Delhi Elections 2025: ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್ : ಕರ್ನಾಟಕದಿಂದ ಒಬ್ಬರು ಸ್ಟಾರ್ ಕ್ಯಾಂಪೇನರ್ ಆಗಿ ಆಯ್ಕೆ

ನವದೆಹಲಿ ,ಜನವರಿ 20: ದೆಹಲಿ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯ ಬೆನ್ನಲ್ಲೇ ಕಾಂಗ್ರೆಸ್ವ, ಬಿಜೆಪಿ ಹಾಗೂ ಎಎಪಿ ಭರ್ಜರಿ ತಯಾರಿ ನಡೆಸುತ್ತಿದೆ. ದೆಹಲಿಯಲ್ಲಿ ಕಾಂಗ್ರೆಸ್‌, ಬಿಜೆಪಿ ಹಾಗೂ ಎಎಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಫೆಬ್ರವರಿ 5 ನಡೆಯುವ ಚುನಾವಣೆಗೆ ಕಾಂಗ್ರೆಸ್‌ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದು, ಇಂದು ಸ್ಟಾರ್‌ ಪ್ರಚಾರಕರ ಪಟ್ಟಿಯನ್ನ ಬಿಡುಗಡೆ ಮಾಡಿದೆ.

ದೆಹಲಿ ವಿಧಾನಸಭಾ ಚುನಾವಣೆಯ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್​ ಸ್ಟಾರ್ ಕ್ಯಾಂಪೇನರ್ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೂ ಸ್ಟಾರ್ ಕ್ಯಾಂಪೇನರ್ ಆಗಿ ಆಯ್ಕೆಯಾಗಿದ್ದಾರೆ.

Delhi Assembly Election 2025 Congress Releases List Of Star Campaigners

ಸ್ಟಾರ್‌ ಪ್ರಚಾರಕರ ಪಟ್ಟಿ ಇಲ್ಲಿದೆ

* ಮಲ್ಲಿಕಾರ್ಜುನ ಖರ್ಗೆ
* ಡಿ.ಕೆ. ಶಿವಕುಮಾರ್
* ಅಮರಿಂದರ್ ಸಿಂಗ್ ರಾಜಾ ವೇರಿಂಗ್
* ಸೋನಿಯಾ ಗಾಂಧಿ
* ರಾಹುಲ್ ಗಾಂಧಿ
* ಅಖಿಲೇಶ್ ಪ್ರಸಾದ್ ಸಿಂಗ್
* ಸಲ್ಮಾನ್ ಖುರ್ಷಿದ್
* ಪ್ರಿಯಾಂಕಾ ಗಾಂಧಿ ವಾದ್ರಾ
* ಜೆ.ಪಿ. ಅಗರ್ವಾಲ್
* ಕೆ.ಸಿ. ವೇಣುಗೋಪಾಲ್
* ಪವನ್ ಖೇರಾ
* ಅಜಯ್ ಮಾಕೆನ್
* ಇಮ್ರಾನ್ ಪ್ರತಾಪ್‌ಗಢಿ
* ಖಾಜಿ ನಿಜಾಮುದ್ದೀನ್
* ಕನ್ಹಯ್ಯಾ ಕುಮಾರ್
* ದೇವೇಂದರ್ ಯಾದವ್
* ಸುಪ್ರಿಯಾ ಶ್ರಿನಾಟೆ
* ಅಶೋಕ್ ಗೆಹ್ಲೋಟ್
* ಮಿಸ್. ಅಲ್ಕಾ ಲಾಂಬಾ
* ಹರೀಶ್ ರಾವತ್
* ಇಮ್ರಾನ್ ಮಸೂದ್
* ಮುಕುಲ್ ವಾಸ್ನಿಕ್
* ಸಂದೀಪ್ ದೀಕ್ಷಿತ್
* ಮಿಸ್ ಸೆಲ್ಜಾ
* ಸುಭಾಷ್ ಚೋಪ್ರಾ
* ರಣದೀಪ್ ಸಿಂಗ್ ಸುರ್ಜೆವಾಲ
* ಚೌಧರಿ ಅನಿಲ್ ಕುಮಾರ್
* ಸಚಿನ್ ಪೈಲಟ್
* ರಾಜೇಶ್ ಲಿಲೋಥಿಯಾ
* ಸುಖವಿಂದರ್ ಸಿಂಗ್ ಸುಖು
* ಡಾ. ಉದಿತ್ ರಾಜ್
* ಎ. ರೇವಂತ್ ರೆಡ್ಡಿ
* ಅಭಿಷೇಕ್ ದತ್
* ಹರೂನ್ ಯೂಸುಫ್
* ಭೂಪೇಶ್ ಬಘೇಲ್
* ಸುಖ್‌ಪಾಲ್ ಸಿಂಗ್ ಖೈರಾ
* ಚರಂಜಿತ್ ಸಿಂಗ್ ಚನ್ನಿ
* ಜಿಗ್ನೇಶ್ ಮೇವಾನಿ
* ದೀಪೇಂದರ್ ಸಿಂಗ್ ಹೂಡಾ
* ರಾಜೇಂದ್ರ ಪೈ ಗೌತಮ್

