Get Updates
Get notified of breaking news, exclusive insights, and must-see stories!

608 ದಿನಗಳ ಒದ್ದಾಟ & 27 ವರ್ಷಗಳ ಸೇವೆ, ಸುನಿತಾ ಸಾಧನೆ ಕೋಟಿ ಕೋಟಿ ಮಹಿಳೆಯರಿಗೆ ಮಾದರಿ... Sunita Williams

ಸುನಿತಾ ವಿಲಿಯಮ್ಸ್ ಹೆಸರು ಕೇಳಿದರೆ ಸಾಕು ಬಾಹ್ಯಾಕಾಶ ಲೋಕವೇ ಒಮ್ಮೆ ತಲೆಬಾಗುತ್ತದೆ, ಏಕೆ ಹೀಗೆ ಅನ್ನೋದನ್ನ ನಾವು ವಿವರವಾಗಿ ಹೇಳಬೇಕಿಲ್ಲ ಬಿಡಿ. ಜಗತ್ತಿನ ಬಗ್ಗೆ ಸಾಮಾನ್ಯ ಜ್ಞಾನ ಇರುವ ಪ್ರತಿಯೊಬ್ಬರಿಗೂ ಸುನಿತಾ ವಿಲಿಯಮ್ಸ್ ಅವರ ಬಗ್ಗೆ ಚನ್ನಾಗಿ ಗೊತ್ತು. ಮನುಷ್ಯರ ಭವಿಷ್ಯಕ್ಕಾಗಿ & ಭೂಮಿ ಮೇಲೆ ಮನುಷ್ಯರ ನಾಳೆಯ ದಿನಗಳು ಅದ್ಭುತವಾಗಿ ಇರಲಿ ಎಂಬ ಕಾರಣಕ್ಕೆ, ತಮ್ಮ ಜೀವ ಪಣಕ್ಕಿಟ್ಟು ಬಾಹ್ಯಾಕಾಶಕ್ಕೆ ಹಾರಿ ಸಂಶೋಧನೆ ನಡೆಸಿ ಬಂದ ಕೆಲವೇ ಕೆಲವು ವಿಜ್ಞಾನಿಗಳಲ್ಲಿ ನಮ್ಮ ಭಾರತ ಮೂಲದ ನಂಟು ಹೊಂದಿರುವ ಸುನಿತಾ ವಿಲಿಯಮ್ಸ್ ಕೂಡ ಒಬ್ಬರು. ಆದರೆ ಇದೇ ಸುನಿತಾ ವಿಲಿಯಮ್ಸ್ ಅವರು ಇಂದು ಮಹತ್ವದ ನಿರ್ಧಾರ ಘೋಷಿಸಿದ್ದಾರೆ.

ಬಾಹ್ಯಾಕಾಶ ಯಾವುದೇ ಗಡಿಯಿಲ್ಲದ ಬೃಹತ್ ಲೋಕ, ಇಲ್ಲಿ ನಾವು ಬಗೆದಷ್ಟು ಹೊಸ ವಿಸ್ಮಯಗಳು ಹೊರ ಬರುತ್ತವೆ. ಹುಡುಕಿದಷ್ಟು ಹೊಸತನ ಸಿಗುವ ಏಕೈಕ ಜಾಗ ಎಂದರೆ ಅದು ಬಾಹ್ಯಾಕಾಶವೇ ಸರಿ ಎನ್ನಬಹುದು. ಭೂಮಿ ರೀತಿಯೇ ಸಾವಿರಾರು ಕೋಟಿ ಗ್ರಹಗಳು, ಸೂರ್ಯನಂತೆ ನೂರಾರು ಕೋಟಿ ನಕ್ಷತ್ರಗಳನ್ನು ಈಗಾಗಲೇ ಮಾನವರು ತಮ್ಮ ಕಣ್ಣಾರೆ ಕಂಡಿದ್ದಾರೆ. ಇದಕ್ಕೆಲ್ಲಾ ಕಾರಣ ಆಗಿರುವುದೇ ಬಾಹ್ಯಾಕಾಶ ವಿಜ್ಞಾನಿಗಳ ಶ್ರಮ. ಅದರಲ್ಲೂ ನಮ್ಮ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮಾಡಿದ ಸಾಧನೆ ಭೂಮಿ ಮೇಲಿನ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಮಾದರಿಯಾಗಿದೆ. ಆದರೆ ಇಂದು ಅವರು ತಮ್ಮ ಬಾಹ್ಯಾಕಾಶ ವೃತ್ತಿಗೆ ನಿವೃತ್ತಿಯ ಚುಕ್ಕೆ ಇಟ್ಟಿದ್ದಾರೆ, ಹಾಗಾದರೆ ಸುನಿತಾ ವಿಲಿಯಮ್ಸ್ ಜೀವನ ಹೇಗಿತ್ತು? ಬನ್ನಿ ತಿಳಿಯೋಣ.

