Covid-19: ಎಚ್ಚರ.. ಎಚ್ಚರ.. ಮತ್ತೆ ಹರಡುತ್ತಿದೆ ಕೊರೊನಾ ಹೆಮ್ಮಾರಿ: ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕಿದೆ!
ಕೊರೊನಾ ಕಂಟಕ ಮತ್ತೆ ಶುರುವಾಗಿದ್ದು, ಎಲ್ಲೆಲ್ಲೂ ಭಯ ಆವರಿಸಿದೆ. ಹೀಗಾಗಿ ಭಾರತ ಮತ್ತೊಮ್ಮೆ ಕೊರೊನಾ ಬಲೆಯಲ್ಲಿ ಸಿಲುಕಿರುವ ಅಪಾಯದ ಸೂಚನೆ ಸಿಗುತ್ತಿದೆ. ಹೀಗಿದ್ದಾಗ, ನಾವು ಹಿಂದಿನ ತಪ್ಪುಗಳಿಂದ ಪಾಠ ಕಲಿಯಬೇಕಿದೆ. ಇಲ್ಲವಾದರೆ ಈ ಬಾರಿ ಮತ್ತೆ ಅಂತಹದ್ದೇ ಕಂಟಕಕ್ಕೆ ಸಿಲುಕಿ ನರಳಬೇಕಿದೆ. ಅದರಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಎದುರಾದ ಸಮಯದಲ್ಲೇ ಎಚ್ಚರಿಕೆಯ ಕರೆಗಂಟೆ ಸದ್ದು ಮಾಡುತ್ತಿದೆ.
ಆಧುನಿಕ ಕಾಲದಲ್ಲಿ ಇಡೀ ಜಗತ್ತು ನರಳಾಡಿದ್ದು ಕೊರೊನಾ ಕಾರಣಕ್ಕೆ ಮಾತ್ರ. ಯಾಕಂದ್ರೆ ದಿಢೀರ್ ಇಡೀ ಜಗತ್ತನ್ನು ಆವರಿಸಿದ ಈ ಹೆಮ್ಮಾರಿ ಹತ್ತಾರು ಲಕ್ಷ ಜನರ ಜೀವ ತೆಗೆದಿದ್ದು, ಕೋಟ್ಯಂತರ ಜನರ ಜೀವನ ಹಾಳು ಮಾಡಿದೆ.

ಹೀಗೆ 3 ವರ್ಷದ ಹಿಂದೆ ಇಡೀ ಪ್ರಪಂಚ, ಈ ಕೊರೊನಾ ಎಂಬ ಕಂಟಕದ ಸುಳಿಗೆ ಸಿಲುಕಿ ನಲುಗಿ ಹೋಗಿತ್ತು. ಆದರೆ ಕಿಲ್ಲರ್ ವೈರಸ್ ಹಿಡಿತಕ್ಕೆ ಸಿಕ್ಕೇಬಿಟ್ಟಿದೆ, ಇನ್ನ ಯಾವತ್ತೂ ಕೊರೊನಾ ಕಂಟಕ ಎದುರಾಗಲ್ಲ ಎನ್ನುವಷ್ಟರಲ್ಲೇ ಮತ್ತೆ ವಕ್ಕರಿಸಿದೆ. ಹಾಗಾದರೆ ಈಗ ಏನು ಮಾಡಬೇಕು?
ಹೊಸ ವರ್ಷದಲ್ಲಿ ಹುಷಾರ್.. ಹುಷಾರ್..!
ಹೌದು, 2023 ಮುಗಿದು ಇನ್ನೇನು 2024ಕ್ಕೆ ಹೆಜ್ಜೆ ಹಾಕಲು ಕೌಂಟ್‌ಡೌನ್ ಶುರುವಾಗಿದೆ. ಹೀಗಿದ್ದಾಗ ಕೊರೊನಾ ಅಪ್ಪಳಿಸುವ ಭಯ ಆವರಿಸಿದೆ. ಹೀಗಾಗಿ ಕೊರೊನಾ ಕಂಟಕವನ್ನ ಎದುರಿಸಲು ಮುನ್ನೆಚ್ಚರಿಕೆ ಅತ್ಯಗತ್ಯ. ಇಲ್ಲವಾದರೆ ಮಹಾನ್ ಸಮಸ್ಯೆ ಎದುರಾಗಿಬಿಡುತ್ತೆ, ಹೀಗಾಗಿ ಹೊಸ ವರ್ಷದ ಆಚರಣೆ ವಿಚಾರದಲ್ಲಿ ಒಂದಷ್ಟು ಮುನ್ನೆಚ್ಚರಿಕೆ ವಹಿಸಿ. ಜೊತೆಗೆ ಕೊರೊನಾ ಸೋಂಕಿನಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನ ರಕ್ಷಿಸಿಕೊಳ್ಳಲು ಈಗ ಅಗತ್ಯ ಮುನ್ನೆಚ್ಚರಿಕೆ ವಹಿಸಿ.

