MLAs Salary Hike : ದೆಹಲಿ ಶಾಸಕರ ವೇತನದಲ್ಲಿ 66% ಹೆಚ್ಚಳ: ಬೇರೆ ರಾಜ್ಯಗಳಲ್ಲಿ ಶಾಸಕರ ವೇತನವೆಷ್ಟು? ಮಾಹಿತಿ ಇಲ್ಲಿದೆ
ಸಚಿವರು, ಶಾಸಕರು, ಮುಖ್ಯ ಸಚೇತಕ, ಸ್ಪೀಕರ್ ಮತ್ತು ಉಪಸಭಾಪತಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳಕ್ಕಾಗಿ ಐದು ವಿಭಿನ್ನ ಮಸೂದೆಗಳನ್ನು ಕಳೆದ ವರ್ಷ ಮಂಡಿಸಲಾಗಿತ್ತು.
ನವದೆಹಲಿ, ಮಾರ್ಚ್ 13: ದೆಹಲಿ ಬಜೆಟ್ ಅಧಿವೇಶನ ಮಾರ್ಚ್ 17 ರಿಂದ ಪ್ರಾರಂಭವಾಗಲಿದ್ದು, ಇದರ ಬೆನ್ನಲ್ಲೇ ಶಾಸಕರು ಮತ್ತು ಸಚಿವರ ಸಂಬಳ ಮತ್ತು ಭತ್ಯೆಯನ್ನು ಶೇಕಡಾ 66 ಕ್ಕಿಂತ ಹೆಚ್ಚು ಹೆಚ್ಚಿಸಲಾಗಿದೆ. ದೆಹಲಿ ಸರ್ಕಾರದ ಪ್ರಸ್ತಾವನೆಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದ್ದು, ಈ ಸಂಬಂಧ ದೆಹಲಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ದೆಹಲಿ ಸರ್ಕಾರದ ಕಾನೂನು ಇಲಾಖೆಯ ಅಧಿಸೂಚನೆಯ ಪ್ರಕಾರ, ಶಾಸಕರು ಈಗ ಪ್ರತಿ ತಿಂಗಳು 90,000 ರೂ.ಗಳನ್ನು ಪಡೆಯುತ್ತಾರೆ. ಈ ಹಿಂದೆ ಶಾಸಕರು , ಇದು ಹಿಂದೆ ಒಟ್ಟು 54,000 ರೂಪಾಯಿ ಮಾಸಿಕ ವೇತನ ಪಡೆಯುತ್ತಿದ್ದರು. ಕಳೆದ ವರ್ಷ ಜುಲೈನಲ್ಲಿ, ದೆಹಲಿ ವಿಧಾನಸಭೆಯು ದೆಹಲಿಯ ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಿತ್ತು. ಇವರು ದೇಶದ ಅತ್ಯಂತ ಕಡಿಮೆ ಸಂಭಾವನೆ ಪಡೆಯುವ ಶಾಸಕರು ಎಂಬ ಹೆಸರು ಪಡೆದಿದ್ದಾರೆ.

ಶಾಸಕರ ಮಾಸಿಕ ಮೂಲ ವೇತನವನ್ನು 12,000 ರೂ.ನಿಂದ 30,000 ರೂ.ಗೆ ಹೆಚ್ಚಿಸಲಾಗಿದೆ. ಅವರ ಕ್ಷೇತ್ರದ ಭತ್ಯೆಯನ್ನು 18,000 ರೂ.ನಿಂದ 25,000 ರೂ.ಗೆ ಹೆಚ್ಚಿಸಲಾಗಿದ್ದು, ಸಾರಿಗೆ ಭತ್ಯೆಯನ್ನು 6,000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗಿದೆ. ದೂರವಾಣಿ ಭತ್ಯೆಯನ್ನು 8,000 ರೂ.ನಿಂದ 10,000 ರೂ.ಗೆ ಹೆಚ್ಚಿಸಲಾಗಿದ್ದು, ಸೆಕ್ರೆಟರಿಯೇಟ್ ಭತ್ಯೆಯನ್ನು 10,000 ರೂ.ನಿಂದ 15,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಇದರ ಜೊತೆಗೆ ಸಚಿವರು, ಸ್ಪೀಕರ್ ಮತ್ತು ಉಪಸಭಾಪತಿ, ಮುಖ್ಯ ಸಚೇತಕ ಮತ್ತು ವಿರೋಧ ಪಕ್ಷದ ನಾಯಕರ ಒಟ್ಟಾರೆ ವೇತನವನ್ನು ಮಾಸಿಕ 72,000 ರೂ.ನಿಂದ 1.70 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಅವರ ಮಾಸಿಕ ಮೂಲ ವೇತನವನ್ನು ಈಗಿರುವ 20,000 ರೂ.ನಿಂದ 60,000 ರೂ.ಗೆ ಏರಿಸಲಾಗಿದೆ. ಕ್ಷೇತ್ರದ ಭತ್ಯೆಯನ್ನು 18,000 ರೂ.ನಿಂದ 30,000 ರೂ.ಗಳಿಗೆ, ಸಪ್ಚ್ಯುರಿ ಭತ್ಯೆಯನ್ನು 4,000 ರೂ.ಗಳಿಂದ 10,000 ರೂ.ಗಳಿಗೆ ಮತ್ತು ದಿನಭತ್ಯೆಯನ್ನು 1,000 ರೂ.ನಿಂದ 1,500 ರೂ.ಗೆ ಹೆಚ್ಚಿಸಲಾಗಿದೆ. ಇವರಿಗೆ 25,000 ರೂಪಾಯಿಗಳ ಸೆಕ್ರೆಟರಿಯೇಟ್ ನೆರವು ಕೂಡ ಸಿಗಲಿದೆ.

