ಸೆಕ್ಸ್ ವಿಡಿಯೋ ವೈರಲ್, ಬಿಜೆಪಿ ಅಧ್ಯಕ್ಷ ರಾಜೀನಾಮೆ
ದಿಯು-ದಮನ್, ನವೆಂಬರ್ 20: ಬಿಜೆಪಿಯ ಮತ್ತೊಬ್ಬ ಪ್ರಮುಖ ನಾಯಕನ ಲೈಂಗಿಕ ಕರ್ಮಕಾಂಡ ಬಯಲಾಗಿದೆ.
ದಿಯು-ದಾಮನ್ ಕೇಂದ್ರಾಡಳಿತ ಪ್ರದೇಶದ ಬಿಜೆಪಿ ಅಧ್ಯಕ್ಷ ಗೋಪಾಲ್ ಟಂಡೆಲ್ ಅವರ ಸೆಕ್ಸ್ ವಿಡಿಯೋ ವೈರಲ್ ಆಗಿದ್ದು, ಭಾರಿ ವಿವಾದ ಸೃಷ್ಟಿಸಿದೆ.
ಇದರಿಂದ ನೊಂದಿರುವ ಗೋಪಾಲ್ ಟಂಡೆಲ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ರವಾನಿಸಿದ್ದರು. ಅದನ್ನು ಅಮಿತ್ ಶಾ ಅಂಗೀಕರಿಸಿದ್ದಾರೆ.

ಗೋಪಾಲ್ ಟಂಡೆಲ್ ಅವರು ಸಂಸದರಾಗಿಯೂ ಕಾರ್ಯನಿರ್ವಹಿಸಿದ್ದರು. ಈ ಮುನ್ನಾ ಕಾಂಗ್ರೆಸ್ ಹಾಗೂ ಎನ್‌ಸಿಪಿ ಪಕ್ಷದಲ್ಲಿದ್ದ ಟಂಡೆಲ್ ನಂತರ ಬಿಜೆಪಿ ಸೇರ್ಪಡೆಯಾಗಿ ದಿಯು-ದಮನ್ ಅಧ್ಯಕ್ಷರೂ ಆಗಿದ್ದರು.
63 ವರ್ಷದ ಗೋಪಾಲ್ ಟಂಡೆಲ್ ಅವರದ್ದು ಎನ್ನಲಾಗಿರುವ 36 ಸೆಕೆಂಡ್‌ಗಳ ವಿಡಿಯೋ ಒಂದು ವೈರಲ್ ಆಗಿದ್ದು. ವಿಡಿಯೋನಲ್ಲಿ ಮಹಿಳೆಯೊಬ್ಬರೊಂದಿಗೆ ಅವರು ಅನುಚಿತವಾಗಿ ವರ್ತಿಸುತ್ತಿರುವ ದೃಶ್ಯಗಳಿವೆ. ಆದರೆ ಈ ವಿಡಿಯೋ ನಕಲಿ ಎಂದು ಗೋಪಾಲ್ ಟಂಡೆಲ್ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಹಿಂದೆ ತಮ್ಮದೇ ಪಕ್ಷದ ಸದಸ್ಯರ ಕೈವಾಡ ಇದೆಯೆಂದು ಗೋಪಾಲ್ ಟಂಡೆಲ್ ದೂರಿದ್ದಾರೆ. ಪೊಲೀಸರಿಗೂ ಕೆಲವರ ವಿರುದ್ಧ ಮೌಖಿಕ ದೂರು ನೀಡಿದ್ದಾರೆ ಎನ್ನಲಾಗಿದೆ.












Click it and Unblock the Notifications