ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.ಕೆ. ಶಿವಕುಮಾರ್ ಕಾಂಗ್ರೆಸ್‌ನ ಎಟಿಎಂ: ಸಂಬಿತ್ ಪಾತ್ರಾ ಆರೋಪ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 19: ಕರ್ನಾಟಕದ ರಾಜ್ಯ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಎಐಸಿಸಿಯ ಎಟಿಎಂ ಇದ್ದಂತೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಆರೋಪಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಆಪ್ತರಾಗಿರುವ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಆದಾಯ ತೆರಿಗೆ ಇಲಾಖೆಯ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಪಾತ್ರಾ ಸುದ್ದಿಗೊಷ್ಠಿಯಲ್ಲಿ ಹೇಳಿದ್ದಾರೆ.

2017ರಲ್ಲಿ ಐಟಿ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಕರ್ನಾಟಕದಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿಯೇ ದೆಹಲಿಯಲ್ಲಿಯೂ ದಾಳಿ ನಡೆಸಲಾಗಿತ್ತು. ಆಗ ಮಹತ್ವಪೂರ್ಣ ದಾಖಲೆಗಳು ದೊರೆತಿದ್ದವು. ಈ ಸಂಬಂಧ ಐಟಿ ಮತ್ತು ಇಡಿಗಳು ಪ್ರತ್ಯೇಕವಾಗಿ ಡಿ.ಕೆ. ಶಿವಕುಮಾರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದವು.

'ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ''ಕೇಜಿ ಲೆಕ್ಕದಲ್ಲಿ ಹಣ ತೂಕ ಹಾಕಿ ಕೈ ಹೈ ಕಮಾಂಡ್ ಗೆ ತಲುಪಿಸಿದ್ದಾರೆ'

ಐಟಿ ಇಲಾಖೆ ದಾಖಲಿಸಿದ್ದ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಮತ್ತು ಇತರೆ ಐವರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾರೆ.

ಡಿ.ಕೆ.ಶಿ ಆಪ್ತರ ತಪ್ಪೊಪ್ಪಿಗೆ

ಡಿ.ಕೆ.ಶಿ ಆಪ್ತರ ತಪ್ಪೊಪ್ಪಿಗೆ

ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ ಇಬ್ಬರು ವ್ಯಕ್ತಿಗಳ ನಿವಾಸದ ಮೇಲೆಯೂ ದಾಳಿ ನಡೆದಿತ್ತು. ಅದರಲ್ಲಿ ಒಬ್ಬರು ದೆಹಲಿಯ ಕರ್ನಾಟಕ ಭವನದ ನೌಕರನಾಗಿದ್ದ ಆಂಜನೇಯ ಹನುಮಂತಯ್ಯ, ಮತ್ತೊಬ್ಬರು ರಾಜೇಂದ್ರ.

ಡಿ.ಕೆ. ಶಿವಕುಮಾರ್ ಅವರಿಗೆ ಸಹಾಯ ಮಾಡಲೆಂದೇ ಆಂಜನೇಯ ಅವರನ್ನು ಕರ್ನಾಟಕ ಸರ್ಕಾರ ನಿಯೀಜನೆ ಮಾಡುತ್ತಿತ್ತು. ಆಂಜನೇಯ, ಡಿ.ಕೆ. ಶಿವಕುಮಾರ್ ಅವರಿಂದ ಪಡೆದ ಹಣವನ್ನು ಚಾಂದಿನಿ ಚೌಕ್‌ನಿಂದ ಎಐಸಿಸಿ ಕಚೇರಿಗೆ ಸಾಗಿಸುತ್ತಿದ್ದರು. ಮತ್ತೊಬ್ಬ ಅಧಿಕಾರಿ ರಾಜೇಂದ್ರ ಸಹ ಕಚೇರಿಗೆ ಹಣ ತಂದಿದ್ದರು. ರಾಜೇಂದ್ರ ಹಣ ತಂದಾಗ ಜಗದೀಶ್ ಚಾಂದ್ ಕೂಡ ಜತೆಗಿದ್ದ ಎಂದು ಪಾತ್ರಾ ವಿವರಿಸಿದ್ದಾರೆ.

