Lok Sabha Poll: ಕರ್ನಾಟಕದಲ್ಲಿ ಮತ್ತೆ ಬಿಜೆಪಿಯೇ ಕಿಂಗ್?
ಲೋಕಸಭೆ ಚುನಾವಣೆ ಹತ್ತಿರದಲ್ಲೇ ಇದೆ, ಅದರಲ್ಲೂ 2024ರ ಪಾರ್ಲಿಮೆಂಟ್ ಎಲೆಕ್ಷನ್ ಇಡೀ ಜಗತ್ತಿನ ಗಮನ ಸೆಳೆಯುತ್ತಿದೆ. ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಪ್ರಕಾರ ಈಗ ಲೋಕಸಭೆಗೆ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಬಹುಮತವನ್ನು ಗಳಿಸುವ ಮುನ್ಸೂಚನೆ ಸಿಕ್ಕಿದೆ. ಅದರಲ್ಲೂ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಭರ್ಜರಿ ಸ್ಥಾನ ಪಡೆದು ಅರಳೋದು ಬಹುತೇಕ ಪಕ್ಕಾ ಆಗಿದೆ.
ಹೌದು, ಅಕಸ್ಮಾತ್ ಈಗಲೇ ಲೋಕಸಭೆಗೆ ಚುನಾವಣೆ ನಡೆದರೆ ಒಟ್ಟು 543 ಸ್ಥಾನಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 318 ಸ್ಥಾನ ಗೆಲ್ಲುತ್ತೆ ಎಂದು ಸಮೀಕ್ಷೆ ಹೇಳಿದೆ. ಹಾಗೂ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ 175 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಅದರಲ್ಲೂ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಮತ್ತೊಮ್ಮೆ ಕಮಾಲ್ ಮಾಡುವ ನಿರೀಕ್ಷೆ ಇದ್ದು, 28 ಲೋಕಸಭಾ ಕ್ಷೇತ್ರಗಳ ಪೈಕಿ, ಈಗಲೇ ಚುನಾವಣೆ ನಡೆದರೆ ಬಿಜೆಪಿ 20 ಸೀಟು ಗೆಲ್ಲಲಿದೆ. ಇನ್ನು 7 ಸ್ಥಾನ ಕಾಂಗ್ರೆಸ್ ಪಾಲಾಗಲಿದ್ದರೆ, ಜೆಡಿಎಸ್ ಒಂದು ಸ್ಥಾನವನ್ನು ಉಳಿಸಿಕೊಳ್ಳಲಿದೆ. 2019ರಲ್ಲಿ ಬಿಜೆಪಿ 25 ಸೀಟು ಗೆದ್ದಿತ್ತು. ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ತಲಾ ಒಂದು ಸ್ಥಾನ ಗೆದ್ದಿದ್ದರು.

ವಿಧಾನಸಭೆ ಬೇರೆ, ಲೋಕಸಭೆ ಬೇರೆ?
ಅಷ್ಟಕ್ಕೂ ಇದೇ ವರ್ಷ ಮೇ ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, 130ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಇದೀಗ ಲೋಕಸಭೆ ಚುನಾವಣೆಯ ಸಮೀಕ್ಷೆ ಹೊರಬಿದ್ದಿದ್ದು, ತಕ್ಷಣ ಚುನಾವಣೆ ನಡೆದರೆ ಬಿಜೆಪಿ ಮತ್ತೆ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಲೋಕಸಭೆ ಚುನಾವಣೆಗೆ ಇನ್ನೂ 10 ತಿಂಗಳು ಬಾಕಿ ಇರುವ ಸಂದರ್ಭದಲ್ಲೇ ಬಿಜೆಪಿಗೆ ಇದು ಹೊಸ ಹುಮ್ಮಸ್ಸು ತುಂಬಿದೆ. ಹಾಗೇ ವಿರೋಧ ಪಕ್ಷಗಳ ನಾಯಕರನ್ನು ಎಚ್ಚರಿಸಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಇದರ ಜೊತೆಗೆ ವಿಧಾನಸಭೆ ಚುನಾವಣೆ ಸೋಲಿಗೂ ಲೋಕಸಭೆಯಲ್ಲಿ ಮದ್ದು ಸಿಗುವ ಮುನ್ಸೂನೆ ಸಿಕ್ಕಂತಾಗಿದೆ.
ಸಮೀಕ್ಷೆ ನಡೆದಿದ್ದು ಹೇಗೆ?
ಹೌದು, ದೇಶಾದ್ಯಂತ ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ ಸಾಕಷ್ಟು ಸದ್ದು ಮಾಡಿದೆ. ಇನ್ನು ಸಮೀಕ್ಷೆಗಾಗಿ ಹಲವು ರಾಜ್ಯಗಳಿಂದ ಜನಾಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಪೈಕಿ ಕರ್ನಾಟಕ, ಗುಜರಾತ್, ಹಿಮಾಚಲ ಪ್ರದೇಶ, ಹರ್ಯಾಣ, ದಿಲ್ಲಿ ಸೇರಿ ಮಧ್ಯಪ್ರದೇಶ, ಛತ್ತೀಸಗಡ, ಜಾರ್ಖಂಡ್ ಮತ್ತು ಮಣಿಪುರ ಹೊರತುಪಡಿಸಿ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಸ್ಪಷ್ಟ ಮುನ್ನಡೆ ಪಡೆಯಬಹುದು ಎಂಬ ನಿರೀಕ್ಷೆ ಮೂಡಿದೆ. ತಮಿಳುನಾಡು, ಪಂಜಾಬ್, ಮಣಿಪುರ ಮತ್ತು ಬಿಹಾರ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಮೇಲುಗೈ ಸಾಧಿಸಲಿವೆ ಅಂತಾ ಹೇಳಲಾಗಿದೆ.