ಜೊತೆಗೆ ಇವರೆಲ್ಲಾ ಕುಟುಂಬದೊಂದಿಗೆ ವಾರ್ಷಿಕ ಪ್ರವಾಸಕ್ಕೂ ಹಣ ಪಡೆಯುತ್ತಾರೆ, ಇದು ಮೊದಲು 50,000 ರೂ. ಇದ್ದ್ದು ಈಗ ಒಂದು ಲಕ್ಷಕ್ಕ ಏರಿಸಲಾಗಿದೆ. ಮಾಸಿಕ ರೂ 20,000 ಬಾಡಿಗೆ ರಹಿತ ಸುಸಜ್ಜಿತ ವಸತಿ, ಚಾಲಕನೊಂದಿಗೆ ಕಾರಿನ ಉಚಿತ ಬಳಕೆ ಅಥವಾ ಮಾಸಿಕ ರೂ 10,000 ಸಾರಿಗೆ ಭತ್ಯೆ (ಹಿಂದಿನ ರೂ 2,000), ಮತ್ತು ಉಚಿತ ವೈದ್ಯಕೀಯ ಚಿಕಿತ್ಸೆ ಪಡೆಯಲಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ, ದೆಹಲಿ ವಿಧಾನಸಭೆಯು ದೆಹಲಿಯ ಶಾಸಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಮಸೂದೆಗಳನ್ನು ಅಂಗೀಕರಿಸಿತ್ತು. ಇವರು ದೇಶದ ಅತ್ಯಂತ ಕಡಿಮೆ ಸಂಭಾವನೆ ಪಡೆಯುವ ಶಾಸಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿತ್ತು. ಸಚಿವರು, ಶಾಸಕರು, ಮುಖ್ಯ ಸಚೇತಕ, ಸ್ಪೀಕರ್ ಮತ್ತು ಉಪಸಭಾಪತಿ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳಕ್ಕಾಗಿ ಐದು ವಿಭಿನ್ನ ಮಸೂದೆಗಳನ್ನು ಮಂಡಿಸಲಾಯಿತು, ಅದನ್ನು ಸದಸ್ಯರು ಅಂಗೀಕರಿಸಿದರು. ವಿಧೇಯಕಗಳನ್ನು ವಿಧಾನಸಭೆ ಅಂಗೀಕರಿಸಿದ ಬಳಿಕ ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು.
*ಇತರ ರಾಜ್ಯಗಳಲ್ಲಿ ಶಾಸಕರು ಪಡೆಯುವ ವೇತನದ ವಿವರ ಇಲ್ಲಿದೆ*
1. ಕರ್ನಾಟಕ - 2.05 ಲಕ್ಷ ರೂಪಾಯಿ
2. ಉತ್ತರಾಖಂಡ - 2.4 ಲಕ್ಷ ರೂಪಾಯಿ
3. ಮಹಾರಾಷ್ಟ್ರ - 2.32 ಲಕ್ಷ ರೂಪಾಯಿ
4. ತೆಲಂಗಾಣ - 2.5 ಲಕ್ಷ ರೂಪಾಯಿ
5. ಉತ್ತರ ಪ್ರದೇಶ - 1.87 ಲಕ್ಷ ರೂಪಾಯಿ
6. ರಾಜಸ್ಥಾನ - 1.42 ಲಕ್ಷ ರೂಪಾಯಿ
7. ಹಿಮಾಚಲ ಪ್ರದೇಶ - 1.25 ಲಕ್ಷ ರೂಪಾಯಿ
8. ಆಂಧ್ರ ಪ್ರದೇಶ - 1.25 ಲಕ್ಷ ರೂಪಾಯಿ
9. ಗೋವಾ - 1. 70 ಲಕ್ಷ ರೂಪಾಯಿ
10. ಹರಿಯಾಣ- 1.15 ಲಕ್ಷ ರೂಪಾಯಿ
11. ಪಂಜಾಬ್ - 1.10 ಲಕ್ಷ ರೂಪಾಯಿ
12. ಬಿಹಾರ - 1.14 ಲಕ್ಷ ರೂಪಾಯಿ
13. ಪಶ್ಚಿಮ ಬಂಗಾಳ - 1.13 ಲಕ್ಷ ರೂಪಾಯಿ
14. ಜಾರ್ಖಂಡ್ - 1.11 ಲಕ್ಷ ರೂಪಾಯಿ
15. ಮಧ್ಯ ಪ್ರದೇಶ - 1.10 ಲಕ್ಷ ರೂಪಾಯಿ
16. ಛತ್ತೀಸ್ ಗಢ - 1.10 ಲಕ್ಷ ರೂಪಾಯಿ
17. ತಮಿಳುನಾಡು - 1.05 ಲಕ್ಷ ರೂಪಾಯಿ
18. ಸಿಕ್ಕಿಂ - 86 ಸಾವಿರ
19. ಕೇರಳ - 70 ಸಾವಿರ
20. ಗುಜರಾತ್- 1. 27 ಸಾವಿರ
21. ಒಡಿಶಾ- 62 ಸಾವಿರ
22. ಮೇಘಾಲಯ- 59 ಸಾವಿರ
23. ಪುದುಚೇರಿ- 50 ಸಾವಿರ
24. ಅರುಣಾಚಲ ಪ್ರದೇಶ- 49 ಸಾವಿರ
25. ಮಿಜೋರಾಂ- 47 ಸಾವಿರ
26. ಅಸ್ಸಾಂ- 80 ಸಾವಿರ
27. ಮಣಿಪುರ- 37 ಸಾವಿರ
28. ನಾಗಾಲ್ಯಾಂಡ್- 36 ಸಾವಿರ
29. ತ್ರಿಪುರ- 48 ಸಾವಿರ












Click it and Unblock the Notifications