Delhi Temperature: ದೆಹಲಿಯಲ್ಲಿ 52.3 ಡಿಗ್ರಿ ತಲುಪಿದ ತಾಪಮಾನ: ಭಾರತದಲ್ಲೇ ಅತಿ ಹೆಚ್ಚು

ಬಿಸಿಲಿನ ಝಳಕ್ಕೆ ಉತ್ತರ ಭಾರತ ಕಂಗಾಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತಾಪಮಾನ ಅರ್ಧಶತಕ ದಾಟಿದ್ದು, ಇಂದು ದೇಶದಲ್ಲೇ ಅತ್ಯಧಿಕ ತಾಪಮಾನ ದಾಖಲಾಗಿದೆ.

ಮಂಗಳವಾರ ದೆಹಲಿಯ ಹವಾಮಾನ ಕಚೇರಿಯಲ್ಲಿ 52.3 ಡಿಗ್ರಿ ಸೆಲ್ಸಿಯಸ್‌ ದಾಟಿದೆ. ಇದು ದೇಶದಲ್ಲೇ ದಾಖಲಾದ ಅತ್ಯಂತ ಹೆಚ್ಚು ತಾಪಮಾನವಾಗಿದೆ. ದೆಹಲಿಯ ಮುಂಗೇಶ್‌ಪುರದ ಹವಾಮಾನ ಕೇಂದ್ರವು ಮಧ್ಯಾಹ್ನ 2.30 ಕ್ಕೆ 52.3 ಡಿಗ್ರಿ ಸೆಲ್ಸಿಯಸ್‌ನೊಂದಿಗೆ ಭಾರತದ ಇದುವರೆಗಿನ ಅತ್ಯಂತ ಬಿಸಿಯಾದ ದಿನ ಎಂದು ದಾಖಲಾಗಿದೆ.

Delhi Reaches 52 3 Degrees Highest Temperature Ever Recorded in India

ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ನಗರದ ಜನ ಹೆಚ್ಚಾಗಿ ಹವಾನಿಯಂತ್ರಣಗಳ ಮೊರೆ ಹೋದ ಕಾರಣ ದೆಹಲಿಯಲ್ಲಿಯಲ್ಲಿ ವಿದ್ಯುತ್ ಬೇಡಿಕೆ ಸಾರ್ವಕಾಲಿಕವಾಗಿ ಹೆಚ್ಚಾಗಿತ್ತು. ನಗರದಲ್ಲಿ 8,302 ಮೆಗಾವ್ಯಾಟ್ (MW) ಅನ್ನು ವಿದ್ಯುತ್ ಬೇಡಿಕೆ ದಾಖಲಿಸಿದೆ ಎಂದು ವಿದ್ಯುತ್ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಕೂಡ ತಾಪಮಾನ ಅರ್ಧಶತಕ ದಾಟಿದೆ. ಫಲೋಡಿಯಲ್ಲಿ 51 ಡಿಗ್ರಿ ಸೆಲ್ಸಿಯಸ್ ಮತ್ತು 50.8 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಜನ ತತ್ತರಿಸುತ್ತಿದ್ದಾರೆ. ಹರಿಯಾಣದ ಸಿರ್ಸಾದಲ್ಲಿ 50.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಶಾಖದ ಅಲೆಗಳಿಗೆ ಬೆಚ್ಚಿದ ಜನ

ಅರೇಬಿಯನ್ ಸಮುದ್ರದಿಂದ ಆರ್ದ್ರ ಗಾಳಿಯ ಆಕ್ರಮಣದಿಂದಾಗಿ ದಕ್ಷಿಣ ರಾಜಸ್ಥಾನದ ಬಾರ್ಮರ್, ಜೋಧ್‌ಪುರ್, ಉದಯಪುರ, ಸಿರೋಹಿ ಮತ್ತು ಜಲೋರ್ ಜಿಲ್ಲೆಗಳಲ್ಲಿ ಇಂದು 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕುಸಿತ ದಾಖಲಾಗಿದೆ, ಇದು ವಾಯುವ್ಯ ಭಾರತದ ಮೇಲೆ ಶಾಖದ ಅಲೆಗಳ ಪ್ರಭಾವ ಕಡಿಮೆಯಾಗುವ ಸೂಚನೆ ಕೊಟ್ಟಿದೆ.

ಹವಾಮಾನ ಅವಲೋಕನಗಳನ್ನು ಪ್ರಕ್ರಿಯೆಗೊಳಿಸಲು ಕಂಪ್ಯೂಟರ್ ಮಾದರಿಗಳನ್ನು ಬಳಸುವ ಸಂಖ್ಯಾತ್ಮಕ ಹವಾಮಾನ ಮುನ್ಸೂಚನೆ (NWP) ದತ್ತಾಂಶವು, ಮೇ 30 ರ ಬಳಿಕ ಶಾಖದ ಅಲೆಗಳ ಪ್ರಭಾವ ಕಡಿಮೆ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+