Delhi Protest Update: ಅಭಿಜೀತ್ ದೀಪ್ಕೆ ಬಂಧನ; ಅಜಿಂಕ್ಯ ಶಿಂಧೆ ಅಖಾಡಕ್ಕೆ; ಕಾಕ್ರೋಚ್ ಜನತಾ ಪಾರ್ಟಿ, ದೆಹಲಿ ಪೊಲೀಸ್ ಅಪ್ಡೇಟ್
Delhi Protest Update: ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ ನಡೆಸುತ್ತಿರುವ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಕಾಕ್ರೋಚ್ ಜನತಾ ಪಾರ್ಟಿಯ ಪ್ರಮುಖ ನಾಯಕರನ್ನು ಬಂಧಿಸಿದ ಬೆನ್ನಲ್ಲೇ ಹೊಸ ನಾಯಕರು ಮುನ್ನೆಲೆಗೆ ಬಂದಿದ್ದಾರೆ. ಸಿಜೆಪಿಯ ರಾಷ್ಟ್ರೀಯ ಸಂಘಟನೆಯ ಉಸ್ತುವಾರಿ ತಂಡದಲ್ಲಿ ಅಜಿಂಕ್ಯ ಶಿಂಧೆ ಅವರು ಇದ್ದಾರೆ. ಇದೀಗ ಕಾಕ್ರೋಚ್ ಜನತಾ ಪಾರ್ಟಿಯ ಸದಸ್ಯ ಹೋರಾಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿಯ ಹೋರಾಟ ಹಾಗೂ ಸದ್ಯದ ಬೆಳವಣಿಗೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅಜಿಂಕ್ಯ ಶಿಂಧೆ ಅವರು, ತಮ್ಮ ಪ್ರೀತಿಯ ದೇಶವನ್ನು ಮೋದಿ ಮತ್ತು ಶಾ ಅವರು ಸರ್ವಾಧಿಕಾರವನ್ನಾಗಿ ಪರಿವರ್ತಿಸುತ್ತಿದ್ದಾರೆ ಎಂದು ಪ್ರತಿಯೊಬ್ಬ ಭಾರತೀಯರೂ ಕೋಪಗೊಂಡಿದ್ದಾರೆ. ನಿನ್ನೆ ದೆಹಲಿ ಮತ್ತು ಭಾರತದಾದ್ಯಂತ ಹತ್ತಾರು ಸಾವಿರ ಜನರನ್ನು ಬಂಧಿಸಿದ ರೀತಿಯನ್ನು ಪ್ರಶ್ನಿಸದೆ ಬಿಡಲಾಗುವುದಿಲ್ಲ. ಸರ್ವಾಧಿಕಾರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ಪ್ರಾರಂಭವಾಗಿವೆ. ಮುಂಬೈನಲ್ಲಿ, ಪ್ರತಿಭಟನಾಕಾರರು ಇಂದು ಸಂಜೆ 4 ಗಂಟೆಗೆ ಟಿ ಜಂಕ್ಷನ್, ಶಿವಾಜಿ ಪಾರ್ಕ್‌ನಲ್ಲಿ ಶಾಂತಿಯುತವಾಗಿ ಸೇರುತ್ತಾರೆ. ಶೀಘ್ರದಲ್ಲೇ ಹೆಚ್ಚಿನ ನಗರಗಳಲ್ಲಿ ಪ್ರತಿಭಟನೆ ನಡೆಯಲಿದೆ.

ನಮ್ಮ ನಾಯಕರನ್ನು ಬಂಧಿಸಿ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಮೂಲಕ ಸರ್ಕಾರ ದೊಡ್ಡ ತಪ್ಪು ಮಾಡಿದೆ. ಗದ್ದರ್ ಗ್ಯಾನು / (ಜ್ಞಾನೇಶ್) ರಾಜೀನಾಮೆ ನೀಡಬೇಕು! ಎಂದು ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ಮೋದಿಯಿಂದ ಭಾರತಕ್ಕೆ ಮುಜುಗರ
ಪ್ರಧಾನಿ ನರೇಂದ್ರ ಮೋದಿ ಅವರು ಭಾರತಕ್ಕೆ ಮುಜುಗರ ತಂದಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಹೇಳಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಪ್ರಧಾನಿಯಾಗಿ ಮೋದಿ ಭಾರತಕ್ಕೆ ಮುಜುಗರ ತಂದಿದ್ದಾರೆ. ಈ ದೇಶವು ಇದಕ್ಕಿಂತ ದೊಡ್ಡ ಹೇಡಿ ಮತ್ತು ಗೂಂಡಾಗಿರಿಯನ್ನು ಹಿಂದೆಂದೂ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿಜೀತ್ ದೀಪ್ಕೆ ಅವರ ಅಜ್ಜಿ ಮೃತಪಟ್ಟಿದ್ದು ಅವರು ಪ್ರತಿಭಟನೆಯಿಂದ ವಿರಾಮ ತೆಗೆದುಕೊಂಡಿದ್ದಾರೆ. " ಈ ದುಃಖದ ಕ್ಷಣದಲ್ಲಿ ನನ್ನ ಕುಟುಂಬದೊಂದಿಗೆ ಇರಲು ನನ್ನ ಹಳ್ಳಿಗೆ ಹಿಂತಿರುಗುತ್ತಿದ್ದೇನೆ. ಸೌರವ್ ಮತ್ತು ಆಶು ಶೀಘ್ರದಲ್ಲೇ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಿಜೆಪಿ ಹಿಂದೆ ಸರಿಯುವುದಿಲ್ಲ ಅಥವಾ ಬೆದರಿಸುವುದಿಲ್ಲ. ಅಕ್ಟೋಬರ್ 10 ಈ ಸರ್ವಾಧಿಕಾರದ ಅಂತ್ಯದ ಆರಂಭವಾಗಿ ಇಳಿಯುತ್ತದೆ' ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ದೆಹಲಿ ಪೊಲೀಸ್ ಟ್ವೀಟ್
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ದೆಹಲಿ ಪೊಲೀಸರು, ಅಭಿಜೀತ್ ದೀಪ್ಕೆ, ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು 2026ರ ಅಕ್ಟೋಬರ್ 10ರಂದು ಬಿಎನ್‌ಎಸ್‌ಎಸ್‌ನ ಸೆಕ್ಷನ್ 126 ಮತ್ತು 170ರ ಅಡಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಲಾಗಿತ್ತು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ, ಅಕ್ಟೋಬರ್ 11ರಂದು ಅವರನ್ನು ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ಎಸ್‌ಇಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.
ಒಂದು ವರ್ಷದ ಅವಧಿಗೆ ಶಾಂತಿ ಕಾಪಾಡಿಕೊಂಡು ಉತ್ತಮ ನಡವಳಿಕೆ ತೋರುವ ಷರತ್ತಿನ ಮೇಲೆ, 50,000 ರೂ.ಗಳ ಜಾಮೀನು ಬಾಂಡ್ ಸಲ್ಲಿಸಲಾಯಿತು. ಬಳಿಕ ಎಸ್‌ಇಎಂ ನ್ಯಾಯಾಲಯವು ಅವರನ್ನು ಬಿಡುಗಡೆ ಮಾಡಿತು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications
