G20 Summit: ಭಾರತದ ಸ್ನೇಹಕ್ಕೆ ಜೈ ಅಂತು ಚೀನಾ, ಕಾರಣ ತಿಳಿಯಿರಿ!

ಭಾರತ ಮತ್ತು ಚೀನಾ ನಡುವೆ ಏನೂ ಸರಿಯಿಲ್ಲ, ಅದರಲ್ಲೂ ಗಡಿ ವಿಚಾರದಲ್ಲಿ ಪದೇ ಪದೆ ಚೀನಾ ಕಿರಿಕ್ ಮಾಡುತ್ತಲೇ ಇದೆ. ಹೀಗಾಗಿ ಭಾರತದ ಸೈನಿಕರಿಗೂ ಮತ್ತು ಚೀನಾದ ಸೈನಿಕರಿಗೂ ಗಡಿಯಲ್ಲಿ ಕಿತ್ತಾಟ ನಡೆಯುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಏಷ್ಯಾದ ಅಕ್ಕಪಕ್ಕದ ದೇಶಗಳ ನಡುವೆ ಸ್ನೇಹ ಇರಲಿ ಎಂಬುದು ಜಗತ್ತಿನ ಆಶಯ. ಆದರೆ ಇದೇ ಹೊತ್ತಲ್ಲಿ G20 ಶೃಂಗಸಭೆಗೂ ಚೀನಾ ಅಧ್ಯಕ್ಷರು ಬರುತ್ತಿಲ್ಲ. ಹೀಗಿದ್ದಾಗಲೇ ಚೀನಾ ಸರ್ಪ್ರೈಸ್ ಕೊಟ್ಟಿದೆ.

ಅಂದಹಾಗೆ ಈಗಾಗಲೇ ಚೀನಾ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್ ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಗೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಬಗ್ಗೆ ಚೀನ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಆದರೆ ಶೃಂಗಸಭೆಗಾಗಿ ಚೀನಾ ಪ್ರಧಾನಿ ಮಾತ್ರ ಭಾರತಕ್ಕೆ ಬರಲಿದ್ದಾರೆ ಎನ್ನಲಾಗಿತ್ತು. ಇಷ್ಟೆಲ್ಲದರ ನಡುವೆ ಮತ್ತೆ ಭಾರತ ಹಾಗೂ ಚೀನಾ ನಡುವೆ ಸಂಬಂಧವು ಹಳಸಿ ಹೋಗಲಿದೆ ಎಂಬ ಬೇಸರವು ಶುರುವಾಗಿತ್ತು. ಆದ್ರೆ ಎಲ್ಲದಕ್ಕೂ ಉತ್ತರ ನೀಡಿರುವ ಚೀನಾ, ಭಾರತದ ಜೊತೆಗಿನ ಸ್ನೇಹಕ್ಕೆ ಜೈ ಎಂದಿದೆ.

g20-summit

ಭಾರತದ ಬಗ್ಗೆ ಚೀನಾ ಹೇಳಿದ್ದು ಏನು?

ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನವದೆಹಲಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಆತಿಥ್ಯ ವಹಿಸಲು ಭಾರತಕ್ಕೆ ಅಗತ್ಯವಿರುವ ಎಲ್ಲ ಬೆಂಬಲ ನೀಡುತ್ತೇವೆ ಎಂದು ಚೀನಾ ಈಗ ಹೇಳಿಕೆ ನೀಡಿದೆ. ಅಂತಾರಾಷ್ಟ್ರೀಯ ಆರ್ಥಿಕ ಸಹಕಾರಕ್ಕೆ ಜಿ20 ಶೃಂಗಸಭೆ ಪ್ರಮುಖ ಹಾಗೂ ಮುಂಚೂಣಿ ವೇದಿಕೆ ಎಂಬುದನ್ನೂ ಚೀನಾ ಪ್ರಸ್ತಾಪಿಸಿದೆ. ಇಷ್ಟೇ ಅಲ್ಲದೆ ಭಾರತದ ಜತೆಗೆ ಸಂಬಂಧ ವೃದ್ಧಿ ಬಗ್ಗೆಯೂ ಮುನ್ಸೂಚನೆ ನೀಡಿದೆ. ಭಾರತ ಹಾಗೂ ಚೀನಾದ ಬಾಂಧವ್ಯ ಸ್ಥಿರವಾಗಿದೆ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.

ಭಾರತದ ಜಿ20 ಸಭೆಗೆ ಯಾರು ಬರುತ್ತಿಲ್ಲ?

