ಕೆಲವೇ ವರ್ಷಗಳಲ್ಲಿ ದೇಶದಲ್ಲಿ ಡೀಸೆಲ್‌, ಪೆಟ್ರೋಲ್‌ ವಾಹನಗಳಿಗೆ ಬೀಳಲಿದೆ ಕಡಿವಾಣ-ಕಾರಣ ಏನು?

ಈಗಾಗಲೇ ದೇಶದಲ್ಲಿ ಎಲೆಕ್ಟ್ರಿಕ್‌ (EV) ವಾಹನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಎಲ್ಲಿ ನೋಡಿದರೂ ಇವುಗಳದ್ದೇ ದರ್ಬಾರ್‌ ಶುರುವಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಸಂಪೂರ್ಣವಾಗಿ ಡೀಸೆಲ್‌, ಪೆಟ್ರೋಲ್‌ ವಾಹನಗಳನ್ನು ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನುವ ಮಾಹಿತಿಯೊಂದು ಲಭ್ಯವಾಗಿದೆ. ಇದಕ್ಕೆ ಪ್ರತಿಕ್ರಿಯೆಗಳು ಹೇಗಿವೆ ಎಂದು ಇಲ್ಲಿ ತಿಳಿಯಿರಿ.

ಮುಂದಿನ 10 ವರ್ಷದೊಳಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ ಎಂದು ಸುದ್ದಿಯಾಗುತ್ತಿದೆ.

Diesel and petrol vehicles ban in few years at India

ಇದೀಗ ಇರುವ ಇಂಜಿನ್‌ ಚಾಲಿತ ವಾಹನಗಳಿಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್‌ ವಾಹಗಳನ್ನು ಬಳಸುವುದರಿಂದ ಉಂಟಾಗುವ ವೆಚ್ಚದ ಪ್ರಯೋಜನಗಳ ಬಗ್ಗೆ ಮಾಹಿತಿ ಅವರು ನೀಡಿದ್ದಾರೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಸಾರ್ವಜನಿಕ ರ್‍ಯಾಲಿ ವೇಳೆ ಮಾತನಾಡಿದ ಅವರು, 2034ರ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಸಂಪೂರ್ಣವಾಗಿ ಬ್ಯಾನ್‌ ಮಾಡುವ ನಿಟ್ಟಿನಲ್ಲಿ ಚಿಂತನೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

"ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ ಡೀಸೆಲ್‌, ಪೆಟ್ರೋಲ್ ವಾಹನಗಳನ್ನು ಸಂಪೂರ್ಣವಾಗಿ ರಸ್ತೆಗಳಿಂದ ತೆಗೆದುಹಾಕಲು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್, ಕಾರು ಮತ್ತು ಬಸ್‌ಗಳು ಬಂದಿದ್ದು, ಇವುಗಳಿಂದ ಜನರಿಗೆ ತುಂಬಾ ಅನುಕೂಲಳಾಗುತ್ತಿವೆ. ಈ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ," ಎಂದರು.

"ಡೀಸೆಲ್‌ಗಾಗಿ 100 ರೂಪಾಯಿ ವೆಚ್ಚ ಮಾಡಿದರೆ, ಇವಿ ವಾಹನಗಳಿಗೆ ಕೇವಲ 4 ರೂಪಾಯಿಗಳ ವಿದ್ಯುತ್‌ ಖರ್ಚಾಗಲಿದ್ದು, ಇದರಿಂದ ದೇಶವು ಹೆಚ್ಚಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲಿನ ಅವಲಂಬನೆಯು ಕಡಿಮೆ ಆಗುತ್ತದೆ. ಪೆಟ್ರೋಲ್-ಡೀಸೆಲ್‌ ವಾಹನಗಳಿಗೆ ಹೋಲಿಕೆ ಮಾಡಿದರೆ, ಇವಿ ವಾಹನಗಳಿಂದ ದೇಶದ ಖಜಾನೆಯ ಮೇಲಿನ ಹೊರೆಯೂ ಕಡಿಮೆ ಆಗಲಿದೆ," ಎಂದು ಹೇಳಿದರು.

ಒಟ್ಟಿನಲ್ಲಿ ದೇಶವು 2030ರ ವೇಳೆಗೆ ಆಟೋಮೊಬೈಲ್‌ ಕ್ಷೇತ್ರಗಳಲ್ಲಿನ ಎಲ್ಲಾ ಮಾರಾಟಗಳಲ್ಲಿ ಶೇಕಡಾ 30ರಷ್ಟು ಎಲೆಕ್ಟ್ರಿಕ್ ಆಯ್ಕೆಗಳಿಂದ ಲೆಕ್ಕಹಾಕಲು ನೋಡುತ್ತಿದೆ. ಪಾಶ್ಚಿಮಾತ್ಯ ದೇಶಗಳು ನಿಗದಿಪಡಿಸಿದ ಗುರಿಗಳಿಗೆ ಹೋಲಿಕೆ ಮಾಡಿದರೆ ಇದು ಪ್ರಭಾವಶಾಲಿ ಆಗಿದೆ. ವಿಶ್ವದ 2ನೇ ಅತಿದೊಡ್ಡ ಕಾರು ಮಾರುಕಟ್ಟೆಯಾದ ಅಮೆರಿಕ 2030ರ ವೇಳೆಗೆ ಎಲ್ಲಾ ಮಾರಾಟಗಳಲ್ಲಿ ಶೇಕಡಾ 50ರಷ್ಟು ಮತ್ತು 2032ರ ವೇಳೆಗೆ ಶೇಕಡ 67ರಷ್ಟು ಎಲೆಕ್ಟ್ರಿಕ್ ವಾಹನಗಳಿಂದ ಬರುವ ಗುರಿ ಹೊಂದಿದೆ.

2023ರಲ್ಲಿ ಇಂಗ್ಲೆಂಡ್‌ನಲ್ಲಿ ಶೇಕಡ 19ರಷ್ಟು ಎಲೆಕ್ಟ್ರಿಕ್ ವಾಹನಗಳ ಮಾರಾಟವಾಗಿದ್ದು, 2035ರ ವೇಳೆಗೆ ಶೇಕಡ 100ರಷ್ಟು ಎಲೆಕ್ಟ್ರಿಕ್ ಕಾರುಗಳನ್ನು ಬಳಸುವ ಗುರಿಯನ್ನು ಹೊಂದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗೆಯೇ ಇದೀಗ ಭಾರತದಲ್ಲೂ ಕೂಡ ಎಲೆಕ್ಟ್ರಿಕ್‌ ವಾಹನಗಳನ್ನು ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಏಕೆಂದರೆ ಹೆಚ್ಚು ವೆಚ್ಚ ಬರುವುದಿಲ್ಲ. ಇನ್ನು ಒಂದೆರಡು ವರ್ಷಗಳು ಕಳೆದರೆ, ದೇಶದಲ್ಲಿ ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ದ್ವಿಗುಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+