ಮನುಷ್ಯನಿಗಿಂತಲೂ ಎತ್ತರ ಬೆಳೆಯುವ ಈ ಹೂವು; ಅರಳಲು ಬರೋಬ್ಬರಿ 15 ವರ್ಷ!

ಹೂವಿನ ಅಂದಕ್ಕೆ ಹೂವೇ ಸಾಟಿ. ಹೂವಿನಲ್ಲಿ ಅನೇಕ ವಿಧ ಇರುತ್ತದೆ, ಸಣ್ಣ ಸಣ್ಣ ಹೂವುಗಳ ಅಂದ ಒಂದು ಕಡೆಯಾದರೆ, ದೊಡ್ಡ ಹೂವುಗಳ ಸೊಬಗೇ ಬೇರೆ. ದೊಡ್ಡದೆಂದರೆ ಒಂದು ಅಂಗೈಷ್ಟು ಅಗಲದ ಹೂವನ್ನು ನೀವು ನೋಡಿರಬಹುದು. ಇನ್ನು ರಥ ಹೂವು ನಮ್ಮ ಅರ್ಧ ತೋಳಿನಷ್ಟು ದೊಡ್ಡದಿರಬಹುದು. ಆದರೆ ಒಬ್ಬ ಮನುಷ್ಯನ ಎತ್ತರಕ್ಕೆ ಬೆಳೆಯುವ ಹೂವನ್ನು ಎಲ್ಲಾದರೂ ನೋಡಿದ್ದೀರಾ? ಹೌದು, ಅಂತದ್ದೊಂದು ಹೂವು ಖಂಡಿತವಾಗಿಯೂ ಈ ಭೂಮಿಯ ಮೇಲಿದೆ. ಇದು 3.2 ಅಡಿಗಳಿಂದ 6.5 ಅಡಿ ಎತ್ತರಕ್ಕೆ ಬೆಳೆಯುತ್ತದೆ.

ಈ ಹೂವಿನ ಹೆಸರು ಹಿಮಾಲಯನ್ ಡೈಮಂಡ್.‌ ಇದು ಹಿಮಾಲಯದ ಕಠಿಣ, ಹೆಪ್ಪುಗಟ್ಟಿದ ವಾತಾವರಣದಲ್ಲಿ ಕಂಡು ಬರುತ್ತದೆ. ಈ ಹೂವು ಹಿಮಾಲಯದಲ್ಲಿ 4,000 ಮೀಟರ್ ಎತ್ತರದಲ್ಲಿ ಕಂಡುಬರುತ್ತದೆ.

Diamond Flower

Diamond Flower: ಈ ಹೂವು ಅರಳಲು ಬೇಕು 15 ವರ್ಷ

ಸ್ಥಳೀಯವಾಗಿ ಈ ಹೂವನ್ನು ಕೆಂಜೊ ಅಥವಾ ಪದಮ್‌ಚಲ್ ಎಂದು ಕರೆಯುತ್ತಾರೆ. ಇದು ಕೆಲವೊಮ್ಮೆ ವಯಸ್ಕ ಮನುಷ್ಯನಿಗಿಂತ ಎತ್ತರವಾಗಿ ಬೆಳೆಯಬಹುದು. ಇದರ ಇನ್ನೊಂದು ವಿಶೇಷತೆ ಎಂದರೆ ಈ ಹೂವು ಅರಳಲು ಏಳರಿಂದ ಹದಿನೈದು ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಇದರ ಅಸಾಮಾನ್ಯ ನೋಟ ಮತ್ತು ಎಲ್ಲಾ ಕಡೆ ಇದು ಸಿಗುವುದಿಲ್ಲ ಎನ್ನುವ ಕಾರಣದಿಂದ ಚಾರಣಿಗರು, ಪ್ರಕೃತಿ ಪ್ರೇಮಿಗಳು ಮತ್ತು ನಾಟಿ ವೈದ್ಯರನ್ನು ಆಕರ್ಷಿಸುತ್ತದೆ.