ಡಿ.ಕೆ ಶಿವಕುಮಾರ್ ಮತ್ತೊಂದು ಎಫ್‌ಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯಡಿ.ಕೆ ಶಿವಕುಮಾರ್ ಮತ್ತೊಂದು ಎಫ್‌ಐಆರ್ ದಾಖಲಿಸಿದ ಜಾರಿ ನಿರ್ದೇಶನಾಲಯ

ಸಫ್ದರ್ ಜಂಗ್‌ನಲ್ಲಿರುವ ಫ್ಲ್ಯಾಟ್

ಸಫ್ದರ್ ಜಂಗ್‌ನಲ್ಲಿರುವ ಫ್ಲ್ಯಾಟ್

ಎಐಸಿಸಿಗೆ ಅಂದಾಜು ನಾಲ್ಕು ಕೋಟಿ ರೂ. ನೀಡಿರುವುದಾಗಿ ಆಂಜನೇಯ ಐಟಿ ವಿಚಾರಣೆ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ನಾನು ಡಿ.ಕೆ. ಶಿವಕುಮಾರ್ ಅವರ ನಂಬಿಕೆಯ ವ್ಯಕ್ತಿ. ಡಿ.ಕೆ.ಶಿವಕುಮಾರ್ ಅವರು ದೆಹಲಿಗೆ ಬಂದಾಗ ಅವರ ಜತೆಯೇ ಇರುತ್ತಿದ್ದೆ. ಸೂಕ್ತ ವ್ಯಕ್ತಿಯಿಂದ ಹಣ ಸಂಗ್ರಹಿಸಿ ಅದನ್ನು ಸಫ್ದರ್ ಜಂಗ್‌ನಲ್ಲಿರುವ ಶಿವಕುಮಾರ್ ಅವರ ಫ್ಲ್ಯಾಟ್‌ನಲ್ಲಿ ಇರಿಸುತ್ತಿದ್ದೆ. ಫ್ಲ್ಯಾಟ್‌ನ ಕೀಯನ್ನು ಕೆ.ಆರ್. ಪುರಂನಲ್ಲಿರುವ ಮನೆಯಲ್ಲಿ ಇರಿಸುತ್ತಿದ್ದೆ.

ಒಂದು ವರ್ಷದಿಂದ ರಾಜೇಂದ್ರ ಈ ಹಣದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ಹಣದ ಮೊತ್ತವನ್ನು ಕೆ.ಜಿ. ಎಂದು ಕೋಡ್‌ವರ್ಡ್ ನಲ್ಲಿ ನಮೂದು ಮಾಡಲಾಗುತ್ತಿತ್ತು ಎಂದು ಆಂಜನೇಯ ಹೇಳಿದ್ದಾಗಿ ಪಾತ್ರಾ ತಿಳಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ಗೆ ಜಾಮೀನು, ಬೀಸೋ ದೊಣ್ಣೆಯಿಂದ ಪಾರುಡಿ.ಕೆ.ಶಿವಕುಮಾರ್‌ಗೆ ಜಾಮೀನು, ಬೀಸೋ ದೊಣ್ಣೆಯಿಂದ ಪಾರು

