• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೆಹಲಿಯಲ್ಲಿ 22 ದಿನಗಳ ನಂತರ ಗಾಳಿ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ

|
Google Oneindia Kannada News

ನವದೆಹಲಿ, ನವೆಂಬರ್ 24: ರಾಷ್ಟ್ರ ರಾಜಧಾನಿಯಲ್ಲಿ 22 ದಿನಗಳ ನಂತರ ಮೊದಲ ಬಾರಿಗೆ ಗಾಳಿಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ. ಬುಧವಾರ ಬೆಳಗ್ಗೆ ಹೊತ್ತಿಗೆ ದೆಹಲಿಯಲ್ಲಿ ವಾಯು ಗುಣಣಟ್ಟ ಸೂಚ್ಯಂಕವು 280ಕ್ಕೆ ಇಳಿಕೆಯಾಗಿದೆ. ಆ ಮೂಲಕ ಅತ್ಯಂತ ಕಳಪೆ ವರ್ಗದಿಂದ ವಾಯು ಗುಣಮಟ್ಟ ಸೂಚ್ಯಂಕವು ಕಳಪೆ ವರ್ಗಕ್ಕೆ ಬದಲಾಗಿದೆ.

ಭಾನುವಾರದಂದು ಗಂಟೆಗೆ 20 ಕಿಮೀ ಮತ್ತು ಸೋಮವಾರ 25 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಗಾಳಿಯ ಗುಣಮಟ್ಟ ಮತ್ತು ಗೋಚರತೆಯಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಯಿತು ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿ ಮಾಲಿನ್ಯ ಸುಧಾರಣೆ: ಕಟ್ಟಡ ಕಾಮಗಾರಿಗೆ ಅನುಮತಿ, ಶಾಲೆ ಪುನರಾರಂಭಕ್ಕೆ ಚಿಂತನೆದೆಹಲಿ ಮಾಲಿನ್ಯ ಸುಧಾರಣೆ: ಕಟ್ಟಡ ಕಾಮಗಾರಿಗೆ ಅನುಮತಿ, ಶಾಲೆ ಪುನರಾರಂಭಕ್ಕೆ ಚಿಂತನೆ

ಭಾನುವಾರ (349) ಮತ್ತು ಸೋಮವಾರದಂದು (311) ದೆಹಲಿಯ ಗಾಳಿಯ ಗುಣಮಟ್ಟವು "ಅತ್ಯಂತ ಕಳಪೆ" ವಿಭಾಗದಲ್ಲಿ ದಾಖಲಾಗಿದೆ. ನೆರೆಯ ಫರಿದಾಬಾದ್ (279), ಘಾಜಿಯಾಬಾದ್ (268), ಗ್ರೇಟರ್ ನೋಯ್ಡಾ (255), ಗುರ್ಗಾಂವ್ (276) ಮತ್ತು ನೋಯ್ಡಾ (252) ಸಹ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡಿದೆ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೀಗ ಕಳಪೆ ಹಂತಕ್ಕೆ ತಲುಪಿದೆ. ವಾಯು ಮಾಲಿನ್ಯ ಪ್ರಮಾಣ ಎಷ್ಟಿರಬೇಕು ಎಂಬುದಕ್ಕೆ ಒಂದು ಮಾನದಂಡವಿದೆ. ಅದರ ಪ್ರಕಾರ, 00-50 ಉತ್ತಮ, 51-100 ತೃಪ್ತಿದಾಯಕ, 101-200 ಮಧ್ಯಮ, 201-300 ಕಳಪೆ, 301-400 ಅತಿಕಳಪೆ, 401-500 ಅಪಾಯಕಾರಿ, ಹಾಗೂ 500 ನಂತರ ಅತಿ ಅಪಾಯಕಾರಿ ಎಂದು ಹೇಳಲಾಗುತ್ತದೆ.

ದೆಹಲಿಯಲ್ಲಿ ಮೂರು ದಿನ ಗಾಳಿ ಗುಣಮಟ್ಟ:

ಭೂ ವಿಜ್ಞಾನ ಸಚಿವಾಲಯದ ವಾಯು ಗುಣಮಟ್ಟದ ಮಾನಿಟರ್ SAFAR ಸಾರಿಗೆ ಮಟ್ಟದ ಗಾಳಿಯು ನಿಧಾನಗೊಳ್ಳುವ ಸಾಧ್ಯತೆಯಿದೆ. ವಾಯುವ್ಯದಿಂದ ದಕ್ಷಿಣ-ಆಗ್ನೇಯಕ್ಕೆ ದಿಕ್ಕನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಹೇಳಿದೆ. ಇದು "ಕಳಪೆ" ವರ್ಗದೊಳಗಿದ್ದರೂ ಗಾಳಿಯ ಗುಣಮಟ್ಟದಲ್ಲಿ ಮತ್ತಷ್ಟು ಸುಧಾರಣೆಗೆ ಕಾರಣವಾಗುತ್ತದೆ. ಸೋಮವಾರ ಪಶ್ಚಿಮ ದಿಕ್ಕಿನ ಮಾರುತಗಳು ಗಂಟೆಗೆ 25 ಕಿಮೀ ವೇಗದಲ್ಲಿ 3,200 ಮೀಟರ್‌ಗೆ ಗೋಚರತೆಯನ್ನು ಸುಧಾರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಹಿರಿಯ ವಿಜ್ಞಾನಿ ಆರ್ ಕೆ ಜೆನಮಣಿ ಹೇಳಿದ್ದಾರೆ. ಪಾಲಂ ವೀಕ್ಷಣಾಲಯದ ಪ್ರಕಾರ, ನವೆಂಬರ್ ತಿಂಗಳಿನಲ್ಲೇ ಮೊದಲ ಬಾರಿಗೆ "3,000 ಮೀ ಗಿಂತ ಹೆಚ್ಚು ಗೋಚರತೆ ಮತ್ತು ಅಂತಹ ಬಲವಾದ ಗಾಳಿ" ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಮೇಲ್ಮೈ ಗಾಳಿಯ ವೇಗವು ಮುಂದಿನ ಮೂರು ದಿನಗಳವರೆಗೆ ತುಲನಾತ್ಮಕವಾಗಿ ಕಡಿಮೆ ಇರುತ್ತದೆ ಮತ್ತು ಮಾಲಿನ್ಯಕಾರಕಗಳ ಪ್ರಸರಣವನ್ನು ಕಡಿಮೆ ಮಾಡುತ್ತದೆ. ನವೆಂಬರ್ 27 ರಿಂದ ಮೇಲ್ಮೈ ಮಾರುತಗಳು ಹೆಚ್ಚಾಗುವ ಸಾಧ್ಯತೆಯಿದೆ. ಮುಂದಿನ ಮೂರು ದಿನಗಳ ಕಾಲ ಗಾಳಿಯ ಗುಣಮಟ್ಟ ಕಳಪೆ ವಿಭಾಗದಲ್ಲಿ ಇರಬಹುದು ಎಂದು ತಿಳಿದು ಬಂದಿದೆ.

ಕಟ್ಟಡ ನಿರ್ಮಾಣ ಚಟುವಟಿಕೆಗೆ ಅನುಮತಿ:

ನವದೆಹಲಿಯ ಗಾಳಿ ಗುಣಮಟ್ಟದಲ್ಲಿ ಸುಧಾರಣೆ ಕಂಡು ಬಂದಿರುವುದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಕಾರ್ಮಿಕರು ಎದುರಿಸುತ್ತಿರುವ ಅನಾನುಕೂಲತೆ ಹಿನ್ನೆಲೆ ನಿರ್ಮಾಣ ಕಾಮಗಾರಿ ಹಾಗೂ ತೆರವು ಚಟುವಟಿಕೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಬುಧವಾರ ಪುನರಾರಂಭಿಸುವ ಕುರಿತು ಸರ್ಕಾರವು ಕರೆ ನೀಡಲಿದೆ ಎಂದು ಪರಿಸರ ಸಚಿವ ಗೋಪಾಲ್ ರೈ ಹೇಳಿದ್ದಾರೆ. "ಪರಿಸ್ಥಿತಿ ಸುಧಾರಿಸಿದರೆ ಅಗತ್ಯವಲ್ಲದ ವಸ್ತುಗಳನ್ನು ಸಾಗಿಸುವ ಸಿಎನ್‌ಜಿ-ಚಾಲಿತ ಟ್ರಕ್‌ಗಳು ದೆಹಲಿಗೆ ಪ್ರವೇಶಿಸಲು ಅನುಮತಿಸಬಹುದೇ ಎಂದು ನಾವು ಚರ್ಚಿಸುತ್ತೇವೆ" ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 26ರವರೆಗೂ ವರ್ಕ್ ಫ್ರಮ್ ಹೋಮ್ ವಿಸ್ತರಣೆ

"ದೆಹಲಿಯಲ್ಲಿ ಅಗತ್ಯ ಮತ್ತು ತುರ್ತು ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಜಿಎನ್‌ಸಿಟಿಯ ಎಲ್ಲಾ ಕಚೇರಿಗಳು/ಸ್ವಾಯತ್ತ ಸಂಸ್ಥೆಗಳು/ಕಾರ್ಪೊರೇಷನ್‌ಗಳು ನವೆಂಬರ್ 26ರವರೆಗೆ ಬಂದ್ ಆಗಿರುತ್ತವೆ. ಆದಾಗ್ಯೂ, ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಮನೆಯಿಂದಲೇ ಕೆಲಸ ಮಾಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

      ಡ್ಯಾಮ್ ಗೇಟ್ ಓಪನ್ ಆದ ತಕ್ಷಣ ಕೊಚ್ಚಿಕೊಂಡು ಹೋದ ಕಾರ್ಮಿಕರ ವಿಡಿಯೋ | Oneindia Kannada
      English summary
      Delhi Pollution: Air Quality Improved to 'Poor' Category With Change in Wind Flow.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X