Delhi Assembly Elections 2025: ದೆಹಲಿ ಚುನಾವಣೆ: ಅರವಿಂದ್‌ ಕೇಜ್ರಿವಾಲ್ ಬಳಿ ಎಷ್ಟಿದೆ ಆಸ್ತಿ ?

ದೆಹಲಿ ವಿಧಾನಸಭೆ ಚುನಾವಣೆಗೆ ದಿನಾಂಕ ಸಮೀಪಿಸುತ್ತಿರುವಂತೆಯೇ ದೆಹಲಿಯಲ್ಲಿ ಚುನಾವಣೆ ಪ್ರಚಾರ ಅಬ್ಬರದಿಂದ ನಡೆದಿದೆ. ಇದೀಗ ದೆಹಲಿ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವ ಘಟಾನುಘಟಿ ನಾಯಕರು ಅವರ ಬಳಿ ಇರುವ ಆಸ್ತಿ, ಸಾಲ, ಕಾರು ಹಾಗೂ ಬಂಗಲೆಗಳ ವಿವರವನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ದೆಹಲಿಯ ಮಾಜಿ ಮುಖ್ಯ ಅರವಿಂದ್‌ ಕೇಜ್ರಿವಾಲ್ ಅವರು ಅವರ ಬಳಿ ಎಷ್ಟು ಆಸ್ತಿ ಇದೆ ಎನ್ನುವ ಬಗ್ಗೆ ನಾಮಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದೆಹಲಿಯಲ್ಲಿ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಹಾಗೂ ಅಬಕಾರಿ ನೀತಿ ಹಗರಣದಲ್ಲಿ ಜೈಲು ಸೇರಿದ್ದ ಅರವಿಂದ್‌ ಕೇಜ್ರಿವಾಲ್ ಅವರ ಬಳಿ ಇರುವ ಆಸ್ತಿ ಎಷ್ಟು ಎನ್ನುವ ವಿವರ ನೋಡೋಣ...

ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಎಎಪಿ ಸಂಸ್ಥಾಪಕ ಅರವಿಂದ್‌ ಕೇಜ್ರಿವಾಲ್ ಅವರ ಬಳಿ ಎಷ್ಟು ಆಸ್ತಿ ಇದೆ ಎನ್ನುವುದು ಬಹಿರಂಗವಾಗಿದೆ. ಅವರು ಇದೀಗ ತಮ್ಮ ಬಳಿ ಆಸ್ತಿ ಎಷ್ಟಿದೆ ಎನ್ನುವ ವಿವರವನ್ನು ಘೋಷಿಸಿದ್ದಾರೆ. ದೆಹಲಿ ಚುನಾವಣೆ ಹಿನ್ನೆಲೆಯಲ್ಲಿ ಈ ಘೋಷಣೆಯನ್ನು ಮಾಡಿಕೊಂಡಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ಬಳಿ 1.7 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ ಇದೆ. ಇನ್ನು ಅವರ ಪತ್ನಿ ಸುನೀತಾ ಅವರು 1.5 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದೆ. ಕೇಜ್ರಿವಾಲ್ ಅವರ ಬಳಿ 40,000 ಸಾವಿರ ರೂಪಾಯಿ ನಗದು ಇದ್ದರೆ. ಸುನೀತಾ ಕೇಜ್ರಿವಾಲ್ ಅವರ ಹತ್ತಿರ 32,000 ರೂಪಾಯಿ ನಗದು ಇದೆ. ಇನ್ನು ಇವರ ಚರ ಆಸ್ತಿಯು 3.46 ಲಕ್ಷ ರೂಪಾಯಿ ಇದೆ. ಅದೇ , ಸುನೀತಾ ಅವರ ಬಳಿ ಚರ ಆಸ್ತಿ ಬರೋಬ್ಬರಿ 1 ಕೋಟಿ ರೂಪಾಯಿ ಇದೆ.

