ದೇಶದ ಮೊದಲ ಬುಲೆಟ್ ಟ್ರೈನ್ ಎಲ್ಲಿ, ಯಾವಾಗ ಶುರು ಗೊತ್ತಾ?
ನವದೆಹಲಿ, ಡಿಸೆಂಬರ್ 22: ಭಾರತದ ಮೊದಲ ಬುಲೆಟ್ ರೈಲು 2027 ರ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಪ್ರಸಾದ್ ಎಎನ್‌ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಪ್ರಸಾದ್ ಪ್ರಕಾರ, ಎನ್‌ಎಚ್‌ಎಸ್‌ಆರ್‌ಸಿಎಲ್ ಕಂಪನಿಯು ಆಗಸ್ಟ್ 2027ರೊಳಗೆ ಗುಜರಾತ್‌ನಲ್ಲಿ ಬುಲೆಟ್ ರೈಲುಗಳನ್ನು ಓಡಿಸಲು ಪ್ರಯತ್ನಿಸುತ್ತದೆ. ಆದರೆ ಜೂನ್ 2026 ರೊಳಗೆ ಸೂರತ್‌ನಿಂದ ಬಿಲಿಮೋರಾ ನಡುವೆ ಪ್ರಾಯೋಗಿಕ ಓಡಾಟವನ್ನು ನಡೆಸಲಾಗುವುದು. ಹಳಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಇಲ್ಲಿಯವರೆಗೆ 220 ಕಿ.ಮೀ ಕಾರ್ಯ ಪೂರ್ಣಗೊಂಡಿದೆ ಎಂದರು.
ರೈಲು ಯೋಜನೆ ನಿರ್ಮಾಣದಲ್ಲಿ ಸ್ಥಳೀಯ ಭಾಗಗಳನ್ನು ಬಳಸಲಾಗುತ್ತಿದ್ದು, ಇದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ. 220 ಕಿ.ಮೀ ಹಳಿ ಕಾರ್ಯ ಪೂರ್ಣಗೊಂಡಿದೆ. ನಾವು 24 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇವೆ. ಜೂನ್ 2026 ರ ವೇಳೆಗೆ ಸೂರತ್‌ನಿಂದ ಬಿಲ್ಲಿಮೊರಾ ಪ್ರಾಯೋಗಿಕ ಓಟವನ್ನು ಮಾಡಲಾಗುವುದು ಎಂದು ನಮಗೆ ವಿಶ್ವಾಸವಿದೆ ಎನ್‌ಎಚ್‌ಎಸ್‌ಆರ್‌ಸಿಎಲ್ ಎಂಡಿ ಹೇಳಿದರು.
ಶೇ. 98ರಷ್ಟು ಭೂಸ್ವಾಧೀನ ಪೂರ್ಣಗೊಂಡಿರುವುದರಿಂದ ಹೈಸ್ಪೀಡ್ ರೈಲು ನಿಗಮಕ್ಕೆ ಮಹಾರಾಷ್ಟ್ರ ಸರ್ಕಾರದಿಂದ ಉತ್ತಮ ಬೆಂಬಲ ಸಿಕ್ಕಿದೆ. ನಾವು ಟೆಂಡರ್ ಅನ್ನು ತೇಲಿಬಿಟ್ಟಿದ್ದೇವೆ. ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಸಿವಿಲ್ ಎಂಜಿನಿಯರಿಂಗ್ ಕೆಲಸವನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು. ಯೋಜನೆಯಲ್ಲಿ ಭಾರತ ಮತ್ತು ಜಪಾನ್ ಸಹಯೋಗದ ಕುರಿತು ತಿಳಿಸಿದ ಎಂಡಿ ಪ್ರಸಾದ್, ಜಪಾನ್ ಶಿಂಕನ್‌ಸೆನ್ ಬುಲೆಟ್ ರೈಲಿನಲ್ಲಿ ಶೂನ್ಯ ಸಾವಿನ ದಾಖಲೆ ಹೊಂದಿದೆ ಮತ್ತು ಸುರಕ್ಷತೆಯ ದಾಖಲೆಯನ್ನು ಹೊಂದಿದೆ. ಜಪಾನ್‌ನ ಗುಣಮಟ್ಟ ಜಗತ್ತಿಗೆ ತಿಳಿದಿದೆ. ನಮ್ಮ ಎಂಜಿನಿಯರ್‌ಗಳು ಜಪಾನ್‌ನಲ್ಲಿಯೂ ತರಬೇತಿ ಪಡೆಯುತ್ತಾರೆ ಎಂದರು.
ದೇಶದ ಮೊದಲ ಬುಲೆಟ್ ರೈಲು ಯೋಜನೆಯು ಭಾರತದ ಆರ್ಥಿಕ ಕೇಂದ್ರವಾದ ಮುಂಬೈಯನ್ನು ಅಹಮದಾಬಾದ್ ನಗರದೊಂದಿಗೆ ಸಂಪರ್ಕಿಸುತ್ತದೆ. ಕಾಮಗಾರಿಯ ಪ್ರಾರಂಭೋತ್ಸವವು 14 ಸೆಪ್ಟೆಂಬರ್ 2017 ರಂದು ನಡೆಯಿತು. ಭಾರತ ಮತ್ತು ಜಪಾನ್ ನಡುವಿನ ಸಹಕಾರ ಒಪ್ಪಂದದ ಭಾಗವಾಗಿ, ಜಪಾನ್ ಸರ್ಕಾರವು ದೇಶದ ಈ ಕ್ರಾಂತಿಕಾರಿ ರೈಲು ಯೋಜನೆಗೆ 0.1% ರಷ್ಟು ಕಡಿಮೆ ಬಡ್ಡಿ ದರದಲ್ಲಿ 88,000 ಕೋಟಿ ರೂ. ಸಾಲವನ್ನು ಮರುಪಾವತಿ ಅವಧಿ 50 ವರ್ಷಗಳಿಗೆ ನೀಡಿದೆ. ಸಾಲ ಪಡೆದ 15 ವರ್ಷಗಳ ನಂತರ ಸಾಲದ ಮರುಪಾವತಿ ಪ್ರಾರಂಭವಾಗುತ್ತದೆ.