ಕರ್ನಾಟಕದಲ್ಲಿ ಜೆಡಿಎಸ್ & ಬಿಜೆಪಿ ಮೈತ್ರಿ?
ಇನ್ನು ಈಗಾಗಲೇ ಕೇಳಿಬರುತ್ತಿರುವ ಮಾತಿನ ಪ್ರಕಾರ ಮುಂಬರುವ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಜೊತೆ ಜೆಡಿಎಸ್ ಕೈಜೋಡಿಸಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ಮಾತು ನಿಜವಾದರೆ ಬಿಜೆಪಿಗೆ ಮತ್ತಷ್ಟು ಬಲ ಸಿಗಲಿದೆ. ಈಗ ನಡೆದಿರುವ ಸಮೀಕ್ಷೆಯಂತೆ ತಕ್ಷಣಕ್ಕೆ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಶೇಕಡಾ 47ರಷ್ಟು ಮತ, ಕಾಂಗ್ರೆಸ್ ಶೇ. 40ರಷ್ಟು ಮತ ಗಳಿಸಿದರೆ ಜೆಡಿಎಸ್ ಶೇಕಡಾ 9ರಷ್ಟು ಮತ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ. ಈ ಮೂಲಕ ಎನ್‌ಡಿಎ & ಇಂಡಿಯಾ ಮೈತ್ರಿಕೂಟಗಳ ನಡುವೆ ಜಿದ್ದಾಜಿದ್ದಿ ಮತ್ತಷ್ಟು ಹೆಚ್ಚುವ ಮುನ್ಸೂಚನೆ ಸಿಕ್ಕಿದೆ.
ಪ್ರಮುಖ ರಾಜ್ಯಗಳ ಸ್ಥಾನ ಹಂಚಿಕೆ
ಕರ್ನಾಟಕ:
ಬಿಜೆಪಿ- 20
ಕಾಂಗ್ರೆಸ್- 07
ಜೆಡಿಎಸ್- 01
ಉತ್ತರ ಪ್ರದೇಶ:
ಎನ್‌ಡಿಎ- 73
ಇಂಡಿಯಾ- 07
ಒಟ್ಟು ಸ್ಥಾನ- 80

ಮಹಾರಾಷ್ಟ್ರ:
ಬಿಜೆಪಿ- 20
ಕಾಂಗ್ರೆಸ್- 09
ಶಿವಸೇನೆ (ಶಿಂಧೆ ಬಣ)- 02
ಶಿವಸೇನಾ (ಉದ್ಧವ್ ಬಣ)- 11
ಎನ್‌ಸಿಪಿ (ಅಜಿತ್ ಬಣ)- 02
ಎನ್‌ಸಿಪಿ (ಶರದ್ ಬಣ)- 04
ಒಟ್ಟು ಸ್ಥಾನ- 48
ಬಿಹಾರ:
ಬಿಜೆಪಿ- 17
ಜೆಡಿಯು- 16
ಎಲ್‌ಜೆಪಿ- 06
ಕಾಂಗ್ರೆಸ್- 01
ಒಟ್ಟು ಸ್ಥಾನ- 40
ತಮಿಳುನಾಡು:
ಡಿಎಂಕೆ- 24
ಕಾಂಗ್ರೆಸ್- 08
ಸಿಪಿಎಂ- 02
ಸಿಪಿಐ- 02
ಇತರರು- 03
ಒಟ್ಟು ಸ್ಥಾನ- 39












Click it and Unblock the Notifications