ಬಿಜೆಪಿ ಸ್ಟಾರ್ ಪ್ರಚಾರಕ ಪಟ್ಟಿ

ದೆಹಲಿ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನ ಬಿಡುಗಡೆ ಮಾಡಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಏಳು ಮುಖ್ಯಮಂತ್ರಿಗಳು ಪಟ್ಟಿಯಲ್ಲಿ ಇದ್ದಾರೆ. ಆದರೆ, ಕರ್ನಾಟಕದಿಂದ ಯಾರು ಸಹ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಮನೋಹರ್ ಲಾಲ್ ಖಟ್ಟರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಹರ್ದೀಪ್ ಸಿಂಗ್ ಪುರಿ ಮತ್ತು ಗಿರಿರಾಜ್ ಸಿಂಗ್ ಅವರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ.

ಭೋಜ್‌ಪುರಿ ತಾರೆಯರು, ಸಂಸದರಾದ ಮನೋಜ್ ತಿವಾರಿ ಮತ್ತು ರವಿ ಕಿಶನ್, ಮತ್ತು ದಿನೇಶ್ ಲಾಲ್ ಯಾದವ್ ನಿರಾಹುವಾ ಸೇರಿದಂತೆ ಪೂರ್ವಾಂಚಲಿ ನಾಯಕರೂ ಇದ್ದಾರೆ. ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರದ ಜನರು ರಾಷ್ಟ್ರ ರಾಜಧಾನಿಯಲ್ಲಿ ಗಣನೀಯ ಮತಬ್ಯಾಂಕ್ ಆಗಿದ್ದಾರೆ. ದೆಹಲಿಯಲ್ಲಿ ಪ್ರಚಾರ ಮಾಡಲಿರುವ ಏಳು ಮುಖ್ಯಮಂತ್ರಿಗಳೆಂದರೆ ದೇವೇಂದ್ರ ಫಡ್ನವಿಸ್, ಹಿಮಂತ ಬಿಸ್ವಾ ಶರ್ಮಾ, ಪುಷ್ಕರ್ ಸಿಂಗ್ ಧಾಮಿ, ಯೋಗಿ ಆದಿತ್ಯನಾಥ್, ಭಜನ್ ಲಾಲ್ ಶರ್ಮಾ, ನಯಾಬ್ ಸಿಂಗ್ ಸೈನಿ ಮತ್ತು ಮೋಹನ್ ಯಾದವ್ ಪಟ್ಟಿಯಲ್ಲಿದ್ದಾರೆ.

ದೆಹಲಿಯ ಎಲ್ಲಾ ಏಳು ಸಂಸದರು, ದೆಹಲಿ ಬಿಜೆಪಿ ಉಸ್ತುವಾರಿ ಬೈಜಯಂತ್ ಪಾಂಡಾ, ಸಹ-ಪ್ರಭಾರಿ ಅಲ್ಕಾ ಗುರ್ಜಾರ್ ಮತ್ತು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ವೀರೇಂದ್ರ ಸಚ್‌ದೇವ ಅವರು ಚುನಾವಣೆಯ ಸ್ಟಾರ್ ಪ್ರಚಾರಕರಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+