ಡಬಲ್ ಲೈನ್ ಮಾರ್ಗ
ಮುಂಬೈ ಅಹಮದಾಬಾದ್ ಹೈಸ್ಪೀಡ್ ರೈಲು ಯೋಜನೆಯ ಪ್ರಮುಖ ಮಾಹಿತಿ, 1. ಬುಲೆಟ್ ರೈಲಿನ ಮಾರ್ಗದ ಉದ್ದ 508 ಕಿಮೀಗಳು (ಅಂದಾಜು.), ಎರಡು ರಾಜ್ಯಗಳ ಮೂಲಕ ಡಬಲ್ ಲೈನ್, ಮಹಾರಾಷ್ಟ್ರ (156 ಕಿಮೀಗಳು) ಮತ್ತು ಗುಜರಾತ್ (351 ಕಿಮೀಗಳು), ಮತ್ತು ದಾದ್ರಾ ಮತ್ತು ನಗರ ಹವೇಲಿಯ ಕೇಂದ್ರಾಡಳಿತ ಪ್ರದಶದ 2 ಕಿಮೀಗಳು ಒಳಗೊಂಡಿರುತ್ತದೆ.

ಒಟ್ಟು 12 ನಿಲ್ದಾಣಗಳು
2. ರೈಲ್ವೆ ಉದ್ದದ ಸುರಂಗ 21 ಕಿಮೀ, 7 ಕಿಮೀ ಸಮುದ್ರದೊಳಗಿನ (ಥಾನೆ ಮಾರ್ಗ). 3. ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳು ಮುಂಬೈ, ಥಾಣೆ, ವಿರಾರ್, ಬೋಯ್ಸರ್, ವಾಪಿ, ಬಿಲಿಮೋರಾ, ಸೂರತ್, ಭರೂಚ್, ವಡೋದರಾ, ಆನಂದ್, ಅಹಮದಾಬಾದ್, ಸಬರಮತಿ. ಭೂಗತ ನಿಲ್ದಾಣ ಮುಂಬೈ ಇವೇ ಮೊದಲಾದವು.

ಕಾರ್ಯಾಚರಣೆಯ ವೇಗ ಗಂಟೆಗೆ 320 ಕಿಮೀ
4. ರೈಲಿನ ಗರಿಷ್ಠ ವಿನ್ಯಾಸ ವೇಗ ಗಂಟೆಗೆ 350 ಕಿಮೀ. 5 ಗರಿಷ್ಠ ಕಾರ್ಯಾಚರಣೆಯ ವೇಗ ಗಂಟೆಗೆ 320 ಕಿಮೀ. 6 ಪ್ರಯಾಣದ ಸಮಯ: 7ರಿಂದ 8 ಗಂಟೆಗಳ ಈಗ ಚಲನೆಯಾಗುತ್ತಿರುವ ಇತರ ರೈಲು ಪ್ರಯಾಣದ ಸಮಯಕ್ಕೆ ಹೋಲಿಸಿದರೆ 2.07 ಗಂಟೆಗಳು (ಸೀಮಿತ ನಿಲುಗಡೆಗಳು), 2.58 ಗಂಟೆಗಳು (ಮತ್ತೊಂದು ಮಾರ್ಗದಲ್ಲಿ)

ಕಾರ್ಯಾಚರಣೆಗಾಗಿ 4,000 ನೇರ ಉದ್ಯೋಗಿಗಳು
ಬುಲೆಟ್ ರೈಲಿನಿಂದ ಆರ್ಥಿಕತೆ ಮತ್ತು ಉದ್ಯೋಗಕ್ಕೆ ಉತ್ತೇಜನವಾಗುವ ಸಂಗತಿಗಳೆಂದರೆ. 1.20,000 ಉದ್ಯೋಗಗಳ ನಿರ್ಮಾಣ, 2. ಕಾರ್ಯಾಚರಣೆಗಾಗಿ 4,000 ನೇರ ಉದ್ಯೋಗಿಗಳು ಮತ್ತು 20,000 ಪರೋಕ್ಷ ಉದ್ಯೋಗಗಳು, 3. ಕಾರಿಡಾರ್ ಉದ್ದಕ್ಕೂ ನಗರ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಉತ್ತೇಜನ, 4. ನಗರಗಳ ನಡುವಿನ ಪ್ರಯಾಣದ ಸುಲಭ ಮತ್ತು ಪ್ರಯಾಣಕ್ಕಾಗಿ ಅಗಾಧ ಸಾಮರ್ಥ್ಯ, 5. ಇತರ ಹೆಚ್ಚಿನ ವೇಗದ ಯೋಜನೆಗಳಿಗೆ ಸಾಮರ್ಥ್ಯ ನಿರ್ಮಾಣ ಇವೇ ಮೊದಲಾದವು.












Click it and Unblock the Notifications