Get Updates
Get notified of breaking news, exclusive insights, and must-see stories!

Delhi Assembly Election 2025: ದೆಹಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಪ್ರಕಟ

ನವದೆಹಲಿ, ಜನವರಿ 07: ಕೇಂದ್ರ ಚುನಾವಣಾ ಆಯೋಗ ದೆಹಲಿ ವಿಧಾನಸಭೆ ಚುನಾವಣೆ-2025ರ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ. ದೆಹಲಿಯಲ್ಲಿ ಸದ್ಯ ಆಮ್ ಆದ್ಮಿ ಪಕ್ಷ ಅಧಿಕಾರದಲ್ಲಿದೆ. 70 ಸದಸ್ಯ ಬಲದ ದೆಹಲಿ ವಿಧಾನಸಭೆಯ ಅವಧಿ ಫೆಬ್ರವರಿ 23ರಂದು ಅಂತ್ಯಗೊಳ್ಳಲಿದೆ. ರಾಜ್ಯದಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 36.

ಮಂಗಳವಾರ ಪತ್ರಿಕಾಗೋಷ್ಠಿಯನ್ನು ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ದೆಹಲಿ ವಿಧಾನಸಭೆ ಚುನಾವಣೆ-2025ರ ವೇಳಾಪಟ್ಟಿಯನ್ನು ಘೋಷಣೆ ಮಾಡಿದರು. 70 ಸದಸ್ಯ ಬಲದ ವಿಧಾನಸಭೆಗೆ ಒಂದೇ ಹಂತದಲ್ಲಿ ಫೆಬ್ರವರಿ 5ರ ಬುಧವಾರ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ಫೆಬ್ರವರಿ 8ರ ಶನಿವಾರ ಪ್ರಕಟವಾಗಲಿದೆ.

Delhi Assembly Election 2025 Schedule

ದೆಹಲಿ ವಿಧಾನಸಭೆ ಚುನಾವಣೆ ಆಮ್‌ ಆದ್ಮಿ ಪಕ್ಷ, ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಎರಡು ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಎಎಪಿ 3ನೇ ಬಾರಿಯೂ ಚುನಾವಣೆಯಲ್ಲಿ ಜಯಗಳಿಸಿ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ.

ದೆಹಲಿ ವಿಧಾನಸಭೆ ಚುನಾವಣೆ ವೇಳಾಪಟ್ಟಿ: ದೆಹಲಿಯಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು 70. ಇವುಗಳಲ್ಲಿ ಸಾಮಾನ್ಯ 58, ಎಸ್‌ಸಿ 12. ಪ್ರಸ್ತುತ ಇರುವ ವಿಧಾನಸಭೆಯ ಅವಧಿ 23, 2025ರಂದು ಮುಕ್ತಾಯಗೊಳ್ಳಲಿದೆ.

ಒಟ್ಟು ಮತಗಟ್ಟೆಗಳು 13,033. 2697 ಪ್ರದೇಶಗಳಲ್ಲಿ ಇವುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ಇವುಗಳಲ್ಲಿ ನಗರ ಪ್ರದೇಶ 13,033. ಪ್ರತಿ ಮತಗಟ್ಟೆಗೆ 1191 ಮತದಾರರು ಇರಲಿದ್ದಾರೆ. ಮಹಿಳೆಯರು 70, ಅಂಗವಿಕಲರು 70 ಮತಗಟ್ಟೆಗಳನ್ನು ನಿರ್ವಹಣೆ ಮಾಡಲಿದ್ದಾರೆ.

ಒಟ್ಟು ಮತದಾರರು 1.55 ಕೋಟಿ (6/1/2025ಕ್ಕೆ ಅನ್ವಯವಾಗುವಂತೆ). ಪುರುಷರು 83.49 ಲಕ್ಷ, 71.74 ಲಕ್ಷ ಮಹಿಳೆಯರು, 25.89 ಲಕ್ಷ (20-29) ಯುವ ಮತದಾರರು. ಮೊದಲ ಬಾರಿಯ ಮತದಾರರು 2.08 ಲಕ್ಷ. ಅಂಗವಿಕಲರು 79,436, 100 ವರ್ಷ ಮೀರಿದ 830, ತೃತೀಯ ಲಿಂಗಿಗಳು 1,261, 85 + ವಯಸ್ಸಿನ 1.09 ಲಕ್ಷ.

