Delhi Crime: ದೆಹಲಿಯ ಮಾಳವೀಯಾ ನಗರದ ಅರಬಿಂದೋ ಕಾಲೇಜಿನ ಹೊರಗೆ ಹಾಡುಹಗಲೇ ಯುವತಿಯ ಹತ್ಯೆ

ನವದೆಹಲಿ, ಜುಲೈ 28: ದಕ್ಷಿಣ ದೆಹಲಿಯ ಮಾಳವೀಯ ನಗರದ ಅರಬಿಂದೋ ಕಾಲೇಜಿನ ಹೊರಗೆ ಶುಕ್ರವಾರ 25 ವರ್ಷದ ವಿದ್ಯಾರ್ಥಿನಿಯೊಬ್ಬಳನ್ನು ಹತ್ಯೆ ಮಾಡಲಾಗಿದೆ. ಆಕೆಯ ತಲೆಯ ಮೇಲೆ ಕಬ್ಬಿನದ ರಾಡ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಮದುವೆಯ ಪ್ರಸ್ತಾಪವನ್ನು ನಿರಾಕರಿಸಿದ ಯುವತಿಯನ್ನು 28 ವರ್ಷದ ಯುವಕ ಹತ್ಯೆ ಮಾಡಿದ್ದಾನೆಂದು ವರದಿಯಾಗಿದೆ.

ಯುವತಿಯ ದೇಹವು ಉದ್ಯಾನವನದ ಬೆಂಚಿನ ಪಕ್ಕದಲ್ಲಿ ಬಿದ್ದಿದ್ದು, ಆಕೆಯ ತಲೆಯಿಂದ ರಕ್ತ ಸೋರುತ್ತಿರುವುದು ಕಂಡುಬಂದಿದೆ. ಆಕೆಯ ದೇಹದ ಹತ್ತಿರದಲ್ಲೇ ಕಬ್ಬಿನದ ರಾಡ್ ಬಿದ್ದಿದೆ. ದಾಳಿಯ ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆದರೆ, ಆತನ ಬೆನ್ನಬಿದ್ದ ದೆಹಲಿ ಪೊಲೀಸರು ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Delhi Crime: Student murdered with iron rod in South Delhi park, spurned lover arrested

ಆರೋಪಿಯನ್ನು ಇರ್ಫಾನ್ ಎಂದು ಗುರುತಿಸಲಾಗಿದೆ. ಮಹಿಳೆ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಳು. ಆದ್ದರಿಂದ ಆಕೆಯ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿ ಹೇಳಿದ್ದಾನೆ. ಆರೋಪಿಯ ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹಲ್ಲೆಗೊಳಗಾದ ಯುವತಿ ಇರ್ಫಾನ್ ಜೊತೆ ಪಾರ್ಕ್‌ಗೆ ಹೋಗಿದ್ದಳು. ಆಕೆಯ ತಲೆಯ ಮೇಲೆ ರಾಡ್‌ನಿಂದ ಹೊಡೆದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಪ್ರಾಥಮಿಕ ತನಿಖೆಯ ಪ್ರಕಾರ, ಬಾಲಕಿಯ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ' ಎಂದು ಡಿಸಿಪಿ (ದಕ್ಷಿಣ) ಚಂದನ್ ಚೌಧರಿ ಹೇಳಿದ್ದಾರೆ.

Delhi Crime: Student murdered with iron rod in South Delhi park, spurned lover arrested

'ದಕ್ಷಿಣ ದೆಹಲಿಯ ಮಾಳವೀಯಾ ನಗರದ ಅರಬಿಂದೋ ಕಾಲೇಜು ಬಳಿ 25 ವರ್ಷದ ಯುವತಿಯ ಶವ ಪತ್ತೆಯಾಗಿದೆ ಎಂಬ ಮಾಹಿತಿ ನಮಗೆ ಬಂದಿತು. ಆಕೆ ತನ್ನ ಸ್ನೇಹಿತನೊಂದಿಗೆ ಪಾರ್ಕ್‌ಗೆ ಬಂದಿದ್ದಳು. ಮೃತನ ತಲೆಯ ಮೇಲೆ ಗಾಯಗಳಿವೆ. ಆಕೆಯ ದೇಹದ ಬಳಿ ಕಬ್ಬಿಣದ ರಾಡ್ ಪತ್ತೆಯಾಗಿದೆ' ಎಂದು ಚೌಧರಿ ಮಾಹಿತಿ ನೀಡಿದ್ದಾರೆ.

ಪಶ್ಚಿಮ ದೆಹಲಿಯ ದಾಬ್ರಿಯಲ್ಲಿ 42 ವರ್ಷದ ಮಹಿಳೆಯನ್ನು ಯುವಕನೊಬ್ಬ ಕೊಂದು 24 ಗಂಟೆಗಳ ನಂತರ ಈ ಘಟನೆ ನಡೆದಿದೆ. ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೆಂಬ ಟೀಕೆಗಳು ಕೇಳಿಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+