ಗುಂಪುಗಳಲ್ಲಿ ಸೇರುವುದು ಅಪಾಯ!
ಅಂದಹಾಗೆ ಈಗಿರುವ ಪರಿಸ್ಥಿತಿಯಲ್ಲಿ ಗುಂಪು ಸೇರುವ ಪ್ರದೇಶದಲ್ಲಿ ಓಡಾಡುವುದು, ಇಲ್ಲ ಅಂತಹ ಜಾಗಕ್ಕೆ ಹೋಗುವುದು ಅಪಾಯ. ಹೀಗಾಗಿ ಹೊಸ ವರ್ಷಕ್ಕೆ ದೊಡ್ಡದಾಗಿ ಪ್ಲಾನ್ ಇದ್ದರೆ ಮುಂದೂಡುವುದು ಉತ್ತಮ. ಯಾಕಂದ್ರೆ ಅಕಸ್ಮಾತ್ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗೋದರೆ ಆಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಬಗ್ಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಇಲ್ಲವಾದರೆ ಮುಂದೆ ಕೊರೊನಾ ನಿಭಾಯಿಸುವುದೇ ಕಷ್ಟ, ಕಷ್ಟ ಎನ್ನುವಂತಾಗಲಿದೆ.
ಒಟ್ನಲ್ಲಿ ಮತ್ತೊಮ್ಮೆ ಕೊರೊನಾ ಸುಳಿ ಆವರಿಸಿದೆ, ಹೀಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಕೈಗೊಳ್ಳಬೇಕಿದೆ. ಆದರೆ ಭಯ ಪಡೋದು ಅನಗತ್ಯ ಅನ್ನೋ ಮಾತನ್ನೂ ಹೇಳುತ್ತಿದ್ದಾರೆ, ಕೊರೊನಾ ತಜ್ಞರು ಹಾಗೂ ವೈದ್ಯರು. ಹೀಗಾಗಿ ಅಗತ್ಯ ಕ್ರಮಗಳನ್ನ ಕೈಗೊಂಡು ಅಲರ್ಟ್ ಆಗಿದ್ದರೆ ಸಾಕು. ಅದನ್ನ ಬಿಟ್ಟು ಭಯ ಅನಗತ್ಯ. 614 ಹೊಸ ಕೊರೊನಾ ಕೇಸ್ ದೇಶದ ವಿವಿಧ ರಾಜ್ಯಗಳಲ್ಲಿ ಕನ್ಫರ್ಮ್ ಆಗಿದ್ದು, ಭಾರತದಲ್ಲಿ ಈಗ 2,311 ಸಕ್ರಿಯ ಪ್ರಕರಣಗಳು ಪತ್ತೆ ಆಗಿವೆ. ಕೇರಳ & ಕರ್ನಾಟಕದಲ್ಲಿ ಪರಿಸ್ಥಿತಿ ಸೂಕ್ಷ್ಮವಾಗಿದೆ.












Click it and Unblock the Notifications