ಸೆಪ್ಟೆಂಬರ್ 9 & 10ರಂದು ರಾಜಧಾನಿ ನವದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ, ತಾವು ಭಾಗವಹಿಸಲು ಸಾಧ್ಯವಾಗ್ತಿಲ್ಲ ಎಂದು ಈಗಾಗಲೇ ರಷ್ಯಾದ ಅಧ್ಯಕ್ಷ ಪುಟಿನ್ ಹೇಳಿದ್ದಾರೆ. ಹೀಗಾಗಿ ರಷ್ಯಾ ಪ್ರತಿನಿಧಿಯಾಗಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಬರುತ್ತಿದ್ದಾರೆ. ಪುಟಿನ್ ಈ ವಿಚಾರವನ್ನ ಪ್ರಧಾನಿ ಮೋದಿ ಅವರಿಗೆ ತಿಳಿಸಿದ್ದಾರೆ. ಪುಟಿನ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್‌ನಿಂದ ವಾರಂಟ್ ಇರುವ ಕಾರಣ ಬಂಧನದ ಭೀತಿ ಇದ್ದು. ಹೀಗಾಗಿಯೇ ಪುಟಿನ್ ರಷ್ಯಾ ಬಿಟ್ಟು ಹೊರಗೆ ಬರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಚೀನಾ ಹೇಳಿಕೆಗೆ ಕಾರಣ ಏನು?

ಅತ್ತ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗೈರು ಹಾಜರಿ ಮಧ್ಯೆ ಚೀನಾ ಅಧ್ಯಕ್ಷರು ಕೂಡ ಭಾರತಕ್ಕೆ ಬರಲ್ಲ ಎಂಬ ಸುದ್ದಿ ಗೊಂದಲ ಸೃಷ್ಟಿಸಿತ್ತು. ಹಾಗೇ ಎರಡೂ ದೇಶಗಳ ಮಧ್ಯೆ ಗಡಿ ಸಮಸ್ಯೆ ವಿಚಾರ ಕೂಡ ಜಾಗತಿಕ ಮಟ್ಟದಲ್ಲಿ ಮತ್ತೆ ಚರ್ಚೆಗೆ ಬಂದಿತ್ತು. ಈಗ ಎಲ್ಲ ಗೊಂದಲಕ್ಕೆ ತೆರೆ ಎಳೆಯಲು ಚೀನಾ ಮುಂದಾದಂತೆ ಕಾಣುತ್ತಿದೆ. ಭಾರತ ಮತ್ತು ಚೀನಾದ ಮಧ್ಯೆ ಸಂಬಂಧ ಸುಧಾರಿಸಲು ರಷ್ಯಾ ಕೂಡ ಯತ್ನಿಸುತ್ತಿದೆ. ಈಗಾಗಲೇ ಅದಕ್ಕೆ ಬೇಕಾದ ಕ್ರಮ ಕೈಗೊಳ್ಳಲು ರಷ್ಯಾ ಪದೇ ಪದೆ ಸೂಚಿಸುತ್ತಿದೆ. ಇಷ್ಟೆಲ್ಲ ಬೆಳವಣಿಗೆ ನಡುವೆ ಚೀನಾ ಕೂಡ ಭಾರತಕ್ಕೆ ಜಿ20 ಶೃಂಗಸಭೆ ವಿಚಾರವಾಗಿ ಬೆಂಬಲ ನೀಡುವುದಾಗಿ ಹೇಳಿಕೆ ನೀಡಿದೆ.

ಮತ್ತೊಂದ್ಕಡೆ ಶೃಂಗಸಭೆಯಲ್ಲಿ ಅರ್ಜೆಂಟಿನಾ, ಆಸ್ಟ್ರೇಲಿಯಾ, ಬ್ರಜಿಲ್, ಕೆನಾಡ, ಚೀನಾ, ಫ್ರಾನ್ಸ್‌, ಜರ್ಮನಿ, ಇಂಡೋನೇಷ್ಯಾ, ಇಟಲಿ, ಜಪಾನ್, ಕೊರಿಯಾ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ಟರ್ಕಿ, ಬ್ರಿಟನ್, ಅಮೆರಿಕ & ಐರೋಪ್ಯ ಒಕ್ಕೂಟಗಳು ಭಾಗವಹಿಸಲಿವೆ. ಭಾರತ ಕೂಡ ಜಿ20 ಒಕ್ಕೂಟದ ಪ್ರಮುಖ ದೇಶವಾಗಿದೆ. ಈ ಬಾರಿ ನಮ್ಮ ಭಾರತವೇ ಶೃಂಗಸಭೆ ನೇತೃತ್ವ ವಹಿಸಿದೆ.

ಭಾರತಕ್ಕೆ ಬರುವ ಗಣ್ಯರ ಪಟ್ಟಿ

ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಗೆ ಬಲಶಾಲಿ ರಾಷ್ಟ್ರಗಳ ಮುಖ್ಯಸ್ಥರು ಬರಲಿದ್ದಾರೆ. ಅಮೆರಿಕ ಅಧ್ಯಕ್ಷ ಬೈಡನ್, ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರಾನ್, ಆಸ್ಟ್ರೇಲಿಯಾ ಪ್ರಧಾನಿ ಆಂಥೊಣಿ ಆಲ್ಬನೆಸ್‌, ಜರ್ಮನ್ ಚಾನ್ಸಲರ್‌ ಒಲಾಫ್‌ ಸ್ಕೋಲ್ಜ್‌, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಷಿದಾ ಹಾಗೂ ಬ್ರಜಿಲ್ ಅಧ್ಯಕ್ಷ ಲ್ಯೂಜ್‌ ಇನಾಸಿಯೊ ಲುಲಾ ಡಿಸಿಲ್ವಾ ಸೇರಿ ಮತ್ತಿತರರು ಹಾಜರಾಗಿ ಚರ್ಚೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+