ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸದ ದಿನಾಂಕ ನಿಗದಿ

Recommended Video

      How Donald Trump's India visit is important | Donald Trump | Modi | India | Oneindia Kannada

      ಬೆಂಗಳೂರು, ಫೆಬ್ರವರಿ 11 : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ದಿನಾಂಕ ನಿಗದಿಯಾಗಿದೆ. ಎರಡು ದಿನಗಳ ಭೇಟಿಗಾಗಿ ಟ್ರಂಪ್ ದೇಶಕ್ಕೆ ಆಗಮಿಸುತ್ತಿದ್ದಾರೆ. ಗುಜರಾತ್ ಮತ್ತು ನವದೆಹಲಿಗೆ ಅವರು ಭೇಟಿ ನೀಡಲಿದ್ದಾರೆ.

      ಡೊನಾಲ್ಡ್ ಟ್ರ್ಂಪ್ ಫೆಬ್ರವರಿ 24ರ ಸೋಮವಾರ ಮತ್ತು ಫೆಬ್ರವರಿ 25ರ ಮಂಗಳವಾರ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಕೆಲವು ದಿನಗಳ ಹಿಂದೆ ವೈಟ್ ಹೌಸ್ ಈ ದಿನಾಂಕವನ್ನು ನಿಗದಿ ಮಾಡಿತ್ತು. ಈಗ ಅದನ್ನು ಖಚಿತಪಡಿಸಲಾಗಿದೆ.

      ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸವನ್ನು ಕೈಗೊಳ್ಳಲಿದ್ದಾರೆ. ಪತ್ನಿ ಮಲೆನಿಯಾ ಜೊತೆ ಅವರು ದೇಶಕ್ಕೆ ಆಗಮಿಸುತ್ತಿದ್ದು, ನವದೆಹಲಿ ಮತ್ತು ಗುಜರಾತ್ನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

      ಕಳೆದ ವರ್ಷ ಅಮೆರಿಕದ ಹೂಸ್ಟನ್‌ನಲ್ಲಿ 'ಹೌಡಿ ಮೋಡಿ' ಎಂಬ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ಕಾರ್ಯಕ್ರಮವನ್ನು ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ.

      ಯಾವುದೇ ಮಾಹಿತಿ ನೀಡಿಲ್ಲ

      ಯಾವುದೇ ಮಾಹಿತಿ ನೀಡಿಲ್ಲ

      ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡು ದಿನಗಳ ಕಾಲ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ದೆಹಲಿ ಮತ್ತು ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಲಿದ್ದಾರೆ. ಅಹಮದಾಬಾದ್ ಕಾರ್ಯಕ್ರಮ ಹೊರತುಪಡಿಸಿ ಬೇರೆ ಕಾರ್ಯಕ್ರಮಗಳ ಕುರಿತು ಶ್ವೇತ ಭವನ ಯಾವುದೇ ಮಾಹಿತಿಯನ್ನು ನೀಡಿಲ್ಲ.

      ಗುಜರಾತ್‌ನಲ್ಲಿ ವಾಸ್ತವ್ಯ

      ಗುಜರಾತ್‌ನಲ್ಲಿ ವಾಸ್ತವ್ಯ

      ಎರಡು ದಿನಗಳ ಭೇಟಿಯ ವೇಳೆ ಡೊನಾಲ್ಡ್ ಟ್ರಂಪ್ ಗುಜರಾತ್‌ನ ಐಟಿಸಿ ಮಯೂರ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಅಹಮದಾಬಾದ್‌ನಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣವನ್ನು ಉದ್ಘಾಟನೆ ಮಾಡಲಿದ್ದಾರೆ.

      ವ್ಯಾಪಾರ ಒಪ್ಪಂದಗಳಿಗೆ ಸಹಿ

      ವ್ಯಾಪಾರ ಒಪ್ಪಂದಗಳಿಗೆ ಸಹಿ

      ಭಾರತ ಪ್ರವಾಸದ ವೇಳೆ ಹಲವಾರು ವ್ಯಾಪಾರಿ ಒಪ್ಫಂದಗಳಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಸಹಿ ಹಾಕಲಿದ್ದಾರೆ. ಉಭಯ ದೇಶಗಳ ನಡುವೆ ಯಾವ-ಯಾವ ವ್ಯಾಪಾರ ಒಪ್ಪಂದ ನಡೆಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

      ಗಣರಾಜ್ಯೋತ್ಸವಕ್ಕೆ ಬರುವ ನಿರೀಕ್ಷೆ ಇತ್ತು

      ಗಣರಾಜ್ಯೋತ್ಸವಕ್ಕೆ ಬರುವ ನಿರೀಕ್ಷೆ ಇತ್ತು

      ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಡೊನಾಲ್ಡ್ ಟ್ರಂಪ್ ಮುಖ್ಯ ಅತಿಥಿಗಳಾಗಿ ಆಗಮಿಸುವ ನಿರೀಕ್ಷೆ ಇತ್ತು. ಆದರೆ, ಭಾರತ ಭೇಟಿ ಮುಂದೂಡಲಾಗಿತ್ತು. ಟ್ರಂಪ್ ಭಾರತ ಭೇಟಿಯಿಂದ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಶ್ವೇತ ಭವನ ಹೇಳಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+