ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಎಷ್ಟು ಸ್ಥಾನ?

ಲೋಕಸಭೆ ಚುನಾವಣೆ 2024ರ ವೋಟಿಂಗ್ ಮುಗಿದಿದ್ದು, ಫಲಿತಾಂಶಕ್ಕೆ ಇದೀಗ ಮತದಾರರು ಕಾಯುತ್ತಿದ್ದಾರೆ. ಒ೦ದ್ಕಡೆ ಹ್ಯಾಟ್ರಿಕ್ ಬಾರಿಸಲು ಬಿಜೆಪಿ ನೇತೃತ್ವದ NDA ಒಕ್ಕೂಟ ನಾಯಕರು ಕಾಯುತ್ತಿದ್ದಾರೆ. ಮತ್ತೊಂದ್ಕಡೆ ಕಾಂಗ್ರೆಸ್ ಕೂಡ ಜಯ ನಮ್ಮದೆ ಅಂತಾ ಹೇಳುತ್ತಿದೆ. ಹಾಗಾದ್ರೆ ಲೋಕಸಭೆ ಚುನಾವಣೆ 2024ರಲ್ಲಿ ಯಾರಿಗೆ ಜಯ? ಯಾರಿಗೆ ಸೋಲು? ಬನ್ನಿ ತಿಳಿಯೋಣ.

ಭಾರತದ ಲೋಕಸಭೆ ಚುನಾವಣೆ ಜಗತ್ತಿನ ಗಮನ ಸೆಳೆದಿತ್ತು. ಯಾಕಂದ್ರೆ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದ ದೇಶ ಭಾರತ. ಹೀಗಾಗಿ ಭಾರತದ ಕಡೆ ಇಡೀ ಜಗತ್ತು ಗಮನ ಇಟ್ಟು ಕೂತಿದೆ. ಭಾರತದಲ್ಲಿ ಯಾವ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತೆ? ಅನ್ನೋ ಪ್ರಶ್ನೆಗೆ ಉತ್ತರ ಹುಡುಕಲು ಎಲ್ಲರೂ ಕಾಯುತ್ತಿದ್ದಾರೆ. ಹೀಗಿದ್ದಾಗ ಗೆಲುವಿನ ನಗೆ ಬೀರಲು ಒಂದು ಕಡೆ ಬಿಜೆಪಿ & ಇನ್ನೊಂದು ಕಡೆ ಕಾಂಗ್ರೆಸ್ ನಾಯಕರ ಮಧ್ಯೆ ಫೈಟ್ ಶುರುವಾಗಿದೆ. ಹಾಗಿದ್ರೆ ಈಗಿನ ಟ್ರೆಂಡ್ ಯಾರ ಪರವಿದೆ? ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಬರುತ್ತೆ? ಕೇಂದ್ರದಲ್ಲಿ ಅಧಿಕಾರ ಹಿಡಿಯುವ ಪಕ್ಷ ಯಾವುದು? ಮುಂದೆ ಓದಿ.

Discover How Much Seats Can Win By BJP amp amp Congress In Lok Sabha Election 2024

ಯಾರಿಗೆ ಎಷ್ಟು ಸ್ಥಾನ ಸಿಗುತ್ತೆ?

ಭಾರತದಲ್ಲಿ 1 ಜೂನ್ 2024ರ ತನಕ ವಿವಿಧ ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್ 4, 2024 ರಂದು ರಿಸಲ್ಟ್ ಅಂದ್ರೆ ಫಲಿತಾಂಶ ಹೊರಬೀಳಲಿದೆ. ಹೀಗಾಗಿ ಇಡೀ ಜಗತ್ತಿನ ಗಮನ ಈಗ ಭಾರತದ ಮೇಲೆ ನೆಟ್ಟಿದೆ. ಇನ್ನೇನು ಕೆಲವೇ ದಿನದಲ್ಲಿ ಅಂತಿಮ ಹಂತದ ಮತದಾನವು ನಡೆಯಲಿದೆ. ಇದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ರಾಜಕೀಯ ಪಕ್ಷಗಳು ಮಾಡಿಕೊಂಡಿವೆ. ಹಾಗಾದ್ರೆ ಯಾವ ಪಕ್ಷ ಎಷ್ಟು ಸ್ಥಾನ ಗೆಲ್ಲಬಹುದು? ಈಗಿನ ಟ್ರೆಂಡ್ ಏನು ಹೇಳುತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ.

400 ಸ್ಥಾನಕ್ಕೆ ಬಿಜೆಪಿ ಟಾರ್ಗೆಟ್!

ಲೋಕಸಭೆ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕಿದೆ ಎಂಬುದು ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಪ್ಲ್ಯಾನ್ ಆಗಿತ್ತು. ಆದರೆ ಈ ಆಸೆ ಈಡೇರುವುದು, ಡೌಟ್ ಅಂತಿವೆ ಕೆಲವು ಲೆಕ್ಕಾಚಾರಗಳು. ಯಾಕಂದ್ರೆ ಈಗಿನ ಟ್ರೆಂಡ್ ನೋಡುವುದಾದ್ರೆ ಎನ್‌ಡಿಎ ಒಕ್ಕೂಟ 300 ಸ್ಥಾನದ ಗಡಿ ದಾಟಬಹುದು ಅಷ್ಟೇ ಅಂತ ಹೇಳಲಾಗುತ್ತಿದೆ. ಆದ್ರೆ 400 ಸ್ಥಾನ ಗುರಿ ಮುಟ್ಟುವುದು ಕಷ್ಟ, ಕಷ್ಟ ಎಂಬ ಚರ್ಚೆ ನಡೆಯುತ್ತಿದೆ. ಹಾಗಾದರೆ ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ಎಷ್ಟು ಸ್ಥಾನ ಸಿಗಬಹುದು? ಬನ್ನಿ ತಿಳಿಯೋಣ.

ಸರ್ಕಾರ ರಚಿಸುತ್ತಾ ಕಾಂಗ್ರೆಸ್?

ಕಾಂಗ್ರೆಸ್ ನೇತೃತ್ವದಲ್ಲಿ ರಚನೆ ಆಗಿರುವ 'ಇಂಡಿಯಾ' ಒಕ್ಕೂಟವು ಹೇಳುವ ಪ್ರಕಾರ ಈ ಬಾರಿ ಜನ ಬಿಜೆಪಿ ಪಕ್ಷವನ್ನ ಸೋಲಿಸುವುದು ಗ್ಯಾರಂಟಿ ಎಂಬ ವಿಶ್ವಾಸ ವ್ಯಕ್ತವಾಗಿದೆ. ಈ ಮೂಲಕ ಕಾಂಗ್ರೆಸ್ & ಮಿತ್ರ ಪಕ್ಷಗಳು ಒಂದಾಗಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಲಿದ್ದಾರೆ ಅಂತಿದ್ದಾರೆ ಕಾಂಗ್ರೆಸ್ & 'ಇಂಡಿಯಾ' ಒಕ್ಕೂಟದ ನಾಯಕರು. ಆದ್ರೆ ಇದೆಲ್ಲದಕ್ಕು ಉತ್ತರ ಸಿಗಲು ಇನ್ನಷ್ಟು ದಿನ ಕಾದು ನೋಡಬೇಕಿದೆ. ಯಾಕಂದ್ರೆ ಮತದಾರ ಪ್ರಭುವಿನ ಲೆಕ್ಕಾಚರ ಏನು? ಅನ್ನೋದು 20 ದಿನಗಳಲ್ಲಿ ಗೊತ್ತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+