Delhi Election Result: ಬಿಜೆಪಿ ಆ ಒಂದು ನಿರ್ಧಾರ ಗೆಲುವಿಗೆ ಪ್ರಮುಖ ಕಾರಣ!

Delhi Election Result 2025: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಆಮ್‌ ಆದ್ಮಿ ಪಾರ್ಟಿಯು ಮುಗ್ಗರಿಸಿದೆ. ಬಿಜೆಪಿಯು ಬರೋಬ್ಬರಿ 27 ವರ್ಷಗಳ ನಂತರ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಿದೆ. ಈ ಬಾರಿ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಫೆಬ್ರವರಿ 1ರಂದು ಕೇಂದ್ರ ಬಿಜೆಪಿ ಮಂಡಿಸಿದ ಮಧ್ಯಮ ವರ್ಗದ ಬಜೆಟ್ ಕೆಲಸ ಮಾಡಿದೆ ಎಂದೇ ಹೇಳಲಾಗುತ್ತಿದೆ. ಬಿಜೆಪಿಯ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಪರವಾಗಿ ತೆಗೆದುಕೊಂಡ ಆ ಒಂದು ನಿರ್ಧಾರ ಬಿಜೆಪಿಯ ಗೆಲುವಿಗೆ ಸಹಕಾರಿಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದರ ವಿವರ ನೋಡೋಣ..

ದೆಹಲಿ ವಿಧಾನಸಭೆ ಚುನಾವಣೆ 2025ರಲ್ಲಿ ಬಿಜೆಪಿ ಅಮೋಘ ಸಾಧನೆ ಮಾಡಿದೆ. ಇದಕ್ಕೆ ಹಲವು ಕಾರಣಗಳು ಇವೆ. ಆದರಲ್ಲೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ಫೆಬ್ರವರಿ 1ರಂದು ಮಂಡಿಸಿದ ಮಧ್ಯಮ ವರ್ಗ ಪರವಾದ ಬಜೆಟ್‌ ಗೆಲುವಿಗೆ ಸಹಕಾರಿಯಾಗಿದೆ. ಅಲ್ಲದೆ ಮಧ್ಯಮ ವರ್ಗದ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಲಾಗುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1ರಂದು 12 ಲಕ್ಷದವರೆಗೆ ಆದಾಯ ಇರುವವರಿಗೆ ಆದಾಯ ತೆರಿಗೆ ವಿನಾಯಿತಿ ಘೋಷಿಸಿದ್ದರು. ಇದು ಬಿಜೆಪಿಗೆ ಭಾರೀ ಸಹಕಾರಿಯಾಗಿದೆ. ಚುನಾವಣೆಗೆ ನಾಲ್ಕು ದಿನಗಳು ಇರುವಾಗ ಈ ಬಜೆಟ್‌ ಮಂಡನೆ ಮಾಡಲಾಗಿತ್ತು. ಇದು ಜನರ ಮೇಲೆ ಪ್ರಭಾವ ಬೀರಿದೆ ಎನ್ನಲಾಗುತ್ತಿದೆ.

Delhi Election Result 2025 That one Decision is Main Reason For BJPs Victory

ಮಧ್ಯಮ ವರ್ಗದವರನ್ನು ಸೆಳೆಯುವಲ್ಲಿ ಈ ಪ್ಲ್ಯಾನ್‌ ವರ್ಕ್‌ಔಟ್‌ ಆಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ತೆರಿಗೆ ವಿನಾಯಿತಿ ಮಧ್ಯಮ ವರ್ಗದವರ ಖರ್ಚು ಮಾಡುವ ಶಕ್ತಿಯನ್ನು ಹೆಚ್ಚಿಸಿದೆ. ಇಂದು ಪ್ರಕಟವಾದ ಚುನಾವಣೆ ಫಲಿತಾಂಶದಲ್ಲಿ ಈ ವಿಷಯ ಅತ್ಯಂತ ಸ್ಪಷ್ಟವಾಗಿದೆ.

ಮಧ್ಯಮ ವರ್ಗದ ಮೇಲೆ ಕಣ್ಣು: ಇನ್ನು ಕೇಂದ್ರ ಸರ್ಕಾರವು ಮಧ್ಯಮ ವರ್ಗದ ಮೇಲೆ ಕಣ್ಣಿಟ್ಟಿತ್ತು. ಕೇಂದ್ರದಲ್ಲಿ ಬಜೆಟ್ ಮಂಡನೆ ಮಾಡಿದ ಮೇಲೆ ಆ ವಿಷಯವನ್ನು ದೆಹಲಿ ವಿಧಾನಸಭೆ ಚುನಾವಣೆಗೆ ಸರಿಯಾಗಿ ಬಳಸಿಕೊಳ್ಳಲಾಯಿತು. ಇದು ದೆಹಲಿ ಬಿಜೆಪಿಗೆ ವರದಾನವಾಯಿತು ಎಂದೇ ಹೇಳಬಹುದು. ಬಿಜೆಪಿ ಮಧ್ಯಮ ವರ್ಗ ಸ್ನೇಹಿ ಬಜೆಟ್ 2025 ಮಂಡನೆ ಮಾಡಿದೆ. ಬಿಜೆಪಿ ಮಧ್ಯಮ ವರ್ಗದ ಪರವಾಗಿ ಇದೆ ಎಂದು ದೆಹಲಿ ವಿಧಾನಸಭೆ ಚುನಾವಣೆಯ ಕೊನೆಯ ಹಂತದಲ್ಲಿ ಪ್ರಚಾರ ಮಾಡಲಾಯಿತು. ಇದೇ ವಿಚಾರವಾಗಿ ಬಿಜೆಪಿ ಪತ್ರಿಕಾ ಜಾಹೀರಾತುಗಳನ್ನು ನೀಡಿತ್ತು.

ಇನ್ನು ಮುಖ್ಯವಾಆಗಿ ಲೋಕನೀತಿ-ಸಿಎಸ್‌ಡಿಎಸ್ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ 2015 ಮತ್ತು 2020ರ ವಿಧಾನಸಭಾ ಚುನಾವಣೆಗಳ ನಡುವೆ ಬಡವರು, ಕಡಿಮೆ ಆದಾಯದ ಹಾಗೂ ಮಧ್ಯಮ ಆದಾಯ ಬರುವ ಮತದಾರರ ಮತಗಳನ್ನು ಸೆಳೆಯುವಲ್ಲಿ ಬಿಜೆಪಿ ಮತ್ತು ಎಎಪಿ ನಡುವಿನ ಅಂತರ ಕಡಿಮೆ ಮಾಡಿದೆ. ಇನ್ನು ಈ ವಿಚಾರದಲ್ಲಿ 2020ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ನೋಡುವುದಾದರೆ ಒಟ್ಟು ಮತ ಹಂಚಿಕೆಯಲ್ಲಿ ಎಎಪಿಯು ಬಿಜೆಪಿಗಿಂತ ಶೇಕಡಾ 15 ರಷ್ಟು ಮುಂದಿತ್ತು. ಆದರೆ ಮಧ್ಯಮ ವರ್ಗದ ಮತದಾರರಲ್ಲಿ ಎರಡೂ ಪಕ್ಷಗಳ ನಡುವಿನ ಅಂತರ ಶೇ. 6 ರಷ್ಟಿದೆ. ಈ ಬಾರಿ ಮಧ್ಯಮ ವರ್ಗದವರು ಬಿಜೆಪಿ ಕೈಹಿಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+