ಕೈತುಂಬ ಸಂಬಳ ಸಿಗುವ ಸರ್ಕಾರಿ ಉದ್ಯೋಗಗಳಿವು-ಅಂಕಿಅಂಶಗಳ ವಿವರ ಇಲ್ಲಿದೆ

ನವದೆಹಲಿ, ನವೆಂಬರ್‌, 13: ಭಾರತದಲ್ಲಿ ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಕೈತುಂಬ ಸಂಬಳ ಸಿಗುತ್ತದೆ. ಹಾಗಾದರೆ ಅತೀ ಹೆಚ್ಚು ಹೆಚ್ಚು ಸಂಬಳ ಪಡೆಯುವ ಟಾಪ್ ಉದ್ಯೋಗಗಳು ಯಾವುವು ಹಾಗೂ ಯಾರಿಗೆ ಎಷ್ಟು ಸಂಬಳ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತದಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಹಾಗೆಯೇ ಎಲ್ಲಾ ಯುವಕ-ಯುವತಿಯರ ದೊಡ್ಡ ಕನಸಾಗಿರುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಹೆಚ್ಚಿನ ಭದ್ರತೆ ಹಾಗೂ ಅನುಕೂಲಗಳು ಇರುತ್ತವೆ. ಅಷ್ಟೇ ಅಲ್ಲದೆ, ಕೈತುಂಬ ಸಂಬಳ ಸಹ ಸಿಗುತ್ತದೆ.

Details of Higher Salaries Government Jobs

ಸರ್ಕಾರಿ ಉದ್ಯೋಗ ಪಡೆದವರಿಗೆ ಸಮಾಜದಲ್ಲಿ ಒಳ್ಳೆಯ ಗೌರವ ಸಿಗುತ್ತದೆ. ಆದ್ದರಿಂದ ಖಾಸಗಿ ಉದ್ಯೋಗಕ್ಕಿಂತ ಸರ್ಕಾರಿ ಉದ್ಯೋಗದತ್ತ ಹೆಚ್ಚಿನ ಯುವ ಜನತೆ ಮುಖ ಮಾಡುವುದುಂಟು. ಇನ್ನು IAS ಅಧಿಕಾರಿಗಳ ಸಂಬಳ ತಿಂಗಳಿಗೆ ₹56,100-2,50,000 ಇರುತ್ತದೆ. ಇವರ ಪ್ರಮುಖ ಕೆಲಸ ಸರ್ಕಾರದ ನೀತಿ-ನಿರೂಪಣೆಗಳನ್ನು ರೂಪಿಸುವುದು ಹಾಗೂ ಜಾರಿಗೆ ತರುವುದಾಗಿದೆ. ಇವರೆಲ್ಲಾ ಸರ್ಕಾರದ ವಿವಿಧ ಇಲಾಖೆಗಳ ಸಂಪೂರ್ಣ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಸುವರ್ಣ ನ್ಯೂಸ್‌ ವರದಿ ಮಾಡಿದೆ.

ಐಪಿಎಸ್‌ ಅಧಿಕಾರಿಗಳ ಸಂಬಳ ₹56,100-₹2,25,000 ಸಂಬಳವನ್ನು ಪ್ರತಿ ತಿಂಗಳು ಪಡೆಯುತ್ತಾರೆ. ಐಪಿಎಸ್ ಅಧಿಕಾರಿಗಳ ಪ್ರಮುಖ ಕೆಲಸವೆಂದರೆ, ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವುದಾಗಿದೆ.

ಇಂಡಿಯನ್ ಫಾರಿನ್ ಸರ್ವೀಸ್ ಅಧಿಕಾರಿಗಳ ಪ್ರತಿ ತಿಂಗಳ ಸಂಬಳ ₹56,100-₹2,50,000 ಆಗಿರುತ್ತದೆ. ಈ ಐಎಫ್‌ಎಸ್‌ ಅಧಿಕಾರಿಗಳು ವಿದೇಶಗಳಲ್ಲಿ ಭಾರತವನ್ನು ಪ್ರತಿನಿಧಿಸುತ್ತಾರೆ. ಅವರ ಪ್ರಮುಖ ಕೆಲಸವೆಂದರೇ ಇತರ ದೇಶಗಳ ನಡುವಿನ ಉತ್ತಮ ಬಾಂಧವ್ಯ ಬೆಳೆಸುವುದು ಹಾಗೂ ರಾಜತಾಂತ್ರಿಕ ಬಿಕ್ಕಟ್ಟುಗಳನ್ನು ಚಾಣಾಕ್ಷವಾಗಿ ನಿಭಾಯಿಸುವುದಾಗಿದೆ. ಜೊತೆಗೆ ವಿದೇಶದಲ್ಲಿದ್ದುಕೊಂಡೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಹಿತಾಸಕ್ತಿಯನ್ನು ಕಾಪಾಡಬೇಕಾದ ಮಹತ್ವದ ಜವಾಬ್ದಾರಿಯಾಗಿದೆ.

ಭಾರತದ ವಾಯು ಸೇನಾ, ಭೂ ಸೇನಾ ಹಾಗೂ ನೌಕಾ ಸೇನಾ ಮುಖ್ಯಸ್ಥರ ತಿಂಗಳ ಸಂಬಳ ₹56,100-₹2,50,000. ಈ ಪಡೆಗಳ ಮುಖ್ಯಸ್ಥರ ಮುಖ್ಯ ಕೆಲಸ ದೇಶವನ್ನು ಬಾಹ್ಯ ಶತ್ರುಗಳಿಂದ ಕಾಪಾಡುವುದು ಹಾಗೂ ವಿವಿಧ ಮಿಲಿಟರಿ ಕಾರ್ಯಾಚರಣೆ ನಡೆಸುವುದಾಗಿದೆ. ದೇಶದ ಮೂರು ಪಡೆಗಳ ಮುಖ್ಯಸ್ಥರ ಪ್ರಮುಖ ಕೆಲಸವೆಂದರೇ ದೇಶದ ಭದ್ರತೆಯನ್ನು ನಿಭಾಯಿಸುವುದಾಗಿದೆ.

ONGC ಆಯಿಲ್ & ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್‌ ಅಧಿಕಾರಿಗಳ ಸಂಬಳ ₹60,000-₹2,80,000 ತಿಂಗಳಿಗೆ ಪಡೆಯುತ್ತಾರೆ. ಇಲ್ಲಿ ಕೆಲಸ ಮಾಡುವವರು ಎನರ್ಜಿ, ಮ್ಯಾನ್ಯುಫ್ಯಾಕ್ಚರ್ ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ದಿಯ ಕುರಿತಂತೆ ಕೆಲಸ ಮಾಡುತ್ತಾರೆ.

ಇಂಡಿಯನ್ ರೆವಿನ್ಯೂ ಸರ್ವೀಸ್ ಅಧಿಕಾರಿಗಳ ತಿಂಗಳ ಸಂಬಳ ₹56,100-₹2,25,000ದ ವರೆಗೂ ಇದೆ. ಈ ಅಧಿಕಾರಿಗಳ ಕೆಲಸ ತೆರಿಗೆ ಸಂಗ್ರಹಿಸುವುದು ಹಾಗೂ ಜನರು ತೆರಿಗೆ ಕಾನೂನುಗಳನ್ನು ಸರಿಯಾಗಿ ಪಾಲಿಸುತ್ತಿದ್ದಾರಾ ಎನ್ನುವುದನ್ನು ನೋಡಿಕೊಳ್ಳುವುದಾಗಿದೆ. ಇವರ ಪ್ರಮುಖ ಕೆಲಸ ದೇಶದ ಅಭಿವೃದ್ದಿ ಕೆಲಸಗಳಿಗೆ ಹಣಕಾಸಿನ ಸಂಪನ್ಮೂಲ ಒದಗಿಸುವುದಾಗಿದೆ.

ಭಾರತೀಯ ರೈಲ್ವೇ ಸೇವೆ ಅಧಿಕಾರಿಗಳ ತಿಂಗಳ ಸಂಬಳ ₹56,100-₹2,25,000 ಆಗಿದೆ. ಇಂಡಿಯನ್ ರೈಲ್ವೇ ಸರ್ವೀಸ್ ಅಧಿಕಾರಿಗಳು, ರೈಲ್ವೇ ಚಟುವಟಿಕೆಗಳು, ರೈಲ್ವೇ ಪ್ರಯಾಣಿಕರ ಸುರಕ್ಷತೆಯನ್ನು ನೋಡಿಕೊಳ್ಳುವುದಾಗಿದೆ. ಜೊತೆ ರೈಲ್ವೇ ಚಟುವಟಿಕೆಗಳು ಯಾವುದೇ ಅಡಚಣೆಯಿಲ್ಲದೇ ನೋಡಿಕೊಳ್ಳುದಾಗಿದೆ.

ಇಂಡಿಯನ್ ಆಡಿಟ್ & ಅಕೌಂಟ್ಸ್‌ ಡಿಪಾರ್ಟ್‌ಮೆಂಟ್ ಅಧಿಕಾರಿಗಳು ತಿಂಗಳಿಗೆ ₹56,100-₹2,25,000 ಸಂಬಳ ಪಡೆಯುತ್ತಾರೆ. ಈ ಅಧಿಕಾರಿಗಳು ಸರ್ಕಾರದ ಖರ್ಚುವೆಚ್ಚಗಳು ಸರಿಯಾದ ರೀತಿಯಲ್ಲಿ ಮಾಡಲಾಗಿದೆಯೇ ಎನ್ನುವುದನ್ನು ಖಚಿತಪಡಿಸುತ್ತವೆ. ಈ ಉದ್ಯೋಗಿಗಳ ಪ್ರಮುಖ ಗುರಿ ಸರ್ಕಾರ ಸಾರ್ವಜನಿಕ ಹಣವನ್ನು ಸರಿಯಾಗಿ ಬಳಕೆ ಮಾಡುತ್ತಿದೆಯೇ ಎನ್ನುವುದನ್ನು ಪರೀಕ್ಷಿಸುವುದಾಗಿದೆ.

ರಾಜ್ಯ ಲೋಕಸೇವಾ ಆಯೋಗದ ಅಧಿಕಾರಿಗಳು ತಿಂಗಳಿಗೆ ₹56,100-₹2,25,000 ಸಂಬಳ ಪಡೆಯುತ್ತಾರೆ. ಈ ಅಧಿಕಾರಿಗಳು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳ ಆಡಳಿತಾತ್ಮಕ ಪಾತ್ರಗಳನ್ನು ನಿಭಾಯಿಸುತ್ತಾರೆ. ಇವರ ಪ್ರಮುಖ ಕೆಲ ರಾಜ್ಯ ಸರ್ಕಾರಗಳು ಜಾರಿಗೆ ತರುವ ಜನಪರ ಕಲ್ಯಾಣ ಯೋಜನೆಗಳು ಸರಿಯಾದ ರೀತಿಯಲ್ಲಿ ಜನರಿಗೆ ತಲುಪುತ್ತಿದೆಯೇ ಎನ್ನುವುದನ್ನು ನೋಡಿಕೊಳ್ಳುವುದು.

ಸುಪ್ರೀಂ ಕೋರ್ಟ್ ಜಡ್ಜ್‌ಗಳ ಪ್ರತಿ ತಿಂಗಳ ಸಂಬಳ ₹2,50,000 ಆಗಿರುತ್ತದೆ. ಇನ್ನು ಹೈಕೋರ್ಟ್ ಜಡ್ಜ್‌ಗಳ ಸಂಬಳ ₹2,24,000 ಆಗಿದೆ. ಈ ನ್ಯಾಯಾದೀಶರು ನ್ಯಾಯಾಂಗದ ಕೆಲಸಗಳನ್ನು ಮಾಡುತ್ತಾರೆ. ಕಾನೂನು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ವಾದ-ವಿವಾದಗಳನ್ನು ಆಲಿಸಿ ತೀರ್ಪು ನೀಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+