Wedding: ಆ ಹಾಡಿಗೆ ನೃತ್ಯ ಮಾಡಿದ ವರ; ಮದುವೆಯೇ ಕ್ಯಾನ್ಸಲ್!

ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಮಹತ್ವದ ಘಟನೆ. ಮದುವೆ ಎಂದರೆ ಬದುಕಿನ ದೊಡ್ಡ ಸಂಭ್ರಮ, ಇದಕ್ಕಾಗಿಯೇ ಮದುವೆಯಲ್ಲಿ ಹಾಡು, ಕುಣಿತ ಸಾಮಾನ್ಯವಾಗಿರುತ್ತದೆ. ಸೋಷಿಯಲ್ ಮೀಡಿಯಾ ಯುಗದಲ್ಲಿ ಇದು ಇನ್ನೂ ಮುಖ್ಯವಾಗಿದ್ದು ವಧು - ವರ ಕುಣಿಯುತ್ತಾ ವಿಡಿಯೋ ಹಂಚಿಕೊಳ್ಳುವುದು ಸಾಮಾನ್ಯ, ಆದರೆ ಇಲ್ಲೊಬ್ಬ ಮದುವೆ ಸಂಭ್ರಮದಲ್ಲಿದ್ದ ವರನಿಗೆ ಅದೇ ಮುಳುವಾಗಿದೆ.

ಮದುವೆ ವೇಳೆ ಅದೊಂದು ಹಾಡಿಗೆ ವರ ನೃತ್ಯ ಮಾಡಿದ್ದಕ್ಕೆ ಹುಡುಗಿಯ ತಂದೆ ಮದುವೆಯನ್ನೇ ನಿಲ್ಲಿಸಿದ್ದಾರೆ. ದೆಹಲಿಯಲ್ಲಿ ಈ ವಿಲಕ್ಷಣ ಘಟನೆ ನಡೆದಿದ್ದು ಈ ಸುದ್ದಿ ಇದೀಗ ವ್ಯಾಪಕ ವೈರಲ್ ಆಗಿದೆ.

Delhi groom dances choli ke peeche wedding cancelled

ಬಾಲಿವುಡ್‌ನ ಜನಪ್ರಿಯ ಹಾಡುಗಳಲ್ಲಿ ಒಂದಾಗಿರುವ ಚೋಲಿ ಕೆ ಪೀಚೆ ಕ್ಯಾ ಹೈ ಹಾಡಿಗೆ ವರ ನೃತ್ಯ ಮಾಡಿದ್ದೇ ಇದೀಗ ಮದುವೆ ನಿಲ್ಲಲು ಕಾರಣವಾಗಿದೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ಹಾಡಿಗೆ ನೃತ್ಯ ಮಾಡಿದ್ದಕ್ಕೆ ಇದೀಗ ಹುಡುಗನ ಮದುವೆಯೇ ನಿಂತಿದೆ.

ಘಟನೆಯ ವಿವರ

ಮದುವೆ ಗಂಡಿನ ಮೆರವಣಿಗೆಯ ಮೂಲಕ ಮದುವೆಯಾಗುವ ಸ್ಥಳಕ್ಕೆ ಬಂದನು. ಆಗ ಆತನ ಸ್ನೇಹಿತರು ಡ್ಯಾನ್ಸ್ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಅದೇ ಸಮಯದಲ್ಲಿ ಜನಪ್ರಿಯ ಹಿಂದಿ ಗೀತೆಯನ್ನು ಪ್ಲೇ ಮಾಡಲಾಗಿದೆ. ಸ್ನೇಹಿತರ ಒತ್ತಾಯಕ್ಕೆ ಮಣಿದ ವರ ಹಾಡಿಗೆ ನೃತ್ಯ ಮಾಡಲು ಪ್ರಾರಂಭಿಸಿದರು. ಕೆಲವು ಅತಿಥಿಗಳು ಕೂಡ ಚಪ್ಪಾಳೆ, ಕೇಕೆಯೊಂದಿಗೆ ವರನಿಗೆ ಉತ್ತೇಜನ ಕೊಟ್ಟರು. ಆದರೆ ವರನ ನಡವಳಿಕೆ ಹುಡುಗಿಯ ತಂದೆಗೆ ಇಷ್ಟವಾಗದ ಕಾರಣ ಮದುವೆ ನಿಲ್ಲಿಸಲಾಗಿದೆ ಎಂದು ನವಭಾರತ್ ಟೈಮ್ಸ್ ವರದಿ ತಿಳಿಸಿದೆ.

ಹುಡುಗನದ್ದು ಅತರೇಕದ ಪ್ರದರ್ಶನ ಎಂದು ಕೋಪಗೊಂಡ ವಧುವಿನ ತಂದೆ ತಕ್ಷಣ ಸಮಾರಂಭವನ್ನು ನಿಲ್ಲಿಸಿದ್ದು ಮದುವೆಯನ್ನು ರದ್ದು ಮಾಡಿದರು. ವರ ನಡೆದುಕೊಂಡ ರೀತಿಯು ಹುಡುಗಿಯ ಕುಟುಂಬದ ನಂಬಿಕೆಗಳನ್ನು ಅವಮಾನಿಸುತ್ತದೆ ಎಂದು ಹೇಳಿದ್ದು ಮದುವೆ ರದ್ದು ಮಾಡಿದ್ದಾರೆ.

ಮದುವೆ ನಿಲ್ಲುತ್ತಿದ್ದಂತೆ ವಧು ಕಣ್ಣೀರು ಹಾಕಿದ್ದು, ವರನು ಆಕೆಯ ತಂದೆಯ ಮನವೊಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದ್ದಾರೆ. ಇದು ಮದುವೆ ಸಂಭ್ರಮದಲ್ಲಿ ಹಾಗೆ ಮಾಡಿದ್ದಾಗಿ ಸಮಜಾಯಿಷಿ ಕೊಟ್ಟಿದ್ದಾನೆ ಆದರೆ ಇದ್ಯಾವುದನ್ನು ಒಪ್ಪದ ಹುಡುಗಿ ತಂದೆ ಮದುವೆ ರದ್ದುಗೊಳಿಸಿ ಹೋಗಿದ್ದಾರೆ.

ಮದುವೆ ಮುರಿದುಬಿದ್ದ ನಂತರವೂ ಹುಡುಗಿಯ ತಂದೆಯ ಕೋಪ ಕಡಿಮೆಯಾಗಿರಲಿಲ್ಲ. ತಮ್ಮ ಮಗಳು ಮತ್ತು ವರನ ಕಡೆಯವರ ಕುಟುಂಬದ ನಡುವೆ ಯಾವುದೇ ಸಂಪರ್ಕ ಇರಬಾರದು ಎಂದು ತಾಕೀತು ಕೂಡ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ಸದ್ಯ ಈ ಸುದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+