ ಸೃಷ್ಟಿ ಮಾಡಬೇಡಿ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದೆ.












Click it and Unblock the Notifications