Discover The Sunita Williams Biography And Her Achievements

ಬಾಹ್ಯಾಕಾಶ ಲೋಕದಲ್ಲಿ ಮಿನುಗಿದ ನಕ್ಷತ್ರ

ಸುನಿತಾ ವಿಲಿಯಮ್ಸ್ ಅವರು ಹುಟ್ಟಿದ್ದು 1965 ಸೆಪ್ಟೆಂಬರ್ 19 ಭಾನುವಾರ, ಅಮೆರಿಕದ ಓಹಿಯೋ ರಾಜ್ಯದ ಯೂಕ್ಲಿಡ್ ಸುನಿತಾ ವಿಲಿಯಮ್ಸ್ ಅವರ ಜನ್ಮಸ್ಥಳ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ರೀತಿ ಚಿಕ್ಕ ವಯಸ್ಸಿನಲ್ಲೇ ಅವರು ಬಾಹ್ಯಾಕಾಶ ಲೋಕದ ಬಗ್ಗೆ ಆಸಕ್ತಿ ಹೊಂದಿದ್ದರು. ಇದನ್ನೆಲ್ಲಾ ಸುನಿತಾ ವಿಲಿಯಮ್ಸ್ ಅವರ ಪೋಷಕರು ಗಮನಿಸಿದ್ದರು, ಹಾಗೇ ಸುನಿತಾ ವಿಲಿಯಮ್ಸ್ ಅವರಿಗೆ ಈ ವಿಚಾರದಲ್ಲಿ ಬೆಂಬಲವಾಗಿ ನಿಂತರು. ಸುನಿತಾ ವಿಲಿಯಮ್ಸ್ ಅವರ ತಾಯಿ ಬೋನಿ ಪಾಂಡ್ಯ ಮತ್ತು ಅವರ ತಂದೆ ನರಶಾಸ್ತ್ರಜ್ಞ ಡಾ. ದೀಪಕ್ ಪಾಂಡ್ಯ ಮಗಳ ಕನಸುಗಳಿಗೆ ಬಲ ತುಂಬಿದ್ದರು.

1983ರ ಹೊತ್ತಿಗೆ ಸುನಿತಾ ವಿಲಿಯಮ್ಸ್ ಮೇರಿಲ್ಯಾಂಡ್‌ನಲ್ಲಿ ಇರುವ ಅಮೆರಿಕನ್ ನೇವಲ್ ಅಕಾಡೆಮಿಗೆ ಪ್ರವೇಶ ಪಡೆದರು. ಅಲ್ಲಿಂದ ಮುಂದೆ ಸುನಿತಾ ವಿಲಿಯಮ್ಸ್ ಜೀವನದಲ್ಲಿ ತಿರುಗಿ ನೋಡಲೇ ಇಲ್ಲ. 1989ರಲ್ಲಿ ಯುದ್ಧ ಹೆಲಿಕಾಪ್ಟರ್ ತರಬೇತಿ, ಪರ್ಷಿಯನ್ ಕೊಲ್ಲಿ ಯುದ್ಧದ ತಯಾರಿ ಸೇರಿದಂತೆ 1992ರ ಸಮಯದಲ್ಲಿ ಮಿಯಾಮಿಯ ಆಂಡ್ರ್ಯೂ ಚಂಡಮಾರುತ ಪರಿಹಾರ ಕಾರ್ಯಾಚರಣೆಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದರು. 1993ರ ನಂತರ ಸುನಿತಾ ವಿಲಿಯಮ್ಸ್ ಅವರ ಸಾಮರ್ಥ್ಯ ಅಮೆರಿಕದ ಬಾಹ್ಯಾಕಾಶ ಲೋಕಕ್ಕೆ ಗೊತ್ತಾಗಿತ್ತು. 30ಕ್ಕೂ ಹೆಚ್ಚು ವಿಭಿನ್ನ ವಿಮಾನ ಹಾರಿಸಿ ಮತ್ತು 2,770 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ್ದ ಅನುಭವ ಆಗಲೇ ಅವರಿಗೆ ಸಿಕ್ಕಿತ್ತು. ಇದೆಲ್ಲವನ್ನೂ ಗಮನಿಸಿ ಅವರನ್ನು ಗಗನಯಾನ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.

ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ ಹಾರಿದ್ದರು

ಡಿಸೆಂಬರ್ 9, 2006 ಸುನಿತಾ ವಿಲಿಯಮ್ಸ್ ಅವರ ಜೀವನದಲ್ಲಿ ಅದ್ಭುತ ದಿನ, ಏಕೆಂದರೆ ಇದೇ ದಿನ ಸುನಿತಾ ವಿಲಿಯಮ್ಸ್ ಅವರು ಡಿಸ್ಕವರಿ ಎಂಬ ಬಾಹ್ಯಾಕಾಶ ನೌಕೆಯಲ್ಲಿ ಆಕಾಶಕ್ಕೆ ಹಾರಿದ್ದರು. ಹೀಗೆ ಮೊಟ್ಟ ಮೊದಲ ಬಾರಿಗೆ ಭೂಮಿ ಬಿಟ್ಟು ಹೊರಗೆ ಹೋಗಿದ್ದ ಸುನಿತಾ ವಿಲಿಯಮ್ಸ್, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಒಟ್ಟು 4 ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡರು. 29 ಗಂಟೆಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಿಂದ ಹೊರಗೆ ಕಳೆದರು. ಇದು ಆಗ ದೊಡ್ಡ ಸುದ್ದಿಯಾಗುವ ಜೊತೆಯಲ್ಲೇ ಬಾಹ್ಯಾಕಾಶ ಲೋಕದಲ್ಲಿ ಸುನಿತಾ ವಿಲಿಯಮ್ಸ್ ಅವರ ಹೆಸರು ನಕ್ಷತ್ರದಂತೆ ಮಿನುಗಿತ್ತು. ಜೂನ್ 22, 2007ಕ್ಕೆ ಮರಳಿ ಭೂಮಿಗೆ ಬಂದಿದ್ದರು. ಮೊದಲ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಂಡಿದ್ದರೂ ಆ ಸಮಯದಲ್ಲಿ ಇವರು ಮಾಡಿದ ಸಾಧನೆಗೆ ಬಾಹ್ಯಾಕಾಶ ಲೋಕವೇ ತಲೆಬಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+