ಚುನಾವಣೆ ವೇಳಾಪಟ್ಟಿ

* 10/1/2025ರಂದು ಚುನಾವಣಾ ಅಧಿಸೂಚನೆ ಪ್ರಕಟ
* 17/1/2025 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನ
* 18/1/2025 ನಾಮಪತ್ರಗಳ ಪರಿಶೀಲನೆ
* 20/1/2025 ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ
* 5/2/2025 (ಬುಧವಾರ) ಮತದಾನ
* 8/2/2025 (ಶನಿವಾರ) ಮತ ಎಣಿಕೆ
* 10/2/2025 ಚುನಾವಣಾ ಪ್ರಕ್ರಿಯೆ ಮುಕ್ತಾಯ

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಚುನಾವಣಾ ಪ್ರಕ್ರಿಯೆಗಳ ಕುರಿತು ಹಲವು ಅನುಮಾನಗಳಿವೆ. ಇವುಗಳಿಗೆ ದೆಹಲಿ ಚುನಾವಣೆ ಮೂಲಕ ಮತ್ತೆ ಉತ್ತರ ನೀಡಲಾಗುತ್ತದೆ. 5 ಗಂಟೆಯ ಬಳಿಕ ಮತದಾನ ಪ್ರಮಾಣ ಹೆಚ್ಚಾಗುತ್ತದೆ, ಇವಿಎಂ ಬಗ್ಗೆಯೂ ಹಲವು ಅನುಮಾನ ವ್ಯಕ್ತಪಡಿಸಲಾಗುತ್ತಿದೆ. 2024ರ ಲೋಕಸಭೆ ಚುನಾವಣೆ ಬಳಿಕ ಈ ಮಾದರಿ ಎಲ್ಲಾ ಗೊಂದಲಗಳನ್ನು ಬಗೆಹರಿಸಲಾಗಿದೆ ಎಂದು ಹೇಳಿದರು.

2020ರಲ್ಲಿ ಬಿಹಾರ, 2021ರಲ್ಲಿ 5, 2022ರಲ್ಲಿ 7, 2023ರಲ್ಲಿ 9, 2024ರಲ್ಲಿ 8 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಚುನಾವಣೆಗಳನ್ನು ನಡೆಸಲಾಗಿದೆ. ಬೇರೆ-ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದಿವೆ. ಇದು ಪ್ರಜಾಪ್ರಭುತ್ವದ ಸುಂದರ ಕ್ಷಣಗಳು ಎಂದು ರಾಜೀವ್ ಕುಮಾರ್ ತಿಳಿಸಿದರು.

ಚುನಾವಣಾ ಪ್ರಕ್ರಿಯೆ, ಮತದಾನ ಪಾರದರ್ಶಕವಾಗಿ ನಡೆಯುತ್ತಿದೆ. ಯಾವುದೇ ವೈರಸ್ ಬಳಕೆ ಮಾಡಿಕೊಂಡು ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ. ಇದನ್ನು ಪದೇ ಪದೇ ಹೇಳಲಾಗುತ್ತಿದೆ. ಮತ್ತೆ ಮತ್ತೆ ಸ್ಪಷ್ಟನೆಗಳನ್ನು ನೀಡಲಾಗುತ್ತದೆ ಎಂದು ರಾಜೀವ್ ಕುಮಾರ್ ಸ್ಪಷ್ಟಪಡಿಸಿದರು.

ಪಾರದರ್ಶಕ ಚುನಾವಣೆ ನಡೆಸುವುದು ನಮ್ಮ ಜವಾಬ್ದಾರಿ, ಕರ್ತವ್ಯ. ಸಂಜೆ 6 ಗಂಟೆಯ ಬಳಿಕ ಮತಗಟ್ಟೆ ಹೊರಗೆ ನಿಂತ ಎಲ್ಲರಿಗೂ ಟೋಕನ್ ವಿತರಣೆ ಮಾಡಿ ಅವರ ಮತಗಳನ್ನು ಪಡೆದು, ಮತದಾನವನ್ನು ಮುಕ್ತಾಯ ಮಾಡಲಾಗುತ್ತದೆ ಎಂದು ರಾಜೀವ್ ಕುಮಾರ್ ಹೇಳಿದರು.

ಎಎಪಿ ಪಕ್ಷ ದೆಹಲಿ ವಿಧಾನಸಭೆ ಚುನಾವಣೆಗೆ ಎಲ್ಲಾ 70 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ಸೇರಿ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಚುನಾವಣೆ ನಡೆಯುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+