Delhi Assembly Elections 2025 How Much Property Does Former CM Arvind Kejriwal have

ಸಾಲ ಇಲ್ಲ: ಇನ್ನು ಕ್ರೇಜಿವಾಲ್ ದಂಪತಿಗಳು ಯಾವುದೇ ಸಾಲವನ್ನು ಮಾಡಿಲ್ಲ. ಸುನೀತಾ ಅವರ ಹತ್ತಿರ 320 ಗ್ರಾಂ ಚಿನ್ನ ಹಾಗೂ ಚಿನ್ನದ ಆಭರಣ ಸೇರಿದಂತೆ ಒಟ್ಟು 25.9 ಲಕ್ಷ ರೂಪಾಯಿ ಮೌಲ್ಯದ ಆಭರಣಗಳಿವೆ ಎಂದು ಅಫಿಡವಿಟ್ ಸಲ್ಲಿಸಲಾಗಿದೆ. ಇನ್ನು ಇವರು ಯಾವುದೇ ಸಾಲವನ್ನು ಮಾಡಿಕೊಂಡಿಲ್ಲ ಎಂದು ಹೇಳಲಾಗಿದೆ.

ಸ್ವಂತ ಮನೆ ಇಲ್ಲ, ಕಾರ್‌ ಇಲ್ಲ: ಇನ್ನು ಎರಡು ಬಾರಿ ದೆಹಲಿಯ ಮುಖ್ಯಮಂತ್ರಿಯಾದರೂ ಅರವಿಂದ್‌ ಕ್ರೇಜಿವಾಲ್ ಅವರ ಬಳಿ ಸ್ವಂತ ಮನೆ ಅಥವಾ ಸ್ವಂತ ಕಾರು ಇಲ್ಲ. ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರ ಬಳಿ ಮಾರುತಿ ಬಲೆನೊ ಎನ್ನುವ ಕಾರು ಇದೆ ಎಂದು ಹೇಳಲಾಗಿದೆ.

ಕೇಜ್ರಿವಾಲ್ ವಿರುದ್ಧ 14 ಕ್ರಿಮಿನಲ್ ಪ್ರಕರಣ: ಇನ್ನು ಕ್ರೇಜಿವಾಲ್ ಅವರ ವಿರುದ್ಧ ಒಟ್ಟು 14 ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿವೆ. 2014 ರ ಅಮೇಥಿ ಲೋಕಸಭಾ ಚುನಾವಣೆಯಲ್ಲಿನ ವಿಷಯಕ್ಕೆ ಸಂಬಂಧಿಸಿದ 1 ಪ್ರಕರಣ ಮತ್ತು ದೆಹಲಿ ಅಬಕಾರಿ ನೀತಿಯ ಅನುಷ್ಠಾನ ಮಾಡುವಾಗ ನಡೆದ ಅಕ್ರಮ ಆರೋಪಕ್ಕೆ ಸಂಬಂಧಿಸಿಂತೆ ಸಹ ಇರುವ ಪ್ರಕರಣಗಳು ಪ್ರಮುಕವಾಗಿವೆ. 2020ರ ಚುನಾವಣೆಯಲ್ಲಿ ಸಲ್ಲಿಸಲಾಗಿದ್ದ ಅಫಿಡವಿಟ್‌ನಲ್ಲಿ ಕೇಜ್ರಿವಾಲ್ ಅವರು 13 ಕ್ರಿಮಿನಲ್ ಪ್ರಕರಣಗಳು ಬಾಕಿ ಇರುವ ಬಗ್ಗೆ ಉಲ್ಲೇಖಿಸಿದ್ದರು.

ಫೆಬ್ರವರಿ 5ಕ್ಕೆ ದೆಹಲು ಚುನಾವಣೆ: ಇನ್ನು ಮುಂದಿನ ತಿಂಗಳು 5ಕ್ಕೆ ದೆಹಲಿ ವಿಧಾನಸಭೆ ಚುನಾವಣೆ ನಡೆಯಲಿದೆ. 70 ವಿಧಾನಸಭಾ ಕ್ಷೇತ್ರಗಳಿದ್ದು ಇಲ್ಲಿ ಎಲ್ಲಾ ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತಿವೆ. ಇನ್ನು ಫೆಬ್ರವರಿ 8ಕ್ಕೆ ದೆಹಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+