ಕಠಿಣ ವಾತಾವರಣದಲ್ಲಿ ಬದುಕುಳಿಯುವ ಹೂವು

ಇವು ಎಲ್ಲಾ ಕಡೆ ಸಿಗುವಂಥಹ ಬಣ್ಣ ಬಣ್ಣದ ಕಾಡು ಹೂವುಗಳಲ್ಲ. ಬದಲಿಗೆ ವಿಶ್ವದ ಅತಿ ಎತ್ತರದ ಪರ್ವತ ಪ್ರದೇಶಗಳಲ್ಲಿ ಬೆಳೆಯುವ ಹಿಮಾಲಯನ್ ಡೈಮಾಂಡ್. ಕೆಂಜೊ ಹೂವು ಭೂಮಿಯ ಅತ್ಯಂತ ಕಠಿಣ ಪರಿಸರದಲ್ಲಿ ಬದುಕುಳಿಯಲು ವಿಕಸನಗೊಂಡ ಆಲ್ಪೈನ್ ಸಸ್ಯವಾಗಿದೆ. ಇದು ಕಲ್ಲಿನ ಆಲ್ಪೈನ್ ಇಳಿಜಾರುಗಳು ಮತ್ತು 4,000 ಮೀಟರ್‌ಗಿಂತ ಹೆಚ್ಚಿನ ಎತ್ತರದಲ್ಲಿ ಹಿಮನದಿ ಮೊರೈನ್‌ಗಳಲ್ಲಿ ಬೆಳೆಯುತ್ತದೆ. ಇಲ್ಲಿ ಆಮ್ಲಜನಕವು ಸಮುದ್ರ ಮಟ್ಟಕ್ಕಿಂತ ಸುಮಾರು 40%ದಷ್ಟು ಕಡಿಮೆಯಾಗಿರುತ್ತದೆ.

ಇದನ್ನು 'ಹಿಮಾಲಯನ್‌ ಡೈಮಂಡ್‌ ಎಂದು ಏಕೆ ಕರೆಯುತ್ತಾರೆ?

ಇದು ಅಪರೂಪದ ಹೂವು ಎನ್ನುವ ಕಾರಣಕ್ಕೆ ಇದನ್ನು ಹಿಮಾಲಯನ್ ಡೈಮಂಡ್‌ ಎಂದು ಕರೆಯುವುದಲ್ಲ. ಇದು ಅತ್ಯಂತ ಕಠಿಣ ವಾತಾವರಣದಲ್ಲಿ ಅರಳುವ ಮತ್ತು ಬದುಕುವ ಹೂವಾಗಿದೆ. ಇದು ತೀವ್ರವಾದ ನೇರಳಾತೀತ ವಿಕಿರಣ, ಹೆಪ್ಪುಗಟ್ಟುವ ಚಳಿ, ಜೋರಾಗಿ ಬೀಸುವ ಪರ್ವತ ಗಾಳಿ ಹೀಗೆ ಎಲ್ಲಾ ರೀತಿಯ ಪ್ರತಿಕೂಲ ವಾತಾವರಣಗಳಲ್ಲಿ ಬದುಕಿ, ಬೆಳೆಯುತ್ತದೆ. ಹಾಗಾಗಿ ಇದು ವಜ್ರದಂತೆ ಕಠೋರ ಎನ್ನುವ ಕಾರಣಕ್ಕೆ ಇದನ್ನು ಹಿಮಾಲಯನ್‌ ಡೈಮಂಡ್‌ ಎಂದು ಕರೆಯುತ್ತಾರೆ.

ಹಿಮಾಲಯನ್ ಡೈಮಂಡ್‌ ಎಲ್ಲಿ ಕಾಣ ಸಿಗುತ್ತದೆ ?

ಉತ್ತರಾಖಂಡದಲ್ಲಿರುವ ಹೂವುಗಳ ಕಣಿವೆ ರಾಷ್ಟ್ರೀಯ ಉದ್ಯಾನವನವು ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿದೆ. ಇದು ಜುಲೈ ಮತ್ತು ಆಗಸ್ಟ್‌ನಲ್ಲಿ ಚಾರಣಿಗರಿಗೆ ತೆರೆದಿರುವ ಭಾರತದ ಅತ್ಯಂತ ಪ್ರಸಿದ್ಧ ಹೂವಿನ ತಾಣವಾಗಿದೆ. ನೂರಾರು ಹಿಮಾಲಯನ್ ಹೂಬಿಡುವ ಪ್ರಭೇದಗಳು ಕಣಿವೆಯನ್ನು ನೈಸರ್ಗಿಕ ಸಸ್ಯೋದ್ಯಾನವನ್ನಾಗಿ ಪರಿವರ್ತಿಸುತ್ತದೆ. ಉದ್ಯಾನವನಕ್ಕೆ ಭೇಟಿ ನೀಡಲು ಇದು ಅತ್ಯುತ್ತಮ ಸಮಯ.

