Delhi Exit Poll Results 2025: ಬಹುತೇಕ ಸಮೀಕ್ಷೆಗಳ ಪ್ರಕಾರ ದೆಹಲಿಯಲ್ಲಿ ಬಿಜೆಪಿಗೆ ಗೆಲುವು
Delhi Exit Poll Results 2025: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು (ಫೆಬ್ರವರಿ 05) 70 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸಂಜೆ 6 ಗಂಟೆ ವೇಳೆಗೆ ಮತದಾನ ಮುಕ್ತವಾಗಿದೆ. ಇದರ ಬೆನ್ನಲ್ಲೇ ಹಲವು ಸಂಸ್ಥೆಗಳು ನಡೆಸಿದ ಸಮೀಕ್ಷೆಗಳು ಹೊರಬಿದ್ದು, ಬಹುತೇಕ ಸಂಸ್ಥೆಗಳು ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ತಿಳಿಸಿವೆ.
ನವದೆಹಲಿಯ 70 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಮುಕ್ತಾ ಆಗಿದೆ. ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಬಹುತೇಕ ಸಮೀಕ್ಷೆಗಳು ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿವೆ. ಆದರೆ, ಶನಿವಾರ ಚುನಾವಣಾ ಆಯೋಗದ ಪ್ರಕಾರ ಫಲಿತಾಂಶ ಹೊರಬೀಳಲಿದೆ.

ಸಂಸ್ಥೆಗಳ ಸಮೀಕ್ಷೆಗಳ ವಿವರ ಹೀಗಿದೆ
* ಚಾಣಾಕ್ಯ ಸ್ಟ್ರಾಟೆಜೀಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಎಎಪಿ 25-28, ಬಿಜೆಪಿ 39-44, ಕಾಂಗ್ರೆಸ್ 2-3 ಮತಗಳನ್ನು ಪಡೆಯಲಿವೆ. ಈ ಮೂಲಕ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ.
* ಮಾರ್ಟೈಜ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 35-40, ಎಎಪಿ 32-37, ಕಾಂಗ್ರೆಸ್ 0-1 ಮತಗಳನ್ನು ಪಡೆಯಲಿವೆ.
* ಪೀಪಲ್ ಪಲ್ಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 51-60, ಎಎಪಿ 10-19 ಮತಗಳನ್ನು ಪಡೆಲಿವೆ.
* ಪಿ ಮಾರ್ಕ್ಯೂ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 39-49, ಎಎಪಿ 21-31, ಕಾಂಗ್ರೆಸ್ 0-1 ಮತಗಳನ್ನು ಪಡೆಲಿವೆ.
* ಪೋಲ್ ಆಫ್ ಪೋಲ್ಸ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 38-44, ಎಎಪಿ 25-32, ಕಾಂಗ್ರೆಸ್ 0-2, ಪಕ್ಷೇತರ 0-1 ಮತಗಳನ್ನು ಪಡೆಲಿವೆ.
* JVC ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 39-45, ಎಎಪಿ 22-31, ಕಾಂಗ್ರೆಸ್ 0-2, ಪಕ್ಷೇತರ 0-1 ಮತಗಳನ್ನು ಪಡೆಲಿವೆ.
* ಡಿವಿ ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 36-44, ಎಎಪಿ 26-34 ಮತಗಳನ್ನು ಪಡೆಲಿವೆ.
* People's Insight ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಬಿಜೆಪಿ 40-44, ಎಎಪಿ 25-29, ಕಾಂಗ್ರೆಸ್ 0-1 ಮತಗಳನ್ನು ಪಡೆಲಿವೆ.
ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಶೇಕಡ 57.70ರಷ್ಟು ಮತದಾನವಾಗಿದೆ ಎಂದು ತಿಳಿದುಬಂದಿದೆ. ದೆಹಲಿ ಸೆಂಟ್ರಲ್ ಶೇಕಡ 55.24, ದೆಹಲಿ ಪೂರ್ವ ಶೇಕಡ 58.98, ನವದೆಹಲಿ 57.37, ದೆಹಲಿ ಉತ್ತರ ಶೇಕಡ 57.27, ದೆಹಲಿ ಈಶಾನ್ಯ 63.83, ದೆಹಲಿ ವಾಯುವ್ಯ 58.05, ಶಹದಾರಾ ಶೇಕಡ 61.35, ದೆಹಲಿ ದಕ್ಷಿಣ ಶೇಕಡ 55.72, ದೆಹಲಿ ಆಗ್ನೇಯ ಶೇಕಡ 53.77, ದೆಹಲಿ ನೈಋತ್ಯ 58.86, ದೆಹಲಿ ಪಶ್ಚಿಮ 57.42ರಷ್ಟು ಮತದಾನವಾಗಿದೆ.












Click it and Unblock the Notifications