20 ಕೋಟಿ ರೂಪಾಯಿ ಪತ್ತೆ

20 ಕೋಟಿ ರೂಪಾಯಿ ಪತ್ತೆ

20 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಹಣ ಡಿಕೆಶಿ ಮನೆಯಲ್ಲಿ ಸಿಕ್ಕಿದೆ. 2018ರ ಜೂನ್ 21ರಂದು ಎಐಸಿಸಿಗೆ 2 ಮತ್ತು 3 ಕೋಟಿ ರೂ. ಹಣವನ್ನು ನೀಡಲಾಗಿದೆ. ಡಿಕೆಶಿ ಹವಾಲ ಹಣವನ್ನು ಎಐಸಿಸಿಗೆ ಡೆಪಾಸಿಟ್ ಮಾಡುತ್ತಾ ಇದ್ದಾರೆ. ಅವರು ಎಐಸಿಸಿಗೆ ಒಂದು ರೀತಿ ಎಟಿಎಂ ಇದ್ದಂತೆ. ಎಐಸಿಸಿಗೆ ಹಣ ಬರುವ ವಿಚಾರದಲ್ಲಿ ಡಿ.ಕೆ. ಶಿವಕುಮಾರ್ ಕಿಂಗ್‌ಪಿನ್. ಹವಾಲ ದಂಧೆಕೋರರ ಮೂಲಕವೇ ಹಣ ಸಂದಾಯವಾಗುತ್ತಿತ್ತು.

ಬೆಂಗಳೂರಿನಲ್ಲಿ ಸೈಟ್ ಕೊಡುವುದಾಗಿ ಭರವಸೆ ನೀಡಿದ್ದ ಡಿಕೆಶಿಬೆಂಗಳೂರಿನಲ್ಲಿ ಸೈಟ್ ಕೊಡುವುದಾಗಿ ಭರವಸೆ ನೀಡಿದ್ದ ಡಿಕೆಶಿ

ಎಸ್‌ಜಿ, ಆರ್‌ಜಿ ಕೋಡ್‌ವರ್ಡ್

ಎಸ್‌ಜಿ, ಆರ್‌ಜಿ ಕೋಡ್‌ವರ್ಡ್

ಡೈರಿಯಲ್ಲಿ ಎಸ್‌ಜಿ ಮತ್ತು ಆರ್‌ಜಿ ಎಂದು ನಮೂದಿಸಲಾಗಿದೆ. ಎಸ್‌ಜಿ ಅಂದರೆ ಸೋನಿಯಾ ಗಾಂಧಿ ಮತ್ತು ಆರ್‌ಜಿ ಎಂದರೆ ರಾಹುಲ್ ಗಾಂಧಿ ಎಂದು ಡೈರಿ ದಾಖಲೆಗಳನ್ನು ಅವರು ಬಿಡುಗಡೆ ಮಾಡಿದರು.

ಎಐಸಿಸಿಗೆ ವಿವಿಧ ಮೂಲಗಳಿಂದ 600 ಕೋಟಿಗೂ ಹೆಚ್ಚು ಹಣ ಹೋಗಿದೆ. ಕರ್ನಾಟಕದಿಂದ ಕಾಂಗ್ರೆಸ್‌ಗೆ ಹಣ ಬರುವುದು ಬಯಲಾಗಿದೆ.

ಹಣದ ಮೊತ್ತವನ್ನು ಕೆ.ಜಿ ಎಂಬ ಕೋಡ್‌ವರ್ಡ್‌ನಲ್ಲಿ ನಮೂದು ಮಾಡಲಾಗುತ್ತಿತ್ತು. ಸ್ವತಃ ಕಾಂಗ್ರೆಸ್ ಹವಾಲ ಜಾಲವನ್ನು ನಡೆಸುತ್ತಿದೆ. ಕರ್ನಾಟಕದಿಂದ ಎಐಸಿಸಿಗೆ ಹಣ ವರ್ಗಾವಣೆ ಮಾಡುವುದಕ್ಕೆ ಹವಾಲ ಜಾಲ ನೆರವು ನೀಡಿರುವುದಕ್ಕೆ ಸಾಕ್ಷ್ಯ ಇದೆ ಎಂದು ಪಾತ್ರಾ ತಿಳಿಸಿದ್ದಾರೆ.

ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್‌ನಾನು ತಪ್ಪು ಮಾಡಿಲ್ಲ, ಹೆದರಲ್ಲ, ಹೇಡಿಯಲ್ಲ: ಡಿ.ಕೆ.ಶಿವಕುಮಾರ್‌

English summary
BJP spokeperson Sambit Patra alleged that Congress Minister DK Shivakumar is a ATM of AICC. He sent the Hawala money to the Congress office through Karnataka Bhavan employee Anjaneya Hanumanthaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X