ದೆಹಲಿ ಸರ್ಕಾರದಿಂದ ಗುಡ್ ನ್ಯೂಸ್: ಮಹಿಳೆಯರ ಖಾತೆಗೆ 2500 ರೂ.
ದೆಹಲಿ ಮಾರ್ಚ್ 8: ಮಹಿಳಾ ದಿನಾಚರಣೆಯಂದು ಬಿಜೆಪಿ ದೆಹಲಿಯಲ್ಲಿ ಮಹಿಳಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರುವ ನಿರೀಕ್ಷೆ ಇದೆ. ಇಂದು ನಡೆಯಲಿರುವ ದೆಹಲಿ ಸಚಿವ ಸಂಪುಟ ಸಭೆಯಲ್ಲಿ ಇದರ ನಿರ್ಧಾರ ತೆಗೆದುಕೊಳ್ಳಲಾಗುವುದು. ಈ ಹಿಂದೆ ಯೋಜನೆಯ ಕ್ಯಾಬಿನೆಟ್ ಟಿಪ್ಪಣಿ ಹೊರಬಂದಿದ್ದು, ಅದರಲ್ಲಿ ಷರತ್ತುಗಳನ್ನು ಉಲ್ಲೇಖಿಸಲಾಗಿದೆ. ಅವುಗಳನ್ನು ಪೂರೈಸುವ ಮಹಿಳೆಯರು ಮಾತ್ರ ಯೋಜನೆಯಡಿಯಲ್ಲಿ ಪ್ರತಿ ತಿಂಗಳು 2500 ರೂ.ಗಳನ್ನು ಪಡೆಯುತ್ತಾರೆ.
2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ದೆಹಲಿಯಲ್ಲಿ ಬಿಜೆಪಿ ಸರ್ಕಾರ ಬಂದರೆ ಮಹಿಳಾ ಸಮೃದ್ಧಿ ಯೋಜನೆಯನ್ನು ಜಾರಿಗೆ ತರುವುದಾಗಿ ಬಿಜೆಪಿ ಘೋಷಿಸಿತ್ತು. ಈ ಯೋಜನೆಯಡಿ ಮಹಿಳೆಯರಿಗೆ ಪ್ರತಿ ತಿಂಗಳು 2500 ರೂ. ನೀಡಲಾಗುತ್ತದೆ ಎಂದು ಬಿಜೆಪಿ ಹೇಳಿತ್ತು. ಈಗ ಈ ಯೋಜನೆಯನ್ನು ಜಾರಿಗೆ ತರುವ ಸಮಯ ಬಂದಿದೆ. ಹಾಗಾದರೆ ಮಹಿಳೆಯರಿಗೆ ಹಣ ಸಿಗುವ ಷರತ್ತುಗಳು ಯಾವುವು? ಈ ಯೋಜನೆಯ ವ್ಯಾಪ್ತಿಗೆ ಯಾವ ಮಹಿಳೆಯರು ಬರುತ್ತಾರೆ ಮತ್ತು ಯಾರು ಬರುವುದಿಲ್ಲ? ಎಂದು ಈಗ ತಿಳಿಯೋಣ.

ಯೋಜನೆಯ ಪ್ರಯೋಜನ ಪಡೆಯಲು ನೋಂದಣಿ ಅಗತ್ಯ
ಕ್ಯಾಬಿನೆಟ್ ಆದೇಶದ ಪ್ರಕಾರ ಆರಂಭದಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರ ಮಹಿಳಾ ಸಮ್ಮಾನ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಇದಕ್ಕೆ ಮೊದಲ ಷರತ್ತು ಏನೆಂದರೆ, ಈ ಯೋಜನೆಯ ಲಾಭ ಪಡೆಯಲು ಬಯಸುವ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಬೇರೆ ಯಾವುದೇ ಸರ್ಕಾರಿ ಯೋಜನೆಯ ಲಾಭವನ್ನು ಪಡೆಯಬಾರದು. ಯೋಜನೆಯ ಪ್ರಯೋಜನಗಳನ್ನು ಪಡೆಯಲು ಬಯಸುವ ಮಹಿಳೆಯರು 21 ವರ್ಷದಿಂದ 60 ವರ್ಷ ವಯಸ್ಸಿನವರಾಗಿರಬೇಕು. ಈ ಯೋಜನೆಗೆ ನೋಂದಣಿ ಕಡ್ಡಾಯವಾಗಿರುತ್ತದೆ.
ಅರ್ಹತಾ ಮಾನದಂಡಗಳು
1. ಆಧಾರ್ ಕಾರ್ಡ್
2. ಪಡಿತರ ಚೀಟಿ
3. ವಿಳಾಸ ಪುರಾವೆ
4. ನೋಂದಾಯಿತ ಮೊಬೈಲ್ ಸಂಖ್ಯೆ
5. ಬ್ಯಾಂಕ್ ಖಾತೆ ವಿವರಗಳು (ಅದು ಆಧಾರ್ ಸಂಖ್ಯೆಗೆ ಲಿಂಕ್ ಆಗಿರಬೇಕು)
6.ಅರ್ಜಿದಾರರು ಕನಿಷ್ಠ 5 ವರ್ಷಗಳ ಕಾಲ ದೆಹಲಿಯ ನಿವಾಸಿಯಾಗಿರಬೇಕು.
