Delhi Assembly Election 2025: ಸಿ-ವೋಟರ್ ಸಮೀಕ್ಷೆ, ದೆಹಲಿ ಅಧಿಕಾರ ಯಾರಿಗೆ?

ನವದೆಹಲಿ, ಜನವರಿ 29: ದೆಹಲಿ ವಿಧಾನಸಭೆ ಚುನಾವಣೆ-2025ರಲ್ಲಿ ಗೆಲುವು ಯಾರಿಗೆ?. ರಾಷ್ಟ್ರ ರಾಜಧಾನಿಯ ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ. 70 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36.

ಈ ಚುನಾವಣೆಯಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್ ನೇರ ಎದುರಾಳಿಗಳು. 2015, 2020ರಲ್ಲಿ ಗೆದ್ದ ಎಎಪಿ 3ನೇ ಬಾರಿಗೆ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಲಿದೆಯೇ?. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ರಾಷ್ಟ್ರ ರಾಜಧಾನಿಯ ಅಧಿಕಾರ ಹಿಡಿಯಲಿವೆಯೇ? ಎಂಬುದು ಚರ್ಚೆಯ ವಿಚಾರವಾಗಿದೆ.

delhi-assembly

ಸಿ-ವೋಟರ್ ಸಮೀಕ್ಷೆ: ದೆಹಲಿ ವಿಧಾನಸಭೆ ಚುನಾವಣೆ ಕುರಿತು ಸಿ-ವೋಟರ್ ನಡೆಸಿದ ಸಮೀಕ್ಷೆಯ ಪ್ರಕಾರ ಎಎಪಿ ಪುನಃ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ. ಪಕ್ಷ ಶೇ 51ರಷ್ಟು ಮತಗಳನ್ನು ಪಡೆಯುವ ಮೂಲಕ ಕ್ಲೀನ್ ಸ್ವಿಪ್ ಮಾಡಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.

ಮಾಹಿತಿಗಳ ಪ್ರಕಾರ ಈ ಸಮೀಕ್ಷೆಯಲ್ಲಿ 3,200 ಜನರು ಪಾಲ್ಗೊಂಡಿದ್ದಾರೆ. ರಾಯಿಟರ್ಸ್ ವರದಿಯಂತೆ ಅವರು ರಾಜ್ಯದಲ್ಲಿ ಸರ್ಕಾರ ಬದಲಾಗಬಾರದು, ಎಎಪಿಯೇ ಅಧಿಕಾರ ಮುಂದುವರೆಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ನ್ಯೂಸ್ ತಕ್‌ಗೆ ನೀಡಿರುವ ಸಂದರ್ಶನದಲ್ಲಿ ಸಿ-ವೋಟರ್ ಸಂಸ್ಥಾಪಕ ಯಶವಂತ್ ದೇಶಮುಖ್ 2020ರಲ್ಲಿ 100ರಲ್ಲಿ 80 ಮಹಿಳೆಯರು ಎಎಪಿಗೆ ಮತ ನೀಡಿದ್ದರು. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಪಕ್ಷವನ್ನು ಬೆಂಬಲಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಪಕ್ಷಕ್ಕೆ ಮಹಿಳೆಯರ ಬೆಂಬಲ ಹೆಚ್ಚಾಗಿ ಸಿಗಲಿದೆ ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದ್ದಾರೆ.

2024ರ ಲೋಕಸಭೆ ಚುನಾವಣೆಯಲ್ಲಿ 100ರಲ್ಲಿ 65 ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದರು. ಇವರು ಈ ಬಾರಿಯ ದೆಹಲಿ ಚುನಾವಣೆಯಲ್ಲಿಯೂ ಬಿಜೆಪಿಗೆ ಬೆಂಬಲ ಕೊಡುತ್ತಾರೆ. ಶೇ 25ರಷ್ಟು ಜನರು ತಮ್ಮ ಮತವನ್ನು ಬದಲಾವಣೆ ಮಾಡುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿದ್ದಾರೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಮಹಿಳಾ ಮತದಾರರು ಈ ಬಾರಿ ಎಎಪಿಯನ್ನು ಬೆಂಬಲಿಸುವ ನಿರೀಕ್ಷೆ ಇದೆ. 10 ವರ್ಷದ ಆಡಳಿತದಲ್ಲಿ ವಿವಿಧ ಯೋಜನೆ ಜಾರಿಗೊಳಿಸುವಲ್ಲಿ ಎಎಪಿ ಉತ್ತಮ ಕೆಲಸ ಮಾಡಿದ್ದು, ಇದು ಚುನಾವಣೆಯಲ್ಲಿ ಸಹಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮತ್ತೊಂದು ಸಮೀಕ್ಷೆ; ದೆಹಲಿ ಚುನಾವಣೆ ಕುರಿತು ನ್ಯಾಷನಲ್ ಕಾನ್‌ಫೆಡರೇಷನ್ ಆಫ್ ದಲಿತ್, ಆದಿವಾಸಿ ಆರ್ಗನೈಜೇಶನ್ ನಡೆಸಿದ ಸಮೀಕ್ಷೆಯ ಫಲಿತಾಂಶವೂ ಹೊರ ಬಂದಿದೆ. ಎಎಪಿ 35, ಬಿಜೆಪಿ 28 ಮತ್ತು ಕಾಂಗ್ರೆಸ್ 7 ಸೀಟುಗಳಲ್ಲಿ ಜಯಗಳಿಸಲಿದೆ ಎಂದು ಅಂದಾಜಿಸಿದೆ.

ಈ ಸಮೀಕ್ಷೆಯಲ್ಲಿ 6,256 ಜನರು ಪಾಲ್ಗೊಂಡಿದ್ದು, 2,574 ಮಹಿಳೆಯರಿದ್ದರು. ಶೇ 44ರಷ್ಟು ದಲಿತರು ಎಎಪಿಗೆ ಶೇ 32ರಷ್ಟು ಜನರು ಬಿಜೆಪಿಗೆ, ಶೇ 21ರಷ್ಟು ಜನರು ಕಾಂಗ್ರೆಸ್‌ ಬೆಂಬಲಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ದಲಿತರು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕಿಂತ ಕಾಂಗ್ರೆಸ್ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬೆಂಬಲಿಸಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+