Delhi Assembly Election 2025: ಇಂಡಿಯಾ ಮೈತ್ರಿಪಕ್ಷಗಳು ಬೇರ್ಪಟ್ಟಿವೆ: ಬಿಜೆಪಿ ಗೆಲುವು ನಿಶ್ಚಿತ: ಅಮಿತ್ ಶಾ
ನವದೆಹಲಿ, ಜನವರಿ 13: ದೆಹಲಿ ಚುನಾವಣೆ ಘೋಷಣೆ ಬೆನ್ನಲ್ಲೆ ಇಂಡಿಯಾ ಮೈತ್ರಿಕೂಟ ಪಕ್ಷಗಳ ಭವಿಷ್ಯ ಕುರಿತು ಮಾತನಾಡಿರುವ ಅಮಿತ್ ಶಾ ಅವರು, ದೆಹಲಿಯಲ್ಲಿ ಬಿಜೆಪಿ ಗೆಲ್ಲಲಿದೆ. ಮುಂಬೈ ಸ್ಥಳೀಯ ಚುನಾವಣೆ, ಪಶ್ಚಿಮ ಬಂಗಾಳ ಚುನಾವಣೆಗಳು ಎದುರಾಗಿದ್ದು, ಇಂಡಿಯಾ ಮೈತ್ರಿಕೂಟದ ಸ್ಥಿತಿ ಏನಾಗಿದೆ?. ಈಗಲೇ ಹೀಗಾದರೆ, ಚುನಾವಣೆ ಸಂದರ್ಭದಲ್ಲಿ ಹಿನ್ನಡೆ ಅನುಭವಿಸುವುದು ಖಚಿತ ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿ ಅಮಿತ್ ಶಾ ಅವರು, ಕೇಂದ್ರದ ವಿರುದ್ಧ ಮೈತ್ರಿ ಪಕ್ಷಗಳು ಒಂದಾಗಿದ್ದವು. ಆದರೆ ದೆಹಲಿ ಚುನಾವಣೆಯಲ್ಲಿ ಇಂಡಿಯಾ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷವು ಪ್ರತ್ಯೇಕವಾಗಿ ಸ್ಪಧಿಸುತ್ತಿವೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹಾಗೂ ಕಾಂಗ್ರೆಸ್ ಬೇರ್ಪಟ್ಟಿವೆ. ಇದೆಲ್ಲ ನೋಡಿದರೆ, ಇಂಡಿಯಾ ಮೈತ್ರಿ ಬೇರ್ಪಟ್ಟಿವೆ. ಹೀಗಾಗಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರು ಭವಿಷ್ಯ ನುಡಿದಿದ್ದಾರೆ.

ದೆಹಲಿ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಬಹುತೇಕ ಖಚಿತವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭರ್ಜರಿ ಗೆಲುವು ದಾಖಲಿಸಲಿದೆ. ಎಎಪಿ ಕನಸು, ಇಂಡಿಯಾ ಮೈತ್ರಿ ಕನಸನ್ನು ಭಗ್ನಗೊಳಿಸುತ್ತೇವೆ. ಫೆಬ್ರವರಿ 08ರಂದು ಬರುವ ಫಲಿತಾಂಶ ದಿನ ಸಂಭ್ರಮಾಚರಣೆ, ಪಟಾಕಿ ಸಿಡಿಸಲು ಸಜ್ಜಾಗಿದೆ ಎಂದು ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಬಿಜೆಪಿಯು ದೆಹಲಿ ಅಸೆಂಬ್ಲಿ ಚುನಾವಣೆ ಎದುರಿಸಿ ಗೆಲ್ಲುವ ಜೊತೆಗೆ ಮತ್ತೆ ವಿಜಯಪತಾಕೆ ಹಾರಿಸಲಿದೆ. ಇಲ್ಲಿಂದ ಮತ್ತೊಂದು ಹಂತದ ವಿಜಯ ಬಿಜೆಪಿ ಸಾಧಿಸಲಿದೆ ಎಂದು ಅವರು ಹೇಳಿದರು.
ಭರವಸೆ ನೀಡಿ ಮತ ಸೆಳಯಲು 'ಕೈ' ಯತ್ನ
ಇಂಡಿಯಾ ಮೈತ್ರಿಕೂಟದ ಜೊತೆಗೆ ಸ್ಪರ್ಧಿಸಲು ಮುಂದಾಗದ ಕಾಂಗ್ರೆಸ್ ದೆಹಲಿಯಲ್ಲಿ ಮತ್ತೆ ಅಸ್ತಿತ್ವ ಸಾಧಿಸಲು ಹಲವು ಭರವಸೆಗಳನ್ನು ಘೋಷಿಸಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ, ತೆಲಂಗಾಣದಲ್ಲಿ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಮತ್ತದೇ ಕೆಲಸ ಮಾಡುತ್ತಿದೆ. ಮತಗಳನ್ನು ಆಕರ್ಷಿಸುತ್ತಿದೆ.
ಇತ್ತ ಬಿಜೆಪಿ ಸಹ ಪ್ಲಾನ್ ಮಾಡಿಕೊಂಡಿದ್ದು, ಬಿಜೆಪಿ, ಎಎಪಿಯಂತೆ ಈ ಬಾರಿ ಬಿಎಸ್‌ಪಿ ಪಕ್ಷವು ಪ್ರತ್ಯೇಕ ಸ್ವತಂತ್ರ ಪಕ್ಷವಾಗಿ ದೆಹಲಿಯಲ್ಲಿ ಸ್ಪರ್ಧಿಸಲಿದೆ. ದೆಹಲಿ ಅಸೆಂಬ್ಲಿ ಚುನಾವಣೆಯು ಫೆಬ್ರವರಿ 05ರಂದು ನಡೆಯಲಿದೆ. ಫೆಬ್ರವರಿ 08ರಂದು ಮತ ಎಣಿಕೆ ನಡೆಯಲಿದ್ದು, ಮಧ್ಯಾಹ್ನ ಹೊತ್ತಿಗೆ ಫಲಿತಾಂಶ ಪ್ರಕಟಗೊಳ್ಳಲಿದೆ.












Click it and Unblock the Notifications