ಹೇಮಕುಂಡ್ ಸಾಹಿಬ್ ಪ್ರದೇಶ, ಉತ್ತರಾಖಂಡ

ಹೇಮಕುಂಡ್ ಸಾಹಿಬ್‌ಗೆ ಹೋಗುವ ಟ್ರೆಕರ್‌ಗಳು ಆಲ್ಪೈನ್ ಹುಲ್ಲುಗಾವಲುಗಳ ಮೂಲಕ ಹಾದುಹೋಗಬೇಕಾಗುತ್ತದೆ. ಇದು ಹಲವಾರು ಅಪರೂಪದ ಹಿಮಾಲಯನ್ ಸಸ್ಯಗಳ ಒಂದು ತಾಣವಾಗಿದೆ.

ಗಂಗೋತ್ರಿ ರಾಷ್ಟ್ರೀಯ ಉದ್ಯಾನವನ

ಗಂಗೋತ್ರಿ ಕಣಿವೆಗಳಲ್ಲಿ ಈ ಹೂವು ಅರಳಿರುವುದನ್ನು ಅನೇಕ ಚಾರಣಿಗರು ನೋಡಿದ್ದಾರೆ. ಈ ಪ್ರದೇಶದಲ್ಲಿ ಅಪರೂಪದ ಹಿಮಾಲಯನ್ ಸಸ್ಯಗಳು ಹೆಚ್ಚಾಗಿ ಬೆಳೆಯುವುದು.

ಉತ್ತರ ಸಿಕ್ಕಿಂ

ಆಲ್ಪೈನ್ ಸಸ್ಯಗಳಿಗೆ ಹೆಸರಾದ ಮತ್ತೊಂದು ಸ್ಥಳವೆಂದರೆ ಉತ್ತರ ಸಿಕ್ಕಿಂ. ಯುಮ್ಥಾಂಗ್, ಝೀರೋ ಪಾಯಿಂಟ್ ಮತ್ತು ಲಾಚೆನ್ ಮತ್ತು ಲಾಚುಂಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಿಮಾಲಯನ್ ಹೂಬಿಡುವ ತಾಣವಾಗಿದೆ.

ಈ ಪ್ರದೇಶಗಳಿಗೆ ಭೇಟಿ ನೀಡುವುದು ಹೇಗೆ ?

ಈ ಆಲ್ಪೈನ್ ಹೂವುಗಳನ್ನು ನೋಡುವ ಉತ್ತಮ ಸಮಯವೆಂದರೆ ಜುಲೈ ಅಂತ್ಯದಿಂದ ಸೆಪ್ಟೆಂಬರ್ ಆರಂಭದವರೆಗೆ. ಇವು 4,000 ಮೀಟರ್‌ಗಿಂತ ಮೇಲಿರುವುದರಿಂದ, ಪ್ರಯಾಣಿಕರು ಹವಾಮಾನಕ್ಕೆ ಸರಿಯಾಗಿ ಒಗ್ಗಿಕೊಳ್ಳಬೇಕು. ಎಲ್ಲಾ ಸಮಯದಲ್ಲೂ ನೀರಿನಂಶವನ್ನು ಕಾಪಾಡಿಕೊಳ್ಳಬೇಕು.
ಈ ಜಗತ್ತಿನಲ್ಲಿ ಎಲ್ಲಾ ಋತುವಿನಲ್ಲಿ ಅನೇಕ ರೀತಿಯ ಹೂವುಗಳು ಕಂಡು ಬರುತ್ತವೆ. ಆದರೆ ಈ ಅಸಾಧಾರಣ ಆಲ್ಪೈನ್ ಜಾತಿಯ ಹೂವುಗಳನ್ನು ನೋಡುವ ಅನುಭವವೇ ಬೇರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+