ಮಗಳ ಸಾಧನೆ, ಅಪ್ಪನ ಖುಷಿ: ಸೋಷಿಯಲ್ ಮೀಡಿಯಾದಲ್ಲಿ ಸಡಗರ

ಇಂಫಾಲ, ಮೇ 11: ಪೊಲೀಸ್ ಅಧಿಕಾರಿಯಾಗಿ ಸಮವಸ್ತ್ರ ತೊಟ್ಟು ಬಂದ ಮಗಳು... ಆಕೆಯನ್ನು ನೋಡಿ ಖುಷಿಯಾದ ತಂದೆ... ಕುತೂಹಲದಲ್ಲಿ ಆಕೆಯ ಸ್ಟಾರ್‌ ನೋಡಿದರು... ಅದೇ ಸಮಯದಲ್ಲಿ ಈ ಭಾವನಾತ್ಮಕ ಸಂದರ್ಭ ಫೋಟೋದಲ್ಲಿ ಸೆರೆಯಾಯ್ತು.

ರಟ್ಟನಾ ನ್ಗಾಸೆಪ್ಪಮ್ ಮಣಿಪುರದ ಇಂಫಾಲ್‌ನ ಉಪ ಪೊಲೀಸ್ ವರಿಷ್ಟಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ತಂದೆಯ ಆಸೆಯನ್ನು ರಟ್ಟನಾ ಪೂರೈಸಿದ್ದಾರೆ. ಮಗಳನ್ನು ನೋಡಿದ ತಂದೆ ತುಂಬ ಸಂತಸಪಟ್ಟಿದ್ದಾರೆ. ಈ ತಂದೆ ಮಗಳ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗಿದೆ.

ನೆಟ್ಟಿಗರು ಅಪ್ಪ ಮಗಳ ಸುಂದರ ಫೋಟೋಗೆ ಲೈಕ್‌ ನೀಡುತ್ತಿದ್ದಾರೆ. ಎಂತಹ ಅದ್ಭುತ ಸಂದರ್ಭ ಎಂದು ಹಾಡಿ ಹೊಗಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಂದು ಈ ಫೋಟೋ ದೊಡ್ಡ ಜನಪ್ರಿಯತೆ ಪಡೆದಿದೆ.

Deputy SP Rattana Ngaseppam And Her Father Photo Viral In Social Media

ಬಾಲಿವುಡ್ ನಟಿ ರವೀನಾ ಟಂಡನ್ ಸಹ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋ ಹಂಚಿಕೊಂಡಿದ್ದಾರೆ. #proudindianwomen ಎಂದು ರಟ್ಟನಾ ಸಾಧನೆಗೆ ಭೇಷ್ ಎಂದಿದ್ದಾರೆ.

ರಟ್ಟನಾ ಅವರ ಈ ಫೋಟೋವನ್ನು ಕೆಲವು ತಿಂಗಳ ಹಿಂದೆ ಕ್ಲಿಕ್ ಮಾಡಲಾಗಿದೆ. ಕಳೆದ ಗುರುವಾರ ಟ್ವಿಟ್ಟರ್ ಖಾತೆಯಲ್ಲಿ ಅಪ್‌ ಲೋಡ್‌ ಆದ ಫೋಟೋ ವೈರಲ್ ಆಗಲು ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+