ನೋಂದಣಿಗೆ ಕಡ್ಡಾಯ ಷರತ್ತುಗಳು
- ವಾರ್ಷಿಕ 3 ಲಕ್ಷ ರೂಪಾಯಿಗಳವರೆಗಿನ ಆದಾಯಕ್ಕಾಗಿ SDM ಅಥವಾ ಕಂದಾಯ ಇಲಾಖೆಯ ಯಾವುದೇ ಅಧಿಕಾರಿಯಿಂದ ಪ್ರಮಾಣೀಕರಿಸಲ್ಪಟ್ಟ ಆದಾಯ ಪ್ರಮಾಣಪತ್ರ.
- ವಾರ್ಷಿಕ 1 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾರ್ಡ್ ಅಗತ್ಯವಾಗಿದೆ.
ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ಉದ್ಘಾಟನೆ
ಈ ಯೋಜನೆಗೆ ಶನಿವಾರ (ಮಾರ್ಚ್ 8) ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ. ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ನಂತರ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆಯುವ ಅದ್ಧೂರಿ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಗುವುದು.
ವಾಸ್ತವವಾಗಿ ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ನೀಡಿದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಮಹಿಳಾ ಸಮೃದ್ಧಿ ಯೋಜನೆಯೂ ಒಂದು. ಇದನ್ನು ಮುಖ್ಯಮಂತ್ರಿ ರೇಖಾ ಗುಪ್ತಾ ಮಹಿಳಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಲಿದ್ದಾರೆ ಎನ್ನಲಾಗಿದೆ. ಮೊದಲ ಹಂತದಲ್ಲಿ ಈ ಯೋಜನೆಯ ಲಾಭವನ್ನು ಬಡ ಕುಟುಂಬಗಳ ಮಹಿಳೆಯರಿಗೆ ಮಾತ್ರ ನೀಡಲಾಗುವುದು.
ದೆಹಲಿಯಲ್ಲಿ 72 ಲಕ್ಷಕ್ಕೂ ಹೆಚ್ಚು ಮಹಿಳಾ ನೋಂದಾಯಿತ ಮತದಾರರಿದ್ದಾರೆ, ಅದರಲ್ಲಿ ಶೇಕಡಾ 50 ರಷ್ಟು ಮಹಿಳೆಯರು ಮತ ಚಲಾಯಿಸುತ್ತಾರೆ. 20 ಲಕ್ಷ ಮಹಿಳೆಯರು ಈ ಯೋಜನೆ ಫಲ ಪಡೆಯಲು ಅರ್ಹತೆಯನ್ನು ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ. ಇದಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳಿಂದ ದತ್ತಾಂಶವನ್ನು ಪಡೆಯುತ್ತಿದೆ. ಇದಲ್ಲದೆ, ಐಟಿ ಇಲಾಖೆಯು ಪ್ರತ್ಯೇಕ ಸಾಫ್ಟ್‌ವೇರ್ ಅನ್ನು ಅಭಿವೃದ್ಧಿಪಡಿಸುತ್ತಿದ್ದು, ಅದರ ಮೂಲಕ ಎಲ್ಲಾ ಅರ್ಜಿ ನಮೂನೆಗಳನ್ನು ಪರಿಶೀಲಿಸಲಾಗುತ್ತದೆ ಇದರಿಂದ ಅರ್ಹ ಮಹಿಳೆಯರನ್ನು ಗುರುತಿಸಬಹುದು.
ಚುನಾವಣೆಯ ನೀಡಿದ ಭರವಸೆ
ವಾಸ್ತವವಾಗಿ, ಈ ಯೋಜನೆಯು ದೆಹಲಿ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ನೀಡಿದ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು. ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಮೊದಲು ಇದನ್ನು ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದರು. ಈ ನಿಟ್ಟಿನಲ್ಲಿ ದೆಹಲಿ ಸರ್ಕಾರವು ಈ ಯೋಜನೆಯನ್ನು ಯಾವುದೇ ಬೆಲೆ ತೆತ್ತಾದರೂ ಅಂತರರಾಷ್ಟ್ರೀಯ ಮಹಿಳಾ ದಿನದಂದು ಪ್ರಾರಂಭಿಸಬೇಕೆಂದು ಬಯಸಿದೆ. ಇದಕ್ಕಾಗಿ ಇಡೀ ದೆಹಲಿ ಎದುರು ನೋಡುತ್ತಿದೆ.












Click